Monday, April 27, 2020

ಯಾರಿಗಾಗೀ ಈ ಓಟ ??


    ಎಸ್. ಪಿ. ತೇಜರಾಜು

  ತಿಳಿದೋ ತಿಳಿಯದೆಯೋ ನಾವೆಲ್ಲರೂ ಓಟದ ಕಣದಲ್ಲಿ ಸ್ಪರ್ಧಿಗಳಗಿದ್ದೇವೆ ದುರ್ದೈವದ ಸಂಗತಿಯೆಂದರೆ ಇಲ್ಲಿ ಸೇರಿರುವವರಾರಿಗೂ ಕೂಡ ಓಟದ ಉದ್ದೇಶ ತಿಳಿದಿಲ್ಲ ಹಾಗೂ ನಾವೇಕೆ ಈ ಓಟದಲ್ಲಿ  ಭಾಗವಹಿಸಬೇಕೆಂದು ಆಲೋಚನೆಯೂ ಇಲ್ಲ, ಈ  ಓಟ ಇನ್ನಾವುದೂ ಅಲ್ಲ ಇದು ಜಗತ್ತಿನ ಆರ್ಥಿಕತೆಯ ಓಟ. ಈ ಓಟದಲ್ಲಿ ನಾವು ಎಷ್ಟರ ಮಟ್ಟಿಗೆ ಮಗ್ನರಾಗಿ ಬಿಟ್ಟಿದ್ದೇವೆ ಎಂದರೆ ನಮ್ಮ ನಾಲ್ಕು ಚೌಕಟ್ಟಿನ ಜ್ಞಾನವನ್ನು ಮೀರಿ ಬೇರೆ  ವಿಷಯಗಳಿವೆ ಎಂಬ ಪರಿಕಲ್ಪನೆ  ಇಲ್ಲದವರಾಗಿದ್ದಾರೆ.

ನಮ್ಮ ಪೂರ್ವಜರ ಪರಿಸ್ಥಿತಿ ಹೀಗಿರಲಿಲ್ಲ  ಯಾವುದೇ ವಿಷಯವಾದರು ನಂಬಿಕೆ ಇಡುತ್ತಿದ್ದರು ಹಾಗೂ ಅವರ ನಂಬಿಕೆಗಳೆಲ್ಲವೂ ಸತ್ಯಗಳೇ ಆಗಿರುತ್ತಿದ್ದವು. ಮಳೆ ನಕ್ಷತ್ರಗಳಲ್ಲಿ ನಂಬಿಕೆ ಇಡುತ್ತಿದ್ದರು ಅದೇ ಪ್ರಕಾರ ಮಳೆ ಬೆಳೆಗಳಾಗಿ ಸುಭಿಕ್ಷವಾಗಿದ್ದರು. ಆಚಾರ-ವಿಚಾರ, ಹಬ್ಬ-ಹರಿದಿನಗಳು, ಆಹಾರ ಪದ್ಧತಿಗಳಿಗೆ ಮಹತ್ವವನ್ನು ನೀಡಿದ್ದರಿಂದ ಹೆಚ್ಚು ಖುಷಿಯಾಗಿದ್ದರು.

 ವೈಜ್ಞಾನಿಕ ಚೌಕಟ್ಟಿನಲ್ಲೇ ಪ್ರತಿ ವಿಷಯಗಳನ್ನು ತಾಳೆ ಮಾಡಿ ನೋಡಬೇಕೆಂಬ ನಮ್ಮ ಈ ತಲೆಮಾರು ಅವರ ನಂಬಿಕೆಗಳನ್ನೆಲ್ಲವನ್ನು ಮೂಲೆಗುಂಪಾಗಿಸಿ, ಪದ್ಧತಿಗಳನ್ನು ವಿರೋಧಿಸಿ ನಾವು ಬೇರೆ ಮಾರ್ಗದಲ್ಲಿ ಅವರನ್ನು ಮೀರಿದ ಮೇಧಾವಿಗಳ ಆಗುತ್ತೇವೆಂಬ ಹುಚ್ಚು ಆತ್ಮವಿಶ್ವಾಸದಲ್ಲಿ ಮುನ್ನಡೆದವು ಈಗ ಇದರಲ್ಲಿಯೂ ಸಾಧನೆ ಮಾಡಲಾಗದೆ ಹಿಂದಿನ ಪದ್ಧತಿಗಳಿಗೂ ಹಿಂತಿರುಗ ಲಾಗದೆ ಇರುಳಿನಲ್ಲಿ ಕಂಡ ಬಾವಿಗೆ ಹಗಲು ಆರಿ ಒದ್ದಾಡುತ್ತಿದ್ದೇವೆ.

 ಪ್ರಕೃತಿಯ ಜೊತೆ ಜೊತೆಗೆ ಜೀವನ ನಡೆಸಿದ ನಮ್ಮ ಪೂರ್ವಜರ ಆಸ್ತಿ ಅಂತಸ್ತು, ಒಡವೆ  ಬಂಗಾರ, name and fame ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡದೆ ಬಂಧು-ಬಾಂಧವರು, ನೆಂಟರಿಷ್ಟರು,ಸ್ನೇಹಿತರ ಗಳೊಂದಿಗೆ ಹೆಚ್ಚು ಖುಷಿಯಾಗಿದ್ದರು. ದೂರದ ಊರುಗಳಿಗೆ ಕಾಲ್ನಡಿಗೆಯಲೋ ಎತ್ತಿನಗಾಡಿಯಲ್ಲಿ  ಸಂಚರಿಸುತ್ತಿದ್ದರಿಂದ ಹೆಚ್ಚು ಆರೋಗ್ಯವಂತರಾಗಿದ್ದರು.

 ಹೀಗೆಂದ ಮಾತ್ರಕ್ಕೆ ನಮ್ಮ ಪೂರ್ವಜರು  ಬಡವರಾಗಿದ್ದಾರೆ ಎಂದೇನು ಹೇಳುತ್ತಿಲ್ಲ ಅವರು ಶ್ರೀಮಂತರಾಗಿದ್ದರು ಆದರೆ ಅದನ್ನು ಅಳೆಯುವ ಮಾನ ಬೇರೆಯಾಗಿತ್ತು ಅಷ್ಟೇ ಅವರು ತಮ್ಮ ಶ್ರೀಮಂತಿಕೆಯನ್ನು ಅವರ ಜಮೀನುಗಳಲ್ಲಿ  ಬೆಳೆಸಿ ದಂತಹ ಒಟ್ಟು ಮರಗಳ ಸಂಖ್ಯೆಯನ್ನು ಆಧರಿಸಿ ಮನೆಯಲ್ಲಿ  ಸಾಕಿರುವಂತಹ ಕರು, ಕುರಿ,  ದನ,ಮೇಕೆ,ಕತ್ತೆ,ಕುದುರೆ, ಕುನ್ನಿ, ಬೆಕ್ಕು, ಹೀಗೆ ನಾನಾ ಬಗೆಯ ಪ್ರಾಣಿಗಳೊಂದಿಗೆ ಶ್ರೀಮಂತರಾಗಿದ್ದರು.

 ಹಣವೇ ಸರ್ವಸ್ವಕೂ ಮೂಲ ಎಂದು ಹಣದ ಹಿಂದೆ ಓಡಿ  ನಾವೆಲ್ಲರೂ ಅದೋಗತಿಗೆ ತಲುಪಿದ್ದೇವೆ.

 ನಮ್ಮೆಲ್ಲರ ಶ್ರೀಮಂತಿಕೆಯನ್ನು ಅಳೆಯುವ ಮಾನ ಬದಲಾಗಿದೆ. ನಗರವಾಸಿಗಳಆಗಿರುವ ನಾವು ಎಷ್ಟೆಷ್ಟು ದೊಡ್ಡ ಬಂಗಲೆಯನ್ನು ಕಟ್ಟಿದ್ದೇವೆ?ಎಷ್ಟು ಬೆಲೆಬಾಳುವ ಇಂಟೀರಿಯರ್ ಗಳನ್ನು ಉಪಯೋಗಿಸಿದ್ದೇವೆ ? ಹಾಗೂ ಊರುಕೇರಿಯ ತುಂಬೆಲ್ಲ ಎಷ್ಟೆಷ್ಟು ಪ್ರಾಪರ್ಟಿ ಗಳನ್ನು ಮಾಡಿದ್ದೇವೆ?ಪಕ್ಕದ ಮನೆಯವರು ತಂದಿದ್ದಾರೆ ಎಂದು ಎಷ್ಟೆಲ್ಲಾ ಎಲೆಕ್ಟ್ರಾನಿಕ್ ಐಟಂಗಳನ್ನು ಮನೆಯಲ್ಲಿ ಗುಡ್ಡೆ ಮಾಡಿಕೊಂಡಿದ್ದೇವೆ?ಹೊರಗೆ ಓಡಾಡಲು ಮೂರು ನಾಲ್ಕುತರಹದ ಕಾರು ಸ್ಕೂಟರ್ ಗಳನ್ನೆಲ್ಲವನ್ನು ಮನೆಗೆ ತೆಗೆದುಕೊಂಡು ಬಂದು ದಿನದಿನದ ಖರ್ಚುಗಳನ್ನು ಇಮ್ಮಡಿಗೊಳಿಸಿಕೊಳ್ಳುತ್ತಿದ್ದೇವೆ.

 ಯಾರೋ ಕೊಳ್ಳೆ ಹೊಡೆದ ಹಣದಲ್ಲಿ ಆಡಂಬರವಾಗಿ ವಿವಾಹ ಮಾಡುತ್ತಾರೆಂದು ತಾವೂ  ಕೂಡ ಹೊರಗಿನಿಂದ  ಸಾಲ ತಂದು ಮದುವೆ ಮಾಡಿ ಮುಗಿಸಿದ ಮೇಲೆ ತೆಗೆದುಕೊಂಡ ಸಾಲವನ್ನು ತೀರಿಸಲಾಗದೆ ಇರುವ ಆಸ್ತಿಪಾಸ್ತಿಯನ್ನು  ಮಾರಿಕೊಂಡು ಬೀದಿಗೆ ಬಿದ್ದಿದ್ದಾನೆ.

 ಸಂಪಾದಿಸಿ ಶ್ರೀಮಂತರಾಗಬೇಕು ಎನ್ನುವುದೇನೋ ನಿಜ ಆದರೆ ಸಂಪಾದಿಸುವ ಬರದಲ್ಲಿ ತಾನು ಉಪಯೋಗಿಸಿಕೊಳ್ಳದೇ 4 ತಲೆಮಾರುಗಳಿಗಾಗುವ ಅಷ್ಟನ್ನು ಮಾಡಿಟ್ಟು ಹೋಗುತ್ತಾನೆ. ತಾತ ಮುತ್ತಾತಂದಿರು ಮಾಡಿಟ್ಟಿರುವ ಆಸ್ತಿಯನ್ನು ಕರಗಿಸುತ್ತಾ ಐಷಾರಾಮಿ ಜೀವನಕ್ಕೆ ಹೊಂದಿಕೊಂಡ  ಮುಂದಿನ ತಲೆಮಾರುಗಳು ತಮ್ಮ ಶ್ರೀಮಂತಿಕೆಯನ್ನು ಜ್ಞಾನದ ದೃಷ್ಟಿಯಿಂದ ಹೊರತುಪಡಿಸಿ ಇನ್ನೆಲ್ಲ ರೀತಿಯ ದುಶ್ಚಟಗಳನ್ನು ಕರಗತ ಮಾಡಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾನೇ. ಎಲ್ಲಾ ರೀತಿಯ ಸೌಕರ್ಯಗಳಿದ್ದರೂ ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಒಂದು ಪುಸ್ತಕ ಒಬ್ಬ ಸ್ನೇಹಿತನಿಗಿಂತಲೂ ಮಿಗಿಲು ಎಂದು ತಿಳಿದಿದ್ದರೂ ಕೂಡ ಮನೆಯಲ್ಲಿ ಒಂದು ಪುಸ್ತಕ ಇಲ್ಲದ ಹಾಗೆ ಗುಜರಿಗೆ ಸೇರಿಸಿದ್ದಾನೆ. ಮರದ ಕೆಳಗೆ ವಾಹನಗಳನ್ನು ನಿಲ್ಲಿಸಿದರೆ ಎಲೆ ಉದುರುತ್ತದೆ ಎಂದು ಇರುವ ಮರವನ್ನು ಕಡಿಸಿ ಶೆಡ್ ಕೆಳಗೆ ನಿಲ್ಲಿಸಿದ್ದಾನೆ  ಹೀಗೆ ದಿನದಿಂದ ದಿನಕ್ಕೆ ಮಾನವೀಯತೆಯನ್ನು ಮರೆಯುತ್ತಿದ್ದಾನೇ.

 ಸ್ವಾವಲಂಬಿಗಳಾಗಿದ್ದಂತಹ ನಮ್ಮ ಹಳ್ಳಿಯ ಜನರಿಗೆ ಹಣದ ಆಮಿಷವೊಡ್ಡಿ ನಗರಗಳಿಗೆ ಕರೆಯಿಸಿಕೊಂಡು ಅವರನ್ನು ಗುಲಾಮರನ್ನಾಗಿ ಸಿದ್ದೇವೆ  ಈ ಗುಲಾಮಗಿರಿಯಲ್ಲಿ  ವಿದ್ಯಾವಂತರ ಪಾಲೇನು ಕಡಿಮೆ ಇಲ್ಲ ಆರು ಕಾಸು ಸಂಪಾದಿಸುವ ನಿಟ್ಟಿನಲ್ಲಿ ಜಗತ್ತಿನ ಯಾವುದೇ ಮೂಲೆಯ ಅವರಿಗೆ ಬೇಕಾದ ಕೆಲಸವನ್ನು ತಾನು ಮಾಡಿ ಇನ್ನಾರನ್ನು ಉದ್ಧಾರ ಮಾಡಿ ಇದೇ ತನ್ನ ಸಾಧನೆ ಎಂದು ಹೆಮ್ಮೆ ಪಡುತ್ತಾನೆ.
 ಇತ್ತ ನಮ್ಮ ಸರಕಾರಗಳು ಸ್ವಾಭಾವಿಕ ಕೃಷಿ ಮಾಡಿಕೊಂಡು ಹಾಯಾಗಿದ್ದ  ಕೃಷಿಕರಿಗೆ ಹೈಬ್ರಿಡ್ ಬೀಜಗಳು, ರಸಗೊಬ್ಬರ, ಕ್ರಿಮಿನಾಶಕಗಳನ್ನು ನೀಡಿ ಭೂಮಿಗೆ ವಿಷವುಣಿಸಿದ ಫಲವಾಗಿಯೇ ಭೂಮಿ  ಬಂಜರಾಗಿದೆ ಕೃಷಿಯನ್ನೇ ನಂಬಿದ ರೈತರ ಆರ್ಥಿಕ ಪರಿಸ್ಥಿತಿಯನ್ನು ಅದೋಗತಿಗೆ ತಳ್ಳಿ ಆತ್ಮಹತ್ಯೆಗೆ ಗುರಿಯಾಗಿದ್ದಾರೆ. ಇದರಿಂದ ಬೇಸತ್ತ ರೈತಾಪಿ ವರ್ಗ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.

 ಜಗತ್ತು ಬದಲಾಗುತ್ತಿದೆ ಎಂಬ ಮೌಡ್ಯದಲ್ಲಿ ಬದಲಾಗುತ್ತಿರುವ ಜನರ ಮನೋಭಾವನೆ ಗಳೊಂದಿಗೆ ಬೆರೆತು ತಾನು ಬದಲಾಗಿದ್ದಾನೆ. ಅದೇನೇ ಇರಲಿ ಇಂದು ಕರೋನ ವಿಷಯವಾಗಿ ನಗರವಾಸಿಗಳು ಮರಳಿ ಹಳ್ಳಿ ಸೇರಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಪೂರ್ವಜರು ಸಹಜಕೃಷಿಯಲ್ಲಿ ಮಾಡಿದಂತಹ ಸಾಧನೆಗಳನ್ನು ಮೆಲುಕು ಹಾಕಬೇಕಾಗಿದೆ ಹಾಗೂ ಯಾವ ಹಂತದಲ್ಲಿ ಕೃಷಿ  ವಿಫಲತೆಯ ಹಾದಿಯನ್ನು ಹಿಡಿಯಿತು ಎಂದು  ತಿಳಿದುಕೊಳ್ಳಬೇಕಾಗಿದೆ. ಕೃಷಿ ಸಾಕಷ್ಟು ಬದಲಾವಣೆಗಳನ್ನು ಕಂಡರೂ ಕೂಡ ನಮ್ಮ ಪೂರ್ವಜರ ಪದ್ಧತಿಗಳನ್ನು ಪಾಲಿಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಿದಂತಹ ನಾರಾಯಣ್ ರೆಡ್ಡಿ, ಅಯ್ಯಪ್ಪ ಮಸಗಿ,ನರೇಂದ್ರ ರೈ ದೇರ್ಲ, ವಸಂತ ಕಜೆ ನಮಗೆ ಮಾರ್ಗದರ್ಶಕರಾಗುತ್ತಾರೆ. ಈ ನಿಟ್ಟಿನಲ್ಲಿ ಯುವಜನತೆ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸ್ವಾವಲಂಬಿಗಳಾಗುವುದುರ ಮೂಲಕ ನಮ್ಮ ದೇಶದಲ್ಲಿ ಮತ್ತೊಮ್ಮೆ ನೈಸರ್ಗಿಕ ಹಸಿರು ಕ್ರಾಂತಿಯನ್ನು ಮಾಡಿಸಬಹುದಾಗಿದೆ.


 ನಮಗೆ ಇಂದು ಬೇಕಾಗಿರುವುದು ಜಗತ್ತನ್ನು ಮೆಚ್ಚಿಸುವ ಕಾಯಕವಲ್ಲ ಅಥವಾ ಜಗತ್ತಿನ ಆರ್ಥಿಕತೆಯ ಓಟದಲ್ಲಿ ಜೀವನ ಸವೆಸುವುದಕಲ್ಲ ಬದಲಿಗೆ ಪರಿಸರದೊಂದಿಗೆ ಸಮೃದ್ಧ ಜೀವನವನ್ನು ನಡೆಸುವುದಾಗಿದೆ.......

Sunday, April 26, 2020

ಬೆಳಕಿನ ಪ್ರಖರತೆ ಈ ವಿಷಯಗಳಿಗೂ ಹರಿಯಲಿ


    ಎಸ್. ಪಿ. ತೇಜರಾಜು

            ಕಳೆದ ಮೂರ್ನಾಲ್ಕು ತಿಂಗಳುಗಳಿಂದ  ಪ್ರಪಂಚದ ಎಲ್ಲಾ ದೇಶಗಳು ಕರೋನಾ  ವಿಷಯವಾಗಿ ಗಂಭೀರವಾದ ಚರ್ಚೆಯನ್ನು ನಡೆಸುತ್ತಿವೆ ಹಾಗೂ ಜನರಿಗೆ  ಈ ವಿಷಯದ ಬಗ್ಗೆ ಅರಿವನ್ನು ಮೂಡಿಸುತ್ತಿವೆ. ಟಿವಿ ಮಾಧ್ಯಮಗಳು ಹಾಗೂ ದಿನಪತ್ರಿಕೆಗಳು ವಿಶೇಷ  ಆರ್ಥಿಕ ತಜ್ಞರೊಂದಿಗೆ ಸಮಾಲೋಚಿಸಿ  ಮುಂದೊದಗಬಹುದಾದ ನಷ್ಟಗಳು ಹಾಗೂ ಸವಾಲುಗಳನ್ನು ಜನರಿಗೆ ತಿಳಿಸುತ್ತಿವೆ. ಹೀಗೆ ಆರ್ಥಿಕ ಬೆಳವಣಿಗೆಗೆ ಹೆಚ್ಚು ಮಹತ್ವವನ್ನು ಕೊಡುವ ನಾವು ಇನ್ನೂ ಹೆಚ್ಚಾಗಿ ಗಮನಹರಿಸಬೇಕಾದ ಅನೇಕ ಕ್ಷೇತ್ರಗಳನ್ನು ಮೂಲೆ ಗುಂಪಾಗಿಸಿದ್ದೇವೆ. ಸೂಕ್ಷ್ಮವಾಗಿ ಗಮನಿಸುವುದಾದರೆ ಪ್ರಪಂಚದ ನಾನಾ ದೇಶಗಳಲ್ಲಿ lockdown ಅನ್ನು ಘೋಷಿಸಿರುವುದರಿಂದ ಸಾಕಷ್ಟು ಬದಲಾವಣೆಗಳು  ಗೋಚರಿಸುತ್ತಿವೆ. ಪ್ರಾಣಿಗಳು ವಾಹನಗಳಿಲ್ಲದ ರಸ್ತೆಗಳಲ್ಲಿ ಸ್ವಚ್ಛಂದವಾಗಿ ನಡೆದಾಡುತಿರುವುದು, ಪಕ್ಷಿಗಳ ಕಲರವ ಇಮ್ಮಡಿ ಸಿರುವುದು,
 ಹೀಗೆ ಹತ್ತು ಹಲವು ಬದಲಾವಣೆಗಳು ನಮ್ಮ ಸುತ್ತಮುತ್ತ ನಡೆಯುತ್ತೇವೆ.ಈ ರೀತಿಯ ಬದಲಾವಣೆಗಳು lockdown ಮುಗಿಯುವ ದಿನದ ತನಕ ಮುಂದುವರೆದು,ಅದಾದ ಮುಂದಿನ ದಿನದಿಂದಲೇ ಯಥಾಪ್ರಕಾರ ಆರ್ಥಿಕತೆಯ ಓಟದಲ್ಲಿ ನಾವೆಲ್ಲರೂ ಮಗ್ನರಾಗಿ ಬಿಡುತ್ತೇವೆ. 

 ನಿಜಹೇಳಬೇಕೆಂದರೆ ನಾವು ಇಂದು ವಾಸಿಸುತ್ತಿರುವ ನಗರಗಳೆಲ್ಲವೂ ಮೊದಲು ಅವುಗಳ  ವಾಸಸ್ಥಾನಗಳೇ ಆಗಿದ್ದವು. ಆದರೆ ಮಾನವನ ಹಸ್ತಕ್ಷೇಪದಿಂದ ಇಲ್ಲೇ ಇದ್ದಂತಹ ಎಲ್ಲ ಬೃಹದಾಕಾರದ ಮರಗಳನ್ನು ಧರೆಗುರುಳಿಸಲಾಗಿದೆ. ಸಾವಿರಾರು ವರ್ಷಗಳಿಂದ ಲಕ್ಷಾಂತರ ಲೀಟರ್ ಮಳೆಯ ನೀರನ್ನು ಭೂಮಿಗೆ ಇಂಗಿಸುತ್ತಿದ್ದಂತಹ  ಕಾಡುಗಳನ್ನು ಇಂದು ಸಂಪೂರ್ಣವಾಗಿ ಕಾಂಕ್ರೀಟ್ ಕಾಡುಗಳಾಗಿ  ಪರಿವರ್ತಿಸಲಾಗಿದೆ. ಈ ರೀತಿಯಾದಂತಹ ಬದಲಾವಣೆಗಳು ಕೆಲವೇ ಕೆಲವು  ದಶಕಗಳಿಂದಾಗಿದೆ. ಬುದ್ದಿವಂತ ಜೀವಿ ಎನಿಸಿಕೊಂಡ ಮಾನವ ಪರಿಸರದಿಂದ ಬೇಕಾದ ಎಲ್ಲಾ ವಸ್ತುಗಳನ್ನು ಹೊರ ತೆಗೆಯುತ್ತಿದ್ದಾನೆ ಹೊರತು,ಹಿಂತಿರುಗಿಸುವ ಕಿಂಚಿತ್ ಮನೋಭಾವನೆಯೂ ಬೆಳೆಸಿಕೊಂಡಿಲ್ಲ. ಇದಕ್ಕೆಲ್ಲಾ ಕಾರಣ ನಾವೇ ಮಾಡಿಕೊಂಡಿರುವoತಹ  ಆರ್ಥಿಕತೆಯ ಓಟ ಹಾಗೂ ಪರಿಸರ ಜ್ಞಾನದ ಕೊರತೆ.


              ಮಾನವನ ಹಸ್ತಕ್ಷೇಪದಿಂದಾಗಿ  ಪರಿಸರದಲ್ಲಿ ಆದ ಬದಲಾವಣೆಗಳನ್ನು ನಾವು ನೋಡುವುದೇ ಆದರೆ,

1.ವಿಶ್ವದಲ್ಲಿ ಪ್ರತಿ ಸೆಕೆಂಡಿಗೆ ಒಂದು ಫುಟ್ಬಾಲ್ ಸ್ಟೇಡಿಯಂ ನಷ್ಟು ಮಳೆಕಾಡು ನಾಶವಾಗುತ್ತಿದೆ.

2.ಪ್ರತಿವರ್ಷ ವಿಶ್ವದಲ್ಲಿ ಪ್ರತಿಶತ 330 ರಿಂದ 431 ಮಿಲಿಯನ್ ಹೆಕ್ಟೇರ್ ಕಾಡು ಬೆಂಕಿಗಾಹುತಿ ಆಗುವುದರೊಂದಿಗೆ  ಲಕ್ಷಾಂತರ ಪ್ರಾಣಿ-ಪಕ್ಷಿಗಳು ಜೀವ ಕಳೆದುಕೊಳ್ಳುತ್ತೇವೆ.

3.ಪ್ರತಿವರ್ಷ 15 ಬಿಲಿಯನ್  ಮರಗಳನ್ನು ಧರೆಗುರುಳಿಸಲಾಗುತ್ತಿದೆ.

4.ವಿಶ್ವದಲ್ಲಿ ಒಟ್ಟು ಎಂಟು  ಲಕ್ಷ  Dam ಗಳಿವೆ ಎಂದು ಅಂದಾಜಿಸಲಾಗಿದ್ದು ಅದರಲ್ಲಿ ಬಹುಪಾಲು ಕಾಡಿನಲ್ಲೇ ಇರುವುದರಿಂದ ವೈವಿಧ್ಯಮಯ ವಾದಂತಹ  ಕಾಡು ನೀರಿನಲ್ಲಿ  ಮುಳುಗಿಹೋಗಿದೆ ಹಾಗೂ ಈ  ಡ್ಯಾಮ್ ಗಳಿಗೆ ಪ್ರತಿವರ್ಷ ಒಂದು ಪರ್ಸೆಂಟ್  ಹುಳು ಸೇರುತ್ತಿದೆ.

5.ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ 72,337 ಕಶೇರುಕಗಳು,1,50,1581  ಅಕಶೇರುಕಗಳು, 4,22,756ಸಸ್ಯ ಪ್ರಭೇದಗಳು, 1,41,275 ಜಾತಿಯ ಶಿಲೀಂದ್ರಗಳು ಸೇರಿವೆ ಹಾಗೂ ದಿನದಿಂದ ದಿನಕ್ಕೆ ಇವುಗಳ ಸಂಖ್ಯೆ ಹೆಚ್ಚಾಗುತ್ತಿದೆ.

6.ಪ್ರಪಂಚದಲ್ಲಿ ಒಟ್ಟು ನಾಲ್ಕನೇ ಮೂರು ಭಾಗದಷ್ಟು ವೈವಿಧ್ಯಮಯವಾದ ಕೃಷಿ ಬೆಳೆಗಳು ನಾಶವಾಗಿದೆ.

7.ಪ್ರಪಂಚದಲ್ಲಿ ಪ್ರತಿವರ್ಷ 5.6 ಬಿಲಿಯನ್ ಪೌಂಡ್ ಕ್ರಿಮಿನಾಶಕವನ್ನು ಬೆಳೆಗಳಿಗೆ ಸಿಂಪಡಿಸಲಾಗುತ್ತದೆ.

8.ಪ್ರತಿವರ್ಷ 24 ಬಿಲಿಯನ್ ಟನ್ ಸಾವಯವ ಮಣ್ಣು ಸಮುದ್ರ ಸೇರುತ್ತಿದೆ.

9.ಪ್ರತಿ ನಿಮಿಷ 23 ಹೆಕ್ಟೇರ್ ಲ್ಯಾಂಡ್ ಮರುಭೂಮಿಯಾಗಿ ಪರಿವರ್ತನೆ ಆಗುತ್ತಿದೆ.

10.ಪ್ರತಿವರ್ಷ ವಿಶ್ವದಲ್ಲಿ 8  ಕೋಟಿ ಜನ ಹೆಚ್ಚಾಗುತ್ತಿದ್ದಾರೆ.

11.ಜನಸಂಖ್ಯೆ ಹೆಚ್ಚಾದಷ್ಟೂ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಾಗುತ್ತದೆ, ಇದರ ಜೊತೆಗೆ  ಕೃಷಿಕರ ಗಣನೀಯ ನಗರ ವಲಸೆಯಿಂದಾಗಿ ಆಹಾರ ಉತ್ಪನ್ನಗಳ ಬೆಲೆ ಹೆಚ್ಚಾಗುತ್ತದೆ.

12.ಇಂದು ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ
79.5 ಕೋಟಿ ಜನ ಪ್ರತಿದಿನ ಒಂದು ಹೊತ್ತಿನ ಊಟ ಇಲ್ಲದೆ ಮಲಗುತ್ತಿದಾರೆ ಹಾಗೂ 200 ಕೋಟಿಗೂ ಅಧಿಕ ಜನ ಮಾಲ್ ನ್ಯೂಟ್ರಿಷಿಯನ್ ನಿಂದ ಬಳಲುತ್ತಿದ್ದಾರೆ.

13.ಅಂದಾಜಿನ ಪ್ರಕಾರ ವಿಶ್ವದ ಜನಸಂಖ್ಯೆ 2050ರ ವೇಳೆಗೆ 900 ಕೋಟಿಯನ್ನು  ಬೀರಲಿದ್ದು ಕೃಷಿ ಹಾಗೂ ಕೈಗಾರಿಕೆಗಳಿಗೆ ಇರಲಿ ಕುಡಿಯುವ ನೀರಿಗೂ ಕಷ್ಟಪಡಬೇಕಾಗುತ್ತದೆ.

14.ಪ್ರತಿವರ್ಷ 35 ಬಿಲಿಯನ್  ಬ್ಯಾರೆಲ್ ಲೀಟರ್ ಪೆಟ್ರೋಲನ್ನು ಭೂಮಿಯಿಂದ ಹೊರಗೆ ತೆಗೆಯುತ್ತಿದ್ದ ಅಂದಾಜಿನ ಪ್ರಕಾರ ನಾವು 40 ಪರ್ಸೆಂಟ್ ಆಯಿಲ್ ರಿಸರ್ವ್ ಗಳನ್ನು ಮುಗಿಸಿದ್ದೇವೆ ಇನ್ನು ಮುಂದಿನ ನೂರು ವರ್ಷಗಳಲ್ಲಿ ಇವುಗಳೆಲ್ಲವೂ  ಬರಿದಾಗುತ್ತದೆ.

15.ಹೆಚ್ಚು ಪೆಟ್ರೋಲಿಯಂ ಪ್ರಾಡಕ್ಟ್ ಗಳ ಬಳಕೆಯಿಂದಾಗಿ ವಾತಾವರಣದ ಶಾಖ ಹೆಚ್ಚಾಗಿ ಧ್ರುವಗಳಲ್ಲಿ ಇರುವ ಮಂಜು ಕರಗಿ ಸಮುದ್ರಮಟ್ಟ  ಹೆಚ್ಚಾಗುತ್ತದೆ.

16.ಆಮ್ಲ ಮಳೆಯಿಂದಾಗಿ ಭೂಮಿ ಹಾಗೂ ಭೂಮಿಯ ರಕ್ಷಾಕವಚ ವಾಗಿರುವ ಓಜೋನ್ ಲೇಯರ್ ಹಾಳಾಗುತ್ತಿದೆ.

17. 2040 ರ ವೇಳೆಗೆ ಭೂಮಿಯ ಶಾಖ1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದ್ದು ವಾತಾವರಣದಲ್ಲಿ  ಬಹಳಷ್ಟು ಅತಿವೃಷ್ಟಿ ಹಾಗು ಅನಾವೃಷ್ಟಿ ಗಳನ್ನು ಎದುರಿಸಬೇಕಾಗುತ್ತದೆ.

18.ಪ್ರತಿ ವರ್ಷ 100 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು ಅದರಲ್ಲಿ ಬಹುಭಾಗ ಸಮುದ್ರಕ್ಕೆ ಸೇರುತ್ತಿರುವುದರಿಂದ 2050ರ ವೇಳೆಗೆ ಮಾನವ ಸಮುದ್ರಕ್ಕೆ ಎಸೆದ ಪ್ಲಾಸ್ಟಿಕ್ನ ಭಾರ ಒಟ್ಟು ಸಮುದ್ರ ಜೀವಿಗಳ  ಭಾರವನ್ನು ಮೀರಲಿದೆ. ಇಂತಹ ಗಂಭೀರ ವಿಷಯಗಳು ಆರ್ಥಿಕತೆಯ  ಓಟದಲ್ಲಿ ಮರೆಯಾಗಿಬಿಡುತ್ತದೆ.

         lock downನಿಂದ ಭಾರತದ  ಪರಿಸರದಲ್ಲಿ ಆದ ಬದಲಾವಣೆಗಳನ್ನು ನೋಡುವುದಾದರೆ
1.ಗಂಗಾ ನದಿಗೆ ಸೇರುತ್ತಿದ್ದ ತ್ಯಾಜ್ಯ ನೀರು ಸಂಪೂರ್ಣವಾಗಿ ನಿಂತಿದ್ದು ಜೀವನದಿ ಗಂಗೆ ಸ್ವಚ್ಛಂದವಾಗಿ ಹರಿಯುತ್ತಿದ್ದಾಳೆ.

2.ವಾಯುಮಾಲಿನ್ಯದ ಪರಿಣಾಮದಿಂದಾಗಿ ನಾಲ್ಕು- ಐದು  ದಶಕಗಳಿಂದ ಪಂಜಾಬ್ ಜನತೆಗೆ ಕಾಣಿಸದ ದೂರದ ಹಿಮಾಲಯ ಪರ್ವತ  ಇಂದು ಗೋಚರಿಸುತ್ತಿದೆ.

3.ಶಬ್ದ ಮಾಲಿನ್ಯದಿಂದ ಗೂಡು ಸೇರಿದ ಪಕ್ಷಿಗಳು ಗೂಡಿನಿಂದ ಹೊರಬಂದು ಇಂಪಾದ ರಾಗವನ್ನು ಬೀರುತ್ತಿವೆ.
           ಹೀಗೆ ನೂರಾರು ಬದಲಾವಣೆಗಳು ನಮ್ಮ  ಸುತ್ತಮುತ್ತ ನಡೆಯುತ್ತಿದೆ.
 ಲಾಕ್ಡೌನ್ ಮುಗಿದ ದಿನದಿಂದ  ಜಗತ್ತಿನ ಆರ್ಥಿಕತೆಯ ಓಟದಲ್ಲಿ ಸಂಪೂರ್ಣ ಮಗ್ನರಾಗುವ ನಾವು ಹಣ ಸಂಪಾದನೆಗೆ ಹೆಚ್ಚು ಮಹತ್ವವನ್ನು ಕೊಡುತ್ತೇವೆ, ನಿಜ ಪ್ರತಿಯೊಬ್ಬರೂ ಹಣ ಸಂಪಾದನೆ ಮಾಡುವುದೇ ಈ ಜಗತ್ತಿನ ಅನಿವಾರ್ಯತೆಯಾಗಿದೆ.ಹಣಕ್ಕೆ ಮಹತ್ವ ಕೊಡುವುದರ ಜೊತೆಗೆ  ಪರಿಸರದ ಬಗ್ಗೆಯೂ ಕೂಡ ಕಾಳಜಿಯನ್ನು ವಹಿಸುವುದರಿಂದ ಇಡೀ  ಪ್ರಪಂಚವು ಸುಬಿಕ್ಷವಾಗಿರುತ್ತದೆ.

        ಇದಕ್ಕಾಗಿ ನಾವೆಲ್ಲರೂ ಮಾಡಬೇಕಾಗಿರುವ ಕಾರ್ಯಗಳೆಂದರೆ
1.ಹೆಚ್ಚು ಕಾಡುಗಳನ್ನು ಬೆಳೆಸುವುದರಿಂದ ಪರಿಸರದ ಸಮತೋಲನವನ್ನು ಕಾಪಾಡಬಹುದಾಗಿದೆ.

2.ಪರಿಸರ  ಸಮತೋಲನದಿಂದ ಜೀವವೈವಿದ್ಯ  ಸಮೃದ್ಧವಾಗಿರುತ್ತದೆ.

3.ಕಾಡನ್ನು ಬೆಳೆಸುವುದರಿಂದ ವಾತಾವರಣದಲ್ಲಿ ಇಂಗಾಲಾಮ್ಲ ಕಡಿಮೆಯಾಗಿ ಭೂಮಿಯ ಶಾಖ ಕಡಿಮೆಯಾಗುತ್ತದೆ.

4.ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ಭೂಮಿ ಹೆಚ್ಚು ಫಲವತ್ತಾಗಿ ಹೆಚ್ಚು ಇಳುವರಿಯನ್ನು ಪಡೆಯಬಹುದಾಗಿದೆ.

5.ಸಾಂಪ್ರದಾಯಿಕ  ಬೆಳೆಗಳನ್ನು ಬೆಳೆಯುವುದರಿಂದ ಜನರಿಗೆ ಹೆಚ್ಚು  ಪೌಷ್ಠಿಕಾಂಶವುಳ್ಳ ಆಹಾರ ದೊರೆಯುತ್ತದೆ.

6.ಸಾವಯುವ ಕೃಷಿಯಿಂದಾಗಿ ಮಳೆ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ.

7.ಪೌಷ್ಟಿಕ ಆಹಾರ ಸೇವನೆಯಿಂದ ಜನರ ಆರೋಗ್ಯ ಮಟ್ಟ ಸುಧಾರಿಸುತ್ತದೆ.

8.ಜನರ ಆರೋಗ್ಯ ಚೆನ್ನಾಗಿದ್ದರೆ ಸರ್ಕಾರ ಆರೋಗ್ಯ ಇಲಾಖೆಗೆ  ವ್ಯಾಹಿಸಬಹುದಾದ ಹಣವು ಕೂಡ ಕಡಿಮೆಯಾಗುತ್ತದೆ.

9.ಜನರ ಆರೋಗ್ಯ ಚೆನ್ನಾಗಿದ್ದರೆ ದೇಶದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

10.ಜನರ ಆರೋಗ್ಯ ಚೆನ್ನಾಗಿದ್ದರೆ ಉತ್ಪಾದಕತೆಯ ಗುಣಮಟ್ಟ ಕೂಡ  ಹೆಚ್ಚಾಗಲಿದ್ದು  ದೇಶದ ಖಜಾನೆಗೆ ಹೆಚ್ಚು ಹಣ ಸೇರುವುದರಿಂದ ದೇಶ  ಸುಭಿಕ್ಷ ವಾಗಿರುತ್ತದೆ.
          ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ಎಲ್ಲರೂ ದೃಢ ಸಂಕಲ್ಪವನ್ನು ಮಾಡುವುದರಿಂದ, ನಾವು  ನಮ್ಮವರು, ನಮ್ಮ ರಾಷ್ಟ್ರ, ನಮ್ಮ ವಿಶ್ವ ಹೀಗೆ ಎಲ್ಲವೂ ಸುಭಿಕ್ಷವಾಗಿ ಇರುತ್ತದೆ.

 "ಪರಿಸರವನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ".


 ( source : different news papers, journals, Magazines, internet source and many international reports)