Saturday, April 24, 2021

ಇವನೇ ಅಲ್ಲವೇ ನಮ್ಮೆಲ್ಲರ ಆತ್ಮೀಯ ಸ್ನೇಹಿತ ಎಂದರೆ ?

                

                          ಎಸ್. ಪಿ. ತೇಜರಾಜು.

 ಹೀಗೊಮ್ಮೆ ಸ್ನೇಹಿತರ ತಂದೆ ಬಿಡುವಾದಾಗ ನೀನೊಮ್ಮೆ ಹಸಿರುಹೊನ್ನು ಪುಸ್ತಕವನ್ನು ಓದಿ ಬಹಳ ಇಷ್ಟಪಡುತ್ತೀಯ ಹಾಗೂ ನೀನು ನಿಸರ್ಗವನ್ನು ಇಷ್ಟಪಡುವುದರಿಂದ ಈ ಪುಸ್ತಕ ಬಹಳ ಉಪಯುಕ್ತವಾಗುತ್ತದೆ ಎಂದಿದ್ದರು, ಸರಿ ಎಂದುಕೊಂಡು February 2020 ತಿಂಗಳ ಪುಸ್ತಕ ಖರೀದಿಯಲ್ಲಿ ಹಸಿರುಹೊನ್ನು ಪುಸ್ತಕವನ್ನು ಕೊಂಡುತಂದದ್ದಾಯಿತು,Office, ಮನೆ ಕೆಲಸಗಳೊಂದಿಗೆ, ಹಲವು pending ಪುಸ್ತಕಗಳನ್ನು ಓದಿ ಆದ ಬಳಿಕ ಈ ಪುಸ್ತಕವನ್ನು ಓದೋಣ ಎಂದುಕೊಂಡೆ.

ಇದೆ ಹಿಂದಿನ ವರ್ಷ ಮಾರ್ಚ್ ತಿಂಗಳಿನಲ್ಲಾದ lockdow ನಿಂದಾಗಿ, ಆಫೀಸ್ಗೆ ಹೋಗಬೇಕಾದ ಪರಿಸ್ಥಿತಿ ಇದ್ದರೂ ಕೂಡ ಪೋಷಕರು ಹೇಳಿದಂತೆ ಹದಿನೈದು ದಿನ ರಜಾ ತೆಗೆದುಕೊಂಡು ಮನೆಯಲ್ಲಿ ಉಳಿದಿದ್ದಾಯಿತು, ಹದಿನೈದು ದಿನದ ಅವಧಿಯಲ್ಲಿ ಮನೆಯವರೆಲ್ಲ ಸೇರಿಕೊಂಡು ಏನಾದರೂ ಒಂದು ಹೊಸ ಪ್ರಯತ್ನವನ್ನು ಮಾಡೋಣ ಎಂದು ಒಂದು Schedule ಮಾಡಿಕೊಂಡು ಅದರಂತೆ ನಡೆಯೋಣ ಎಂದು ತೀರ್ಮಾನಿಸಿದ್ದಾಯಿತು.

ಪ್ರತಿನಿತ್ಯದ ದಿನಚರಿಯಂತೆ ಬೆಳಗ್ಗೆ ಎದ್ದು ಯೋಗ ಮಾಡಿ, ಹಾಲು ಕುಡಿದು, ಒಂದರ್ಧಗಳಿಗೆ ದಿನಪತ್ರಿಕೆಯನ್ನು ಓದಿ,ಸ್ವಲ್ಪ ಹೊತ್ತು Accademic ಗೆ ಸಂಬಂಧಪಟ್ಟ ಪುಸ್ತಕವನ್ನು ಓದಿ, ಸ್ನಾನ ಮಾಡಿ ತಿಂಡಿ ತಿಂದು,Schedule  ನ ಪ್ರಕಾರದಂತೆ ಮನೆಗೆ Paint ಬಳಿಯಲು ಎಲ್ಲರೂ ಕೈಜೋಡಿಸುವುದು, ಒಂದು ದಿನ ಮನೆಯ hall, ಮರುದಿನ ಅಡಿಗೆಮನೆ, ಹೀಗೆ ಒಂದುವಾರಗಳನ್ನು ತೆಗೆದುಕೊಂಡು Rooms, ಹೊರಾಂಡ,Compound ಎಲ್ಲವಕ್ಕೂ ಸುಣ್ಣ-ಬಣ್ಣ ಕಾಣಿಸಿದ್ದಾಯಿತು, ಈ ಬಣ್ಣದ ಕೆಲಸದೊಂದಿಗೆ ಮೂಲ ರಾಮಾಯಣದ ಆಡಿಯೋವನ್ನು ಕೇಳುತ್ತಾ ಮಧ್ಯಾಹ್ನದವರೆಗೂ ಬಣ್ಣ ಬಳಿಯುವುದು, ಅದಾದ ಬಳಿಕ ಊಟ ಮಾಡಿ ಸ್ವಲ್ಪ ಹೊತ್ತು ಮಲಗಿ, ಸಂಜೆ ಹೊತ್ತು ಮನೆಯ ತಾರಸಿ ಮೇಲೆ ಇಟ್ಟಿರುವ ಮಡಿಕೆಯಲ್ಲಿ ನೀರು ಕುಡಿಯಲು ಬರುವಂತಹ ಪಕ್ಷಿಗಳ ಫೋಟೋ ತೆಗೆಯುವುದು, ಹಾಗೂ ಆಗಿನ್ನು ಜೀವನದಲ್ಲಿ ಪ್ರಥಮ ಬಾರಿಗೆ ಪ್ರಾರಂಭವಾದ ಅಂಕಣ [Article] ಬರೆಯುವುದು, ಇದಾದ ಬಳಿಕ ಸ್ವಲ್ಪ ಹೊತ್ತು ನಲವತ್ತರಿಂದ ಐವತ್ತು ಪುಟ ಹಸಿರು ಹೊನ್ನು ಪುಸ್ತಕವನ್ನು ಓದುವುದರಲ್ಲಿ ದಿನಚರಿ ಮುಕ್ತಾಯವಾಗುತ್ತಿತ್ತು.

