- ಎಸ್. ಪಿ. ತೇಜರಾಜು.
ಬದಲಾವಣೆ ಜಗದ ನಿಯಮ ಹೀಗೆ ನಮ್ಮ ಸುತ್ತಮುತ್ತಲ ಆಗುತ್ತಿರುವ ಬದಲಾವಣೆಗಳೊಂದಿಗೆ ನಾವೆಲ್ಲರೂ ಬೆರೆತುಕೊಂಡಿದ್ದೇವೆ ಆದರೆ ಈ ಬದಲಾವಣೆಗಳಿಂದ ನಮ್ಮಲ್ಲಿ ಆದಂತಹ ಬದಲಾವಣೆಗಳನ್ನು ಗುರುತಿಸುವುದರಲ್ಲಿ ನಾವು ಸೋತಿದ್ದೇವೆ. ಟೆಕ್ನಾಲಜಿ ಎಂಬ ಈ ಯುಗದಲ್ಲಿ ನಾವೆಲ್ಲರೂ ಮುಳುಗಿಹೋಗಿದೆ. ಮೊಬೈಲೇ ಪ್ರಪಂಚ ಇಂಟರ್ನೆಟ ಜೀವವಾಗಿದೆ. ಇಂದಿನ ದಿನದ ಇಂಟರ್ನೆಟ್ ಮುಗಿದು ಹೋಯಿತಲ್ಲ ಎಂದೆ ತಲೆ ಕೆಡಿಸಿಕೊಳ್ಳುತ್ತಿದ್ದೇವೆ.
ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ನಮ್ಮ ಸನಾತನ ಸಂಸ್ಕೃತಿಯನ್ನು ಬೇರೆ ದೇಶಗಳು ಅಳವಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ನಾವು ನಮಗೆ ತಿಳಿಯದ ಹಾಗೆ ವಿದೇಶಿ ಸಂಸ್ಕೃತಿಗೆ ಒಗ್ಗಿಕೊಂಡಿದ್ದೇವೆ. ನಮ್ಮ ಪೂರ್ವಜರು ಅನುಸರಿಸುತ್ತಿದ್ದಂತಹ ಈ ಸನಾತನ ಸಂಸ್ಕೃತಿಯು ವಿಶಿಷ್ಟ ಸ್ಥಾನಮಾನಗಳನ್ನು ಪಡೆಯಲು ಮುಖ್ಯವಾದ ವಿಷಯವೆಂದರೆ ನಿಸರ್ಗ ಸ್ನೇಹಿ ಜೀವನ ಹಾಗೂ ಅವರ ಅಪಾರ ಅನುಭವದ ಜ್ಞಾನಭಂಡಾರ.
ಈ ನಿಸರ್ಗ ಸ್ನೇಹಿ ಜೀವನ ಬಹಳಷ್ಟು ಸ್ವಾರಸ್ಯಮಯವಾಗಿರಲು ಮುಖ್ಯ ಕಾರಣಗಳೆಂದರೆ:
1. ನಮ್ಮ ಪೂರ್ವಜರು ಮನೆಗಳನ್ನು ಮಣ್ಣಿನ ಗೋಡೆಗಳಿಂದ ಕಟ್ಟುತ್ತಿದ್ದರು ಹಾಗೂ ಇದಕ್ಕೆ ಬಳಸುತ್ತಿದಂತಹ ಹೆಂಚುಗಳನ್ನು ಕೂಡ ಮಣ್ಣಿನಿಂದಲೇ ತಯಾರಾಗುತ್ತಿತ್ತು ತಾನೊಬ್ಬನೇ ಮನೆಯಲ್ಲಿ ವಾಸಿಸದೇ ಗುಬ್ಬಚ್ಚಿಗಳಂತಹ ಸಣ್ಣಪುಟ್ಟ ಪಕ್ಷಿಗಳಿಗೂ ಆಸರೆಯನ್ನು ನೀಡಿದ್ದರು.
2. ಮನೆಯ ಅಲಂಕಾರಕ್ಕಾಗಿ ನಿಸರ್ಗ ಸ್ನೇಹಿ ಬಣ್ಣಗಳನ್ನು ಉಪಯೋಗಿಸುತ್ತಿದ್ದರು.
3. ತನ್ನೆಲ್ಲಾ ಗೃಹ ಹಾಗೂ ಕೃಷಿ ಕೆಲಸಗಳಿಗೆ ಬಿದುರಿನ ಬುಟ್ಟಿಗಳನ್ನು ಉಪಯೋಗಿಸುತ್ತಿದ್ದರು.
4. ಗಿಡಮೂಲಿಕೆ ಸಸ್ಯಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದು ತನಗಾದಂತಹ ಸಣ್ಣಪುಟ್ಟ ಕಾಯಿಲೆಗಳಿಗೆ ಗಿಡದ ಬೇರನ್ನು ಅಥವಾ ಸೊಪ್ಪಿನ ಕಷಾಯ ಮಾಡಿ ಕುಡಿಯುತ್ತಿದ್ದರು, ತರಚಿದ ಗಾಯಗಳಿಗೆ ತುಂಬೆ ರಸವನ್ನು ಸವಾರಿ ಗಾಯವನ್ನು ಗುಣಪಡಿಸಿಕೊಳ್ಳುತ್ತಿದ್ದರು.
5. ಪ್ರತಿಯೊಬ್ಬರೂ ನದಿಯಲ್ಲಿ ಸ್ನಾನ ಮಾಡುತ್ತಿದ್ದರಿಂದ ಈಜುವುದನ್ನು ಕಲಿತಿದ್ದರು, ವಿಧವಿಧವಾದಂತಹ ಮೀನುಗಳ ಪ್ರಭೇದಗಳನ್ನು ಗುರುತು ಹಿಡಿಯುತ್ತಿದ್ದರು, ನೀರಿನಲ್ಲಿ ಮುಳುಗಿ ಪ್ರಾಣಾಪಾಯದಲ್ಲಿರುವವರನ್ನು ರಕ್ಷಿಸುತ್ತಿದ್ದರು, ಕೆಲವು ಸಂದರ್ಭಗಳಲ್ಲಿ ಪಕ್ಕದ ಊರುಗಳಿಗೆ ನದಿಯಲ್ಲಿ ಈಜಿ ತಲುಪುತ್ತಿದ್ದರು ಹಾಗೂ ಸ್ನಾನಕ್ಕೆ ಅಂಟುವಾಳದ ಬೀಜಗಳನ್ನು ನೈಸರ್ಗಿಕ ಸಾಬೂನು ಗಳನ್ನಾಗಿ ಉಪಯೋಗಿಸುತ್ತಿದ್ದರು.
6. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಮರ ಹತ್ತುವುದನ್ನು ಕಲಿತಿದ್ದರು ತನಗೆ ಬೇಕಾದಂತಹ ಹಣ್ಣುಗಳನ್ನು ಮರದಿಂದಲೇ ಕಿತ್ತು ತಿನ್ನುತ್ತಿದ್ದರು.
7. ಜೇನಿನ ವಿಧಗಳು ಹಾಗೂ ಅವುಗಳ ಚಲನವಲನಗಳನ್ನು ಗುರುತಿಸಿ ಜೇನುತುಪ್ಪವನ್ನು ಬಿಡಿಸುವಂತಹ ಕಲೆಯನ್ನು ಅರಿತಿದ್ದರು.
8. ರಾತ್ರಿಯ ಬೆಳಕಿಗಾಗಿ ಎಣ್ಣೆ ದೀಪಗಳನ್ನು ಬಳಸುತ್ತಿದ್ದರು.
9. ತನ್ನ ಪ್ರಯಾಣ ಸುಖಮಯವಾಗಿರಲಿ ಎಂದು ಹಾದಿಯುದ್ದಕ್ಕೂ ಮರಗಳನ್ನು ಬೆಳೆಸಿದ್ದರು, ದೂರದ ಊರುಗಳಿಗೆ ನಡಿಗೆಯಲೋ, ಎತ್ತಿನ ಗಾಡಿಯಲೋ, ಸೈಕಲ್ನನಲ್ಲೂ ಸಂಚರಿಸುತ್ತಿದ್ದರಿಂದ ಆರೋಗ್ಯವಂತರಾಗಿದ್ದರು.
10. ಕಾಡುಗಳಲ್ಲಿ ಸಂಚರಿಸುವಾಗ ಪ್ರಾಣಿಗಳಿಂದ ಆಗಬಹುದಾದಂತಹ ಅಪಾಯಗಳಿಂದ ತಪ್ಪಿಸಿಕೊಳ್ಳುವ ಕಲೆಯನ್ನು ಕಲಿತಿದ್ದರೂ.
11. ಉರುವಲಿಗಾಗಿ ಕಾಡುಗಳಲ್ಲಿ ಬಿದ್ದಂತಹ ಮರವನ್ನು ಉಪಯೋಗಿಸುತ್ತಿದ್ದರು.
12. ಮನೆಯ ಹೊರಾಂಗಣವನ್ನು ಸಗಣಿಯಲ್ಲಿ ಸಾಯಿಸುತ್ತಿದ್ದರಿಂದ ಮನೆಯೊಳಗೆ ಬರುತ್ತಿದ್ದಂತಹ ಕ್ರಿಮಿಕೀಟಗಳು ನಿಯಂತ್ರಣದಲ್ಲಿದ್ದವು.
13. ತನ್ನ ಘನ ಪರಂಪರೆ ಸಂಸ್ಕೃತಿಗೆ ಹೆಚ್ಚು ಗೌರವ ಕೊಡುತ್ತಿದ್ದರು.
14. ಭೂಮಿತಾಯಿಯನ್ನು ಸಂಪೂರ್ಣವಾಗಿ ನಂಬಿದ್ದರು ತನಗೆ ಬೇಕಾದಂತಹ ಬೆಳೆಗಳನ್ನು ತಾನೇ ಬೆಳೆದುಕೊಂಡು ಹೆಚ್ಚಾಗಿದ್ದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದರು.
15. ಪೌಷ್ಟಿಕ ಆಹಾರ ಸೇವನೆಯಿಂದ ಹೆಚ್ಚು ಸದೃಢ ರಾಗಿದ್ದರು.
16. ಆಹಾರ ತಯಾರಿಕೆಗೆ ಮಣ್ಣಿನ ಪಾತ್ರೆಗಳು, ಜಾಡಿಗಳು,ಪಿಂಗಾಣಿಯನ್ನುಉಪಯೋಗಿಸುತ್ತಿದ್ದರು ಪಾತ್ರೆಗಳನ್ನು ತೊಳೆಯಲು ಬೂದಿಯನ್ನು ಉಪಯೋಗಿಸುತ್ತಿದ್ದರು.
17. ಭೋಜನಕ್ಕೆ ಬಾಳೆ ಎಲೆಗಳನ್ನು ಉಪಯೋಗಿಸುತ್ತಿದ್ದರು.
18. ತಾನು ವಾಸಿಸುತ್ತಿದ್ದ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಗೌರವ ಸಂಪಾದಿಸಿದ್ದರು.
19. ಮನೋರಂಜನೆಗೆ ಭಜನೆ, ಜಾತ್ರೆ, ಪ್ರವಚನ, ಕಂಸಾಳೆ, ಕಂಬಳ, ಭೂತರಧನೆ, ಪೂಜಾಕುಣಿತ, ಹುಲಿವೇಷ, ವೀರಗಾಸೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿದ್ದರು.
20. ಕಾಲಗಣನೆಗೆ ಜ್ಯೋತಿಷ್ಯಶಾಸ್ತ್ರದ ಪಂಚಾಂಗವನ್ನು ತಿಳಿದಿದ್ದರೂ ಹಾಗೂ ಸೂರ್ಯನನ್ನು ನೋಡಿ ಸಮಯವನ್ನು ನಿರ್ಧರಿಸುತ್ತಿದ್ದರು.
21. ಕೃಷಿಗಾಗಿ ಮಳೆನೀರು,ನದಿ,ಕೆರೆ,ಅಥವಾ ತೆರೆದ ಬಾವಿಗಳನ್ನು ಮಾತ್ರ ಉಪಯೋಗಿಸುತ್ತಿದ್ದರು.
22. ಸಂತೋಷವೇ ಜೀವನದ ಪರಮಾಸ್ತಿಎಂಬ ಮೂಲ ಮಂತ್ರವನ್ನು ಅರಿತಿದ್ದರು.
23. ಎಲ್ಲಿಯೂ ತಪ್ಪು ಹಾದಿಯನ್ನು ತುಳಿಯದೆ ಗುರು ಹಿರಿಯರ ಮಾರ್ಗದರ್ಶನದಲ್ಲಿ ಸಂಸ್ಕಾರವಂತ ಜೀವನವನ್ನು ನಡೆಸುತ್ತಿದ್ದರು.
24.ಅತಿಥಿ ದೇವೋಭವ ಎಂಬಂತೆ ಅತಿಥಿಗಳಲ್ಲಿ ದೇವರನ್ನು ಕಾಣುತ್ತಿದ್ದರು ದೂರದೂರುಗಳಿಂದ ಬಂದ ಅತಿಥಿಗಳ ಯೋಗಕ್ಷೇಮ,ಊಟೋಪಚಾರ, ನೋಡಿಕೊಳ್ಳುತ್ತಿದ್ದರು.
25. ಕುಳಿತು ಓದದೇ ಇದ್ದರೂ ಕೂಡ ಕಾವ್ಯ ಪರಿಣತರಂತೆ ಜಾನಪದ ಹಾಡುಗಳನ್ನು ಹೆಣೆಯುವ ಕಲೆಯನ್ನು ಕಲಿತಿದ್ದರೂ.
26. ಕೊನೆಯವರೆಗೂ ಕೂಡ ಆಡಂಬರವಿಲ್ಲದ ಜೀವನವನ್ನು ನಡೆಸಿ ಉಸಿರು ನಿಂತ ಮೇಲು ಮಣ್ಣಲ್ಲಿ ಮಣ್ಣಾಗುವುದು ಮೂಲಕ ಪರಿಸರಸ್ನೇಹಿ ಯಾಗಿದ್ದರು.
ಈ ರೀತಿ ನಮ್ಮ ಪೂರ್ವಜರ ನಿಸರ್ಗ ಸ್ನೇಹಿ ಜೀವನದ ಹಿಂದಿನ ರಹಸ್ಯ ಅವರ ತಾಳ್ಮೆ ಹಾಗೂ ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸುವ ಕಲೆಯಲ್ಲದೆ ಮತ್ತೇನು? ಇವರೇನು ನಮ್ಮ ಹಾಗೆ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದವರೇ? ಹಾಗಾದರೆ ಈಗ ಹೇಳಿ ಯಾರು ಹೆಚ್ಚು ಬುದ್ಧಿವಂತರು??????

All are superbly observed and written for concern towards other creatures.great work
ReplyDeleteAll are superbly observed and written for concern towards other creatures.great work
ReplyDeleteNice 👌👌
ReplyDeleteNice teju
ReplyDeleteSpr dude....
ReplyDeleteThis comment has been removed by the author.
ReplyDeleteThe oldest is the personality of the golden village
ReplyDelete