ಕೆಲ ಸ್ನೇಹಿತರಿದ್ದಾರೆ, ಅದೆಷ್ಟು ದೊಡ್ಡ ಪುಸ್ತಕವಾಗಲಿ, ಕುಳಿತ ಒಂದೇ stretch ನಲ್ಲಿ ಪುಸ್ತಕವನ್ನು ಓದಿ ಮುಗಿಸಿಬಿಡುತ್ತಾರೆ, ಇವರೆಲ್ಲರೂ ಅದೆಷ್ಟು ಬೇಗ ಓದಿ ಅರ್ಥಮಾಡಿಕೊಳ್ಳುತ್ತಾರೆ ಎನ್ನುವ ವಿಷಯವೇ ತಲೆ ಕೆಡಿಸುತ್ತದೆ. ಹಸಿರು ಹೊನ್ನು ಪುಸ್ತಕ Dr. B G L  ಸ್ವಾಮಿಯವರ [ DVG ಅವರ ಪುತ್ರ] ಬರವಣಿಗೆಯಿಂದ ಹೊರಮೂಡಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿಕೊಂಡಿದೆ. ಸುಮಾರು 400 ಪುಟಗಳನ್ನು ಒಳಗೊಂಡಿದೆ. ಮೊದಲ ದಿನ ಪುಸ್ತಕದ ಮುನ್ನುಡಿ, ಪ್ರಕಾಶಕರ ನುಡಿ, ಪುಸ್ತಕದಲ್ಲಿ ಬಳಸಿರುವಂತಹ ಚಿತ್ರಗಳಿಗೆ ಕಣ್ಣು ಹೊರಳಿಸಿ ಓದಲು ಪ್ರಾರಂಭಿಸಿದ್ದಾಯಿತು.

ಸ್ವಾಮಿಯವರು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಅಧ್ಯಾಪಕರಾಗಿದ್ದುಕೊಂಡು, ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆಂದು ಸುತ್ತಮುತ್ತಲ ಕಾಡುಮೇಡುಗಳಿಗೆ ಕರೆದುಕೊಂಡು ಹೋಗಬೇಕಾಗುತ್ತಿತ್ತು. ಹಾಗಾದರೆ ಈ ಪುಸ್ತಕ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಉಪಯುಕ್ತವಾಗುವಂತೆ ಬರೆದಿರುವುದು ಎಂದುಕೊಂಡರೆ ನಮ್ಮಷ್ಟು ಮೂರ್ಖರು ಮತ್ತೊಬ್ಬರು ಇರಲಿಕ್ಕೆ ಸಾಧ್ಯವಿಲ್ಲ. ಅವರ ಬರವಣಿಗೆಯನ್ನು ಪ್ರತಿಯೊಬ್ಬ ಕನ್ನಡಿಗನು ತಪ್ಪದೇ ಓದಲೇ ಬೇಕಾದಷ್ಟು ಸ್ವಾರಸ್ಯವಾಗಿ ಪುಸ್ತಕವನ್ನು ಚಿತ್ರಿಸಿದ್ದಾರೆ, ಪುಸ್ತಕದ ಪ್ರಾರಂಭದಲ್ಲಿಯೇ ಶೈಕ್ಷಣಿಕ ಪ್ರವಾಸ (Study trip)  ಅಂದರೆ ಏನು? ಅದನ್ನು ಏಕೆ ಮಾಡಬೇಕು? ಅದನ್ನು ಹೇಗೆ ವ್ಯವಸ್ಥಿತ ಗೊಳಿಸಲಾಗುತ್ತದೆ? ಇದರಿಂದ ವಿದ್ಯಾರ್ಥಿಗಳಿಗಾಗುವ ಪ್ರಯೋಜನವಾದರೂ ಏನು? ವಿದ್ಯಾರ್ಥಿಗಳು ಪಾಲಿಸಬೇಕಾದಂತಹ ಕಟ್ಟುನಿಟ್ಟಿನ ಕ್ರಮಗಳಾವುವು? ಕಾಡಿನೊಳಗೆ ಪಾಲಿಸಲೇಬೇಕಾದ ನಿಯಮಗಳಾವುವು?  ಪ್ರವಾಸಕ್ಕೆ ಅಗತ್ಯವಿರುವ ಉಪಕರಣ, ಸಲಕರಣೆಗಳು, ಅಡಿಗೆಗೆ ಬೇಕಾದಂತಹ ಪಾತ್ರೆ ಪಗಾರ ದಿನಸಿ ಪದಾರ್ಥಗಳು, ಪ್ರವಾಸಕ್ಕೆ ಬೇಕಾದಂತಹ ಹಣಕಾಸಿನ ವ್ಯವಸ್ಥೆ, Mode of transportation, Camp ನಲ್ಲಿ ವಿದ್ಯಾರ್ಥಿಗಳಿಗೆ ಆಗುವ ತೊಂದರೆ ಅಡಚಣೆಗಳು, ಹುಡುಗ-ಹುಡುಗಿಯರು ಒಬ್ಬರನ್ನೊಬ್ಬರು ಗೇಲಿ ತಮಾಷೆ ಮಾಡುವ ಪರಿ, ಸುಂದರವಾಗಿ ರೂಪುಗೊಂಡಿರುವ ಕಾಡಿನ ವರ್ಣನೆ, ಕಾಡಿನಲ್ಲಿ ಅಲೆಯುವಾಗ ಕಂಡ ಪ್ರಾಣಿ-ಪಕ್ಷಿಗಳು,ಸಸ್ಯ ಸಂಗ್ರಹದಲ್ಲಿ ದೊರೆತ ನೂರಾರು ಬಗೆಯ ಸಸಿಗಳ ಅನ್ವೇಷಣೆ ಅವುಗಳ ಜಾತಿ ಒಳಜಾತಿ ಕುಲಗೋತ್ರ ಹಾಗೂ ಉಪಯುಕ್ತತೆ, ಎಲ್ಲವನ್ನೂ ಸವಿಸ್ತಾರವಾಗಿ ಒಬ್ಬ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವ ಭಾಷೆಯಲ್ಲಿ ಸ್ಪಷ್ಟವಾಗಿ ಬರೆದಿರುವ ಶೈಲಿ ನಿಜಕ್ಕೂ ಶ್ಲಾಘನೀಯ.

ಎಚ್ಚು ಕಡಿಮೆ ಪುಸ್ತಕವನ್ನು ಓದಲು10 ದಿನ ತೆಗೆದುಕೊಂಡರೂ ಪ್ರತಿದಿನ 40 ರಿಂದ 60 ಪುಟಗಳನ್ನು ಓದಿ ಮುಗಿಸುವಾಗ ಮುಂದೆ ಏನಾಗುತ್ತದೆ ಎಂದು ಕುತೂಹಲ ಕೆರಳಿಸುತ್ತಿರುತ್ತದೆ, ಹಾಗೂ ಪುಸ್ತಕದೊಳಗೆ ಮತ್ತಷ್ಟು ಮುಳುಗುವಂತೆ ಪ್ರಚೋದಿಸುತ್ತದೆ.( ಇವತ್ತಿನ ಮಕ್ಕಳು Pubji game ಆಡುವ ಸೆಳೆದಷ್ಟು)

ಬಹಳಷ್ಟು ವಿದ್ಯಾರ್ಥಿಗಳಲ್ಲಿ ಕಾಲೇಜಿನ ದಿನಗಳಿಂದಲೇ Accadic ಗೆ ಸಂಬಂಧಪಟ್ಟ ಪುಸ್ತಕಗಳನ್ನು ಓದುವುದರೊಂದಿಗೆ ವಿವಿಧ ಪ್ರಕಾರಗಳ ಪುಸ್ತಕವನ್ನು ಓದುವುದು ಪ್ರಾರಂಭವಾಗುತ್ತದೆ, ಒಂದು ಕಥೆಯನ್ನು ಓದುವಾಗ ಸಿಗುವ ಆನಂದ, ಕಾದಂಬರಿಯಲ್ಲಿ ಮೂಡಿ ಬರುವಂತಹ ಪಾತ್ರಧಾರಿಗಳ ಸನ್ನಿವೇಶಗಳು, ನಾಟಕದಲ್ಲಿ ಬರುವಂತಹ ಸಂಭಾಷಣೆ, ಒಂದು ಭಾವಗೀತೆಯನ್ನು ಕೇಳುವಾಗ ಅದರೊಳಗೆ ಮುಳುಗಿಹೋಗುವ ಭಾವ ಯಾವುದಕ್ಕೂ ನಿಲುಕವಂತಹದ್ದು.

ಭಾಷೆ, ಪದ ಬಳಕೆ, ಬರವಣಿಗೆಯೇ ಒಂದು ಅಭೂತಪೂರ್ವ ಬೆಳವಣಿಗೆ. ಕಲ್ಲಿನ ಮೇಲೆ ಬರಹಗಳಿಂದ ಪ್ರಾರಂಭವಾಗಿದ್ದು ಇಂದು ಪ್ರಪಂಚದ ಯಾವುದೇ ಮೂಲೆಯ ಯಾವುದೇ ಭಾಷೆಯ ಯಾವುದೇ ಲೇಖಕರ ಪುಸ್ತಕವನ್ನು ಮತ್ತೊಂದು ಭಾಷೆಗೆ ತರ್ಜುಮೆ ಮಾಡಿಕೊಂಡು ಕುಳಿತ ಜಾಗದಲ್ಲಿ ತಮ್ಮ ಮೊಬೈಲ್ನಲ್ಲಿ ಓದುವಂತಹ ವಿಪುಲ ಅವಕಾಶವಿದೆ.

ಕೆಲವು ಲೇಖಕರು ಹತ್ತಾರು ಪ್ರಕಾರಗಳ ನೂರಾರು ಪುಸ್ತಕಗಳನ್ನು ಬರೆದರೆ ಇನ್ನೂ ಕೆಲವರು ಕೆಲವೇ ಕೆಲವು ಪ್ರಕಾರಗಳ ವಿಭಿನ್ನ ಆಯಾಮಗಳನ್ನೊಳಗೊಂಡ ಪುಸ್ತಕಗಳನ್ನು ಬರೆದಿದ್ದಾರೆ, ಅದು ಕಥೆಯಾಗಿರಬಹುದು ಕಾದಂಬರಿ ಆಗಿರಬಹುದು ಹಾಸ್ಯ, ವಿನೋದ, ವಿಡಂಬನೆ, ನಾಟಕ, ಭಾವಗೀತೆ ಹೀಗೆ ನೂರಾರು ಪ್ರಕಾರಗಳು ನಮ್ಮ ಮುಂದಿವೆ.

ಬರಹಗಾರರ ಬದುಕು ಒಂದುಕಡೆಯಾದರೆ ಪುಸ್ತಕಗಳನ್ನು ತಮ್ಮ ಸ್ವಂತ ಹಣದಲ್ಲಿಯೇ ಖರೀದಿಸಿ ಇತರಿಗೆ ಜ್ಞಾನದ ಜ್ಯೋತಿಯನ್ನು ಪಸರಿಸುವಂತಹ ಅಂಕೇಗೌಡರು, ಬೆಟ್ಟಸ್ವಾಮಿ ಹೀಗೆ ನೂರಾರು ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ನಮ್ಮ ಸುತ್ತಮುತ್ತಲೂ ಇದ್ದಾರೆ.

ಪುಸ್ತಕ ಎಂದರೆ ಕೇವಲ ಪುಸ್ತಕ ಅಷ್ಟೇನಾ ಅದರಿಂದ ನಾವು ಕಲಿಯಬಹುದಾದ ವಿಷಯವೆಂದರೆ:

1 ಪ್ರಥಮವಾಗಿ ಪುಸ್ತಕ, ಪುಸ್ತಕವನ್ನು ಯಾವ ಭಾವದಲ್ಲಿ ಅಥವಾ ಹೇಗೆ ಓದಬೇಕು ಅನ್ನೋದನ್ನ ಕಲಿಸಿಕೊಡುತ್ತದೆ.

2 ಜೀವನ ಪಾಠದೊಂದಿಗೆ ಜ್ಞಾನವನ್ನು ಹೆಚ್ಚಿಸುತ್ತದೆ.

3 ತಾಳ್ಮೆಯನ್ನ ಕಲಿಸುತ್ತದೆ.

4 ಕಾಣದ ದೂರದ ಬರಹಗಾರರೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸುತ್ತದೆ.

5 ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ.

6 ಪುಸ್ತಕದಲ್ಲಿ ಬರುವ ಪಾತ್ರದಾರಿಗಳ ಅಂತರಾಳವನ್ನು ಅರ್ಥ ಮಾಡಿಸುತ್ತದೆ.

7 ಒಂದೇ ಪುಸ್ತಕವನ್ನು ಬೇರೆಬೇರೆ ಸಮಯದಲ್ಲಿ ಓದಿದಾಗ ಹೊಸದಾದ ಮತ್ತೊಂದು ಅನುಭವ ದೊರಕುತ್ತದೆ.

8 ಪುಸ್ತಕ ಒಂಟಿತನವನ್ನು ದೂರಮಾಡುತ್ತದೆ.

9 ಪುಸ್ತಕ ಓದುವುದರಿಂದ ಕಣ್ಣಿಗೆ ಒಳ್ಳೆಯ ವ್ಯಾಯಾಮ ದೊರೆಯುತ್ತದೆ.

10 ಒಂದೇ ಪುಸ್ತಕವನ್ನು ಬೇರೆ ಬೇರೆ ವ್ಯಕ್ತಿಗಳು ಓದಿದಾಗ ಅಭಿಪ್ರಾಯಗಳು ವಿಭಿನ್ನವಾಗಿರುತ್ತದೆ.

11 ದೂರದ ಹೊಸ ಜನ ಸಂಸ್ಕೃತಿ ಆಚಾರ-ವಿಚಾರ ಪರಿಸರ ಎಲ್ಲವನ್ನೂ ಅರ್ಥ ಮಾಡಿಸುತ್ತದೆ.

12 ಪುಸ್ತಕ ಓದಲು ಪ್ರಾರಂಭಿಸಿದಾಗ ಇರುವ ಮನಸ್ಸಿನ ಭಾವಗಳು ಓದಿದನಂತರ ಬದಲಾಗಿರುತ್ತದೆ.

ಇದರೊಂದಿಗೆ ಹೊಸ ಪುಸ್ತಕ ಹಾಗೂ ಹಳೆ ಪುಸ್ತಕಗಳನ್ನು  ತೆರೆದಾಗ ಬರುವ ಪರಿಮಳ ಹಾಗೂ ಸ್ಪರ್ಶ ಹೊಸ ಅನುಭವವನ್ನು ಕೊಡುತ್ತದೆ. ಇವುಗಳೇ ಪುಸ್ತಕಗಳ ಶಕ್ತಿಯಾಗಿದೆ.

ಹೀಗೆ ಕಲ್ಪಿಸಿಕೊಳ್ಳುವುದುದಾದರೆ ಪ್ರಪಂಚದ ಎಲ್ಲಾ ದೇಶಗಳ, ಎಲ್ಲಾ ಲೈಬ್ರರಿಗಳ, ಎಲ್ಲ ಲೇಖಕರ ಪುಸ್ತಕಗಳನ್ನು ಒಂದು ಗುಡಿಸಿದರೆ ಒಂದು ದೇಶವೇ ಮುಳುಗಿಸಬಹುದು ಎನ್ನುವಷ್ಟು ಪುಸ್ತಕಗಳು ಇರಬಹುದು ಅನಿಸುತ್ತದೆ, ಇವುಗಳ ಹೊರತಾಗಿಯೂ ಕೋಟ್ಯಾಂತರ ಪುಸ್ತಕಗಳು ಧರ್ಮಗ್ರಂಥಗಳು ರಾಜಮಹಾರಾಜರ ಯುದ್ಧಗಳಲ್ಲಿ ಸುಟ್ಟು ಕರಕಲಾಗಿವೆ. 

ಪುಸ್ತಕವನ್ನು ಓದುವುದರಿಂದ ಜ್ಞಾನವೇನು ಹೆಚ್ಚಾಗುತ್ತದೆ ಇದರೊಂದಿಗೆ ಪುಸ್ತಕ ತಯಾರಿಸುವ ಬಗ್ಗೆ ಇರುವ ಕೆಲ ವಿಷಯಗಳನ್ನು  ತಿಳಿದುಕೊಳ್ಳಲೇ ಬೇಕಾಗಿದೆ.

ಒಂದು ಸಾವಿರ ಕೆಜಿ ಕಾಗದ ತಯಾರಿಕೆಗೆ,

1. 3000 ಕೆಜಿ ನಾರಿನ ಮರದ ಅವಶ್ಯಕತೆ ಇರುತ್ತದೆ (ಉತ್ತಮ ಗುಣಮಟ್ಟದ ಆಫೀಸ್ A4 size  ಕಾಗದ ತಯಾರಿಕೆಗೆ 24 ಮರಗಳ ಅವಶ್ಯಕತೆ ಇರುತ್ತದೆ as per the 2019 report.) 

2. 450 ಕೆಜಿ ರಾಸಾಯನಿಕದ ಅವಶ್ಯಕತೆ ಇರುತ್ತದೆ.

3. ಯಂತ್ರ ಚಲನೆಗೆ 250 ಲೀಟರ್ ಶುದ್ಧ ನೀರು ಬಳಕೆಯಾಗುತ್ತದೆ.

4. ಕಾಗದ ತಯಾರಿಕಾ ಪ್ರಕ್ರಿಯೆಗೆ 160 ಟನ್ ಕುದಿವ ನೀರಿನ ಅವಶ್ಯಕತೆ ಇರುತ್ತದೆ.

5. ಹಾಗೂ ಇದೇ ಸಾವಿರ ಕೆಜಿ ಕಾಗದ ತಯಾರಿಕೆಗೆ 2.17 ಹೆಕ್ಟೇರ್ ಶ್ರೀಮಂತ ಅರಣ್ಯ ಕಣ್ಮರೆಯಾಗುತ್ತಿದೆ.

ಪುಸ್ತಕಗಳ ಒಳಾರ್ಥ ಬಹಳ ಸೂಕ್ಷ್ಮವಾಗಿದೆ ಇದನ್ನ ನಾವು ಗ್ರಹಿಸಲೇಬೇಕಾಗಿದೆ. ಪುಸ್ತಕಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಪ್ರಥಮವಾಗಿ ಮೊದಲು ಗೋಚರಿಸುವ ಮುಖ ಜ್ಞಾನವನ್ನು ಹೆಚ್ಚಿಸುವುದೇ ಆದರೂ ಮತ್ತೊಂದು ಮುಖ ಸದಾ ಕಾಗದ ತಯಾರಿಕೆಗೆ ಅವಶ್ಯಕತೆ ಇರುವ ಶ್ರೀಮಂತ ಅರಣ್ಯನಾಶವನ್ನು ಒತ್ತಿಹೇಳುತ್ತದೆ.

ಸರ್ವಕಾಲದಲ್ಲಿಯು ಜ್ಞಾನಕ್ಕೆ ಬೆಲೆ ಎಂಬುದು ನನಗೆ ಮೊದಲಿನಿಂದಲೂ ತಿಳಿದಿರುವ ವಿಚಾರವೇ, ರಾಮಾಯಣ ಮಹಾಭಾರತದ ಅಥವಾ ತ್ರೇತಾಯುಗ ದ್ವಾಪರಯುಗ ಕಾಲದಲ್ಲಿ ಅಗಾಧವಾದಂತಹ ಜ್ಞಾನ ಋಷಿ-ಮಿನಿಗಳಲ್ಲಿ ಅಡಕವಾಗಿತ್ತು, ಆಗಿನ ಕಾಲದಲ್ಲಿಯೂ ಜನರು ಜ್ಞಾನಾರ್ಜನೆಗಾಗಿ ಋಷಿಮುನಿಗಳ ಹಿಂದೆ ಓಡುತ್ತಿದ್ದರು, ಇದು ಕಲಿಯುಗ ಇಂದು ಕೂಡ ಜ್ಞಾನಾರ್ಜನೆಗಾಗಿ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರ ಮೊರೆ ಹೋಗುತ್ತಿದ್ದೇವೆ ಅಷ್ಟೇ, ಸಮಯ ಹಾಗೂ ಸ್ವರೂಪಗಳು ಬೇರೆ ಆದರೂ ಸರ್ವಕಾಲದಲ್ಲಿಯೂ ಜ್ಞಾನಕ್ಕೆ ಮನ್ನಣೆ,ಅಷ್ಟೆಲ್ಲಾ ಯಾಕೆ ನನ್ನಜ್ಜಿಯವರನ್ನ Vehicleನಲ್ಲಿ ಆಸ್ಪತ್ರೆಗೋ, ಬ್ಯಾಂಕಿಗೋ ಕರೆದುಕೊಂಡು ಹೋಗಿ ಬಂದರೆ 50-100 ತಪ್ಪದೇ ನೀಡುತ್ತಾರೆ, ಅದನ್ನ ನಾನು ಯಾವುದೇ ಖರ್ಚಿಗೆ ಬೆಳಸಿದೆ 500-1000 ರೂಪಾಯಿಗಳಾದಗ ಪುಸ್ತಕವನ್ನು ಕೊಂಡಿತರುತ್ತೇನೆ,ಪುಸ್ತಕವನ್ನು ಸಮಯವಾದಾಗ ಅವರ ಮುಂದೆ ಓದಿದಾಗ ಅವರ ಮುಖದಲ್ಲಿ ಕಾಣುವ ಆನಂದ ಹೇಳತೀರದು, ಹಾಗೆ ನಾನು ಅಂಕಣ ಬರೆಯಲು ಪ್ರಾರಂಭಿಸಿದ್ದೇನೆ ಎಂದು ವಿಷಯ ತಿಳಿದಾಗಲಂತು ಬಹಳ ಖುಷಿ ಪಟ್ಟಿದ್ದರು, ಅಲ್ಲಿಗೆ ಅವರು ಓದದೇ ಹೋದರೂ ಸಹ ಜ್ಞಾನಕ್ಕೆ ಬೆಲೆಕೊಟ್ಟಿರುವುದು ಎದ್ದಿ ಕಾಣುತ್ತದೆ.

ಇವತ್ತಿನ ಪರಿಸ್ಥಿತಿಯಲ್ಲಿ ನಮಗೆ ಜ್ಞಾನವು ಬೇಕು ಹಾಗೂ ಅರಣ್ಯ ಅಥವಾ ಪರಿಸರವು ಬೇಕು, ಪರಿಸರವನ್ನು ಹಾಳು ಮಾಡಿ ಜ್ಞಾನವನ್ನು ಸಂಪಾದಿಸಲು ಸಾಧ್ಯವೇ ಇಲ್ಲ. ಅಥವಾ ಜ್ಞಾನವನ್ನು ಸಂಪಾದಿಸಿ ಪರಿಸರವನ್ನು ಹಾಳುಗೆಡುವುದು ಮೂರ್ಖತನದ ಪರಾಕಾಷ್ಠೆಯಷ್ಟೇ ಅಲ್ಲದೆ ಮತ್ತೇನು ? ನಾವಿಂದು ಈ ವಿಷಯಗಳನ್ನು ಗಂಭೀರವಾಗಿ ಚಿಂತಿಸಲೇ ಬೇಕಾಗಿದೆ, ನೀವೊಮ್ಮೆ ಯೋಚಿಸಿ.

ಅಬ್ದುಲ್ ಕಲಾಂ ಅವರು ಒಂದು ಮಾತನ್ನ ಸದಾ ಹೇಳುತ್ತಿದ್ದರು

" ಒಂದು ಗಿಳಿಯನ್ನು ಸಾಕಿದ ಹಾರಿಹೋಯಿತು,

  ಒಂದು ಅಳಿಲನ್ನು ಸಾಕಿದ ಓಡಿಹೋಯಿತು,

 ಗಿಡವನ್ನು ನೆಟ್ಟೆ ಮರವಾಯಿತು ಎರಡು ಬಂದು ಮರ ಸೇರಿದವು"

ಈ ಮೂಲಕ ಗಿಡಗಳನ್ನು ನೆಟ್ಟು ಬೆಳೆಸಿ ಅವುಗಳಿಂದ ದೊರೆಯುವಂತಹ ಆನಂದವನ್ನು ಅರ್ಥೈಸಿಕೊಳ್ಳಬೇಕಾಗಿದೆ. ಇದರೊಂದಿಗೆ ಜ್ಞಾನ ಎಂಬುದು ಮುಳುಗದ, ಮುಗಿಯದ, ಕೊನೆಯಿಲ್ಲದ, ಮಹಾ ಸಮುದ್ರವೆಂದು ಅರ್ಥೈಸಿಕೊಳ್ಳುತ್ತಾ, ಈ ಮಹಾ ಸಮುದ್ರದಲ್ಲಿ ನಾವು ತಿಳಿದಿರುವುದು ಒಂದೇ ಒಂದು ಹನಿಯಷ್ಟು ವಿಷಯಗಳನ್ನು ಮಾತ್ರ ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಎಲ್ಲರಿಗೂ ಏಪ್ರಿಲ್ 23ರಂದು ನಡೆದ ವಿಶ್ವ ಪುಸ್ತಕ ದಿನದ ಶುಭಾಶಯಗಳು.

ಧನ್ಯವಾದಗಳು.





Saturday, April 10, 2021

ಆಗೋಚರತೆಯೊಳಗಿನ ಆದರ್ಶ.


 ಎಸ್ ಪಿ ತೇಜರಾಜು.

 ಮಕ್ಕಳನ್ನು ನಾವು ಚಿಕ್ಕವಯಸ್ಸಿನಲ್ಲಿ ಯಾವ ಪರಿಸರದಲ್ಲಿ ಬೆಳೆಸುತ್ತೇವೆ ಎಂಬ ಆಧಾರದ ಮೇಲೆಯೇ ತಾನೆ ಅವರು ಬೆಳವಣಿಗೆ ಹೊಂದುವುದು? ಆ ಬೆಳವಣಿಗೆಯಲ್ಲಿ ಕಲಿತ ವಿದ್ಯೆಯ ಆಧಾರದ ಮೇಲೆಯೇ ತಾನೆ ಅವರ ಮುಂದಿನ ಭವಿಷ್ಯ ನಿರ್ಧರಿಸುವುದು? ಹಾಗಾದರೆ ಈ ಮಕ್ಕಳ ಬೆಳವಣಿಗೆ ಹಂತದಲ್ಲಿ ನಾವು ಕಲಿಸ ಬೇಕಾಗಿರುವುದಾದರೂ ಏನನ್ನು? ಮಕ್ಕಳು ಅಳುತ್ತವೆ ಎಂದು ಅವರ ಕೈಗೆ ಮೊಬೈಲ್ಗಳನ್ನು ಕೊಡುವುದೋ? ಅಥವಾ ಅಳುತ್ತಲೇ ಇರಲಿ ಎಂದು ಸುಮ್ಮನಾಗುವುದೋ?

 ರಾಮಕೃಷ್ಣ ಪರಮಹಂಸರು, ಸ್ವಾಮಿ -ವಿವೇಕಾನಂದರು, ಶಿವಾಜಿ ಮಹಾರಾಜ್, ಮಹಾತ್ಮ ಗಾಂಧೀಜಿ ಹೀಗೆ ಹತ್ತು ಹಲವು ಮಹಾನ್ ವ್ಯಕ್ತಿಗಳ ಪೋಷಕರು ಇವರನ್ನು ಹೇಗೆ ಬೆಳೆಸಿದರು? ಕೆಲವೊಂದಿಷ್ಟು ಆದರ್ಶಗಳ ಆಧಾರದ ಮೇಲೆ ತಾನೆ? ಹಾಗಾದರೆ ನಾವೇಕೆ ಆ ಆದರ್ಶಗಳನ್ನು ಕಲಿಯಬಾರದು? ಕಲಿಯಲಿಕ್ಕೆ ಯಾವುದೇ ಅಡೆತಡೆಗಳಿಲ್ಲದೆ ಮನಸ್ಸೊಂದಿರಬೇಕಷ್ಟೆ ತಾನೇ? ಹಾಗಾದರೆ ನಾವೇಕೆ ಪ್ರಯತ್ನಿಸಬಾರದು ?

 ಮಹಾನ್ ವ್ಯಕ್ತಿಗಳ ಪೋಷಕರು ತಮ್ಮ ಮಕ್ಕಳು ಚಿಕ್ಕವರಿರುವಾಗ ದಯೆಯೇ ಧರ್ಮದ ಮೂಲ, ನಿಸರ್ಗವೇ ನಮ್ಮ ತಾಯಿ, ಅತಿಥಿಗಳೇ ನಮ್ಮ ದೇವರು, ನಾವೆಲ್ಲರೂ ದೇವರ ಮುಂದೆ ಸಮಾನರು,ಶತ್ರುವೇ ಆಗಿರಲಿ ಅವರಿಗೆ ಎಂದು ಕೇಡು ಬಯಸದಿರು ಎಂಬ ಕೆಲವೊಂದಿಷ್ಟು ನೀತಿ ಕಥೆಗಳನ್ನು ಹೇಳುತ್ತಿದ್ದರು, ಇದರೊಂದಿಗೆ ಆದರ್ಶ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಹೇಳುವುದರ ಮೂಲಕ ನೀವು ಇದೇ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದುದರಿಂದಲೇ ತಾನೇ ಅವರು ಮುಂದೊಂದು ದಿನ ಇನ್ನೊಬ್ಬರಿಗೆ ಮಾರ್ಗದರ್ಶನವಾಗಿದ್ದು.

 ಎಷ್ಟೇ ಆದರೂ ನಮ್ಮ ಈ ನೆಲ ಸರ್ವಜನಾಂಗದ ಶಾಂತಿಯ ತೋಟ ಎಂಬ ಆಧಾರದ ಮೇಲೆ ತಾನೇ ನೆಲೆನಿಂತಿರುವುದು. ನಮ್ಮ ಸುತ್ತಮುತ್ತಲೇ ಅನೇಕ ಮತ, ಪಂಥ, ಧರ್ಮಗಳ ಧರ್ಮಗ್ರಂಥಗಳು ಅವರ ಆಚಾರ - ವಿಚಾರಗಳು ವಿಶಿಷ್ಟವಾಗಿದ್ದರೂ ಕೂಡ ಕೊನೆಗೆ ದಯೆಯೇ ಧರ್ಮದ ಮೂಲ ಎಂಬುದನ್ನು ಸಾರುವುದಲ್ಲವೇ.

 ಈ ಭರತ ಖಂಡದಲ್ಲಿ ಅಡಗಿರುವ ಅಪಾರ ಜ್ಞಾನಭಂಡಾರವನ್ನು ಗ್ರಹಿಸಲೆಂದೇ ಪಶ್ಚಿಮ ದೇಶದವರು ಸಂಸ್ಕೃತವನ್ನು ಕಲಿತು ಶ್ಲೋಕದ ರೂಪದಲ್ಲಿರುವ ವೇದ, ಶಾಸ್ತ್ರ, ಪುರಾಣ ಸಾಹಿತ್ಯವನ್ನು ಅಧ್ಯಯನಮಾಡಿ ತಮ್ಮ ಭಾಷೆಗಳಿಗೆ ಭಾಷಾಂತರಿಸಿಕೊಂಡು ಮೇಧಾವಿಗಳಾಗಿ, ಹಿಂತಿರುಗಿ ನಮಗೆ ಬೋಧಿಸುತ್ತಿದ್ದಾರೆ. ಅದರಲ್ಲಿಯೂ ನಮ್ಮ ಧರ್ಮಗ್ರಂಥಗಳಾದಂತಹ ರಾಮಾಯಣ, ಮಹಾಭಾರತದಲ್ಲಿ ಅಡಗಿರುವಂತಹ ಜೀವನದ ರಹಸ್ಯವನ್ನು ತಿಳಿಸಿದ ವಾಲ್ಮೀಕಿಯವರನ್ನು ಸ್ಮರಿಸಿದ್ದಾರೆ, ಈ ಧರ್ಮ ಗ್ರಂಥವನ್ನು ಓದಿ ಅರ್ಥೈಸಿಕೊಂಡರೆ ಸಾಕು ಜೀವನದಲ್ಲಿ ಬರಬಹುದಾದಂತಹ ಯಾವುದೇ ಕಷ್ಟ  ಕಾರ್ಪಣ್ಯಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದಾಗಿರುವುದೇ ಇದಕ್ಕೆ ಉದಾಹರಣೆ.

ವಾಲ್ಮೀಕಿಯವರು ರಾಮಾಯಣದಲ್ಲಿ ಹೇಳಿರುವಂತೆ ರಾಮಾಯಣವನ್ನು ಅಥವಾ ಅದರ ಒಂದು ಶ್ಲೋಕವನ್ನು ಅಥವಾ ಒಂದು ಪಾದವನ್ನು ಭಕ್ತಿಯಿಂದ ಹೇಳಿದವನು ಬ್ರಹ್ಮನ ಲೋಕಕ್ಕೆ ಹೋಗುವನು ಬ್ರಹ್ಮನು ಅವನನ್ನು ಪೂಜಿಸುವನು ಎಂದು ಉತ್ತರಕಾಂಡದ ಕೊನೆಯಲ್ಲಿ ಹೇಳಲಾಗಿದೆ. ಈ ಮೂಲಕ ರಾಮಾಯಣ-ಮಹಾಭಾರತ ಪುಸ್ತಕಗಳಲ್ಲಿ ಜೀವನದ ಸಾರವನ್ನು ಎತ್ತಿ ಹಿಡಿಯಲಾಗಿದೆ.

ರಾಮ ಎಂದಕೂಡಲೇ ಎಡಪಂಥೀಯರಿಗೆ ಒಂದುರೀತಿಯ ತಾತ್ಸರ್ಯ ಇರಬಹುದು ಆದರೆ ನಮಗೆ ಬೇಕಾಗಿರುವುದು ಆದರ್ಶ ತಾನೇ? ಈ ಒಳ್ಳೆಯ ಆದರ್ಶವನ್ನು ನಾವು ಯಾರಿಂದ ತೆಗೆದುಕೊಂಡರೂ ಸ್ವಸ್ಥ ಸಮಾಜವನ್ನು ನಿರ್ಮಿಸಬಹುದಲ್ಲವೇ, ಹಾಗಾದರೆ ಶ್ರೀರಾಮನಲ್ಲಿರುವ ಕೆಲವು ಆದರ್ಶ ಗುಣಗಳನ್ನು ನೋಡೋಣ:

1 ಪಿತೃವಾಕ್ಯ ಪರಿಪಾಲಕ, ತಾನೆಂದೂ ಪೋಷಕರ ಮಾತನ್ನು ತಿರಸ್ಕರಿಸಿದವನಲ್ಲ.

2 ತಂದೆಯವರಿಗೆ ಅನೇಕ ಪಟ್ಟದ ರಾಣಿಯರೊಂದಿಗೆ ಇತರ ರಾಣಿಯರಿದ್ದರು ಸಹ, ಈತ ಏಕಪತ್ನೀವ್ರತಸ್ಥನಾಗಿ ಜೀವನ ನಡೆಸಿದ್ದು.

3 ತಮ್ಮಂದಿರ ಮೇಲೆ ಅಪಾರ ಪ್ರೀತಿ ಕಾಳಜಿಯನ್ನು ಇಟ್ಟಿದ್ದು.

4 ಹನುಮಂತನ ಸೇವೆಗಾಗಿ ತನ್ನನ್ನೇ ತಾನು ಸಮರ್ಥಿಸಿಕೊಂಡಿದ್ದು.

5 ಮಾಂಸಹಾರಿಯಾಗಿದ್ದರೂ ಪಟ್ಟಾಭಿಷೇಕವಾದ ಬಳಿಕ ಮಾಂಸಾಹಾರವನ್ನು ತ್ಯಜಿಸಿದ್ದು.

6 ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿದ್ದುದು.

7 ತನಗಾಗಿ ಕಾದಿದ್ದ ಶಬರಿಯನ್ನು ಬೇಟಿಯಾಗಿದ್ದು.

8 ದುಷ್ಟರ ಸಂಹಾರಕ್ಕಾಗಿ ಕಾಡು ಮೇಡು ಅಲೆದದ್ದು.

9 ಇತಿಹಾಸ ಸೃಷ್ಟಿಸುವಂತಹ ಸೇತುವೆ ನಿರ್ಮಾಣ ವಾಗಿದ್ದು.

10 ಪ್ರಜೆಗಳ ಯೋಗಕ್ಷೇಮಕ್ಕಾಗಿ ಶ್ರಮಿಸಿದ್ದು.

ಹೀಗೆ ಮೊದಲಾದ ಕಾರಣಗಳೇ ಜನರಿಗೆ ರಾಮ ಆದರ್ಶ ವ್ಯಕ್ತಿಯಂತೆ ಕಂಡಿದ್ದು, ಅದಕ್ಕೆಂದೇ ರಾಮಜನ್ಮಭೂಮಿಯಾದಂತಹ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಇಷ್ಟೆಲ್ಲಾ ಧರಣಿ ಹೋರಾಟಗಳು ನಡೆದದ್ದು, ಅದೇನೇ ಇರಲಿ ಯಾವ ಧರ್ಮವು ಸರ್ವಶ್ರೇಷ್ಠವು ಅಲ್ಲ ಕನಿಷ್ಠರೂ ಅಲ್ಲ, ಬದಲಿಗೆ ಪ್ರತಿಯೊಬ್ಬ ಮಾನವನಲ್ಲಿರುವ ಪ್ರೀತಿ ವಿಶ್ವಾಸವನ್ನುಗಳಿಸಿಕೊಂಡು, ಇತರರಿಗೆ ಕೈಲಾದ ಸಹಾಯವನ್ನು ಮಾಡಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳುವುದಾಗಿದೆ. 

ಸೂಕ್ಷ್ಮವಾಗಿ ಗಮನಿಸುವುದಾದರೆ, ನಾವು ಯುಗಾದಿ ಹಬ್ಬಕ್ಕೂ ಮುನ್ನ ದೇಶದ ಉದ್ದಗಲಕ್ಕೂ ಹೋಳಿ ಅಥವಾ ಕೆಲ ಹಳ್ಳಿಗಳಲ್ಲಿ ಉಯ್ಯೋ ಉಯ್ಯೋ ಮಳೆರಾಯ ಹಬ್ಬವನ್ನು ಆಚರಿಸಿದ್ದೆವು, ಈ ಬೇಸಿಗೆ ಸಮಯದಲ್ಲಂತೂ  ಈ ಹಬ್ಬ ಎಲ್ಲ ಮಕ್ಕಳಿಗೂ ಬಹಳ ಖುಷಿಯನ್ನು ನೀಡಿತು, ಈ ಹಬ್ಬದ ಒಳ ರಹಸ್ಯ ಧಾರ್ಮಿಕ ಆಚರಣೆ ಒಂದು ಬದಿ ಆದರೆ ಬೇಸಿಗೆಯಲ್ಲಿ ಮಕ್ಕಳು ನೀರಿನಲ್ಲಿ ಆಟವಾಡಿದರು ಸಹ ಯಾವುದೇ ಸಣ್ಣಪುಟ್ಟ ಕಾಯಿಲೆಗಳಿಗೆ ಒಳಗಾಗದಿರುವುದೇ ಆಗಿದೆ.

ಹೀಗೆ ನೀವೇನಾದರೂ ಚೈತ್ರಮಾಸ ಮೊದಲ ಹಬ್ಬವಾದ ಯುಗಾದಿಯ ಬಿಸಿಲಿನಲ್ಲಿಯೂ ಸಹ ನಳನಳಿಸಿ ಚಿಗುರುವ ವೃಕ್ಷಗಳ ಆನಂದವನ್ನು ಗ್ರಹಿಸಲು ಪ್ರಯತ್ನಪಟ್ಟರೆ ಅಥವಾ ಈ ಬೇಸಿಗೆ ಸಮಯದಲ್ಲಿ ಪಾನಕ ಅಥವಾ ಮಜ್ಜಿಗೆಯನ್ನು ದಣಿದವರಿಗೆ ಕೊಟ್ಟು ಅವರ ಬಾಯಾರಿಕೆಯನ್ನು ಸ್ವಲ್ಪವಾದರೂ ಕಡಿಮೆ ಮಾಡಲು ಪ್ರಯತ್ನಿಸಿದರೆ, ಅಥವಾ ಇದೇ ಸಂದರ್ಭದಲ್ಲಿ ಬಾಯಾರಿ ದಣಿದಿರುವ ಪ್ರಾಣಿ-ಪಕ್ಷಿಗಳಿಗೆ ಆಹಾರ ನೀರನ್ನು ನೀಡಿ ಅದರ ಬಾಯಾರಿಕೆಯನ್ನು ಸ್ವಲ್ಪವಾದರೂ ಕಡಿಮೆ ಮಾಡಿದರೆ ನಿಮ್ಮೊಳಗಿನ ರಾಮನನ್ನು ಜಾಗೃತಗೊಳಿಸಿದಂತಾಗುತ್ತದೆ,  ಹಾಗೂ ನಮ್ಮನ್ನು ಸದಾ ಹಿಂಬಲಿಸುವ ಮುಂದಿನ ಪೀಳಿಗೆಗೆ ಸನ್ಮಾರ್ಗವನ್ನು ಕಲಿಸಿ ಕೊಟ್ಟಂತಾಗುತ್ತದೆ, ಹೀಗೆ ಈ ರೀತಿಯ ಕಾರ್ಯಗಳಲ್ಲಿ ಅಡಕವಾಗಿರುವಂತಹ ಆಗೋಚರತೆಯೊಳಗಿನ ರಾಮನ ಆದರ್ಶವನ್ನು ನಾವು ಅರಿತಂತಾಗುತ್ತದೆ.

ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ಮುಂದೆ ಬರುವ ರಾಮನವಮಿಯ ಹಬ್ಬದ ಶುಭಾಶಯಗಳು

ಧನ್ಯವಾದಗಳು. 





Saturday, April 3, 2021

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


.                               
                              ಎಸ್ ಪಿ ತೇಜ ರಾಜು.

ನಾ ಲೋಕ ಕಾಣುವ ಮುನ್ನ ನನ್ನ ತಾಯಿಯನು

ಮಡಿಲಲ್ಲಿ ಬೆಳೆಸಿದಾಕೆ ನೀನು

ಅವಳಾಟದ ಏಳುಬೀಳುಗಳನ್ನು ತಿದ್ದಿ-ತೀಡಿ

ಬೆಳೆಸಿದಾಕೆ ನೀನು

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


ನಿನ್ನ ಮಡಿಲಲಿ ಬೆಳೆದಾಕೆಗೆ ತರುಲತೆ ಬಳ್ಳಿಗಳಲಿ

ಬೆಳೆದ ಹಣ್ಣು ಹಂಪಲನ್ನು ಉಣಬಡಿಸಿದೆ ನೀನು

ಬಿದ್ದ ಗಾಯಕ್ಕೆ ಗಿಡಮೂಲಿಕೆ ಔಷಧೀಯ

ತೋರಿಸಿಕೊಟ್ಟು ಉಪಚರಿಸಿದೆ ನೀನು.

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


ಕಾಡಿನಲ್ಲಿ ಅಲೆವಾಗ ಸ್ವಚ್ಛಂದವಾಗಿ ನಲಿಯುವ

ಪ್ರಾಣಿ-ಪಕ್ಷಿ, ಖಗ ಮೃಗ ಪರಿಚಯಿಸಿದೆ ನೀನು,

ಬಾನಲ್ಲಿ ಭೋರ್ಗರೆದ ಗುಡುಗಿನ ಶಬ್ದಕ್ಕೆ

ಹೆದರದಂತೆ ಮಡಿಲಲ್ಲಿ ಹಾರೈಕೆಗೈದೆ ನೀನು,

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


ನಿನ್ನ ಮಗಳು ಬೆಳೆದು ನನ್ನನ್ನು ಹಡೆದಾಗ

ನಮ್ಮಿಬ್ಬರನ್ನು ಅಕ್ಕರೆಯಿಂದ ಪೋಷಿಸಿದೆ ನೀನು,

ತಾಯಿಗೆ ತೋರಿದ ಪ್ರೀತಿಯಷ್ಟನ್ನು ನನಗೂ

ತೋರಿ ಮಡಿಲಲ್ಲಿ ಬೆಳೆಸಿರುವೆ ನೀನು,

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


ನಾ ಬೆಳೆದು ನಿನ್ನ ಜಗತ್ತಿನಲ್ಲಿ ಅಲೆವಾಗ ನನ್ನೊಂದಿಗೆ,

ನೂರಾರು ಕೋಟಿ ಜೀವಿಗಳಿಗೆ ಆಶ್ರಯ ನೀಡಿರುವೆ ನೀನು

ನನ್ನ ತಾಯಿಯಷ್ಟೇ ನಿರ್ಲಿಪ್ತ ಸೇವೆಯೇ ನಿನ್ನದು,

ನನಗೆ ನೀನು ಬೇರೆಯಲ್ಲ ಆಕೆ ಬೇರೆಯಲ್ಲ,

ನಿನ್ನೆಲ್ಲ ಲಕ್ಷಣಗಳನ್ನು ಅವಳಲ್ಲಿ ಕಂಡಿಹೆನು,

ಆ ನಿನ್ನ ಸೇವೆಗೆ ನಾ ಏನ ಕೊಡಲಿ ?


ನೀ ಸದಾ ಹಳೆಬೇರು ಹೊಸಚಿಗುರು ಚಿರಯೌವನ ತಾರೆ, 

ಕೊನೆಯಿಲ್ಲದ ನಿನ್ನ ಯೌವ್ವನ ಶಾಶ್ವತವಾಗಿಹುದು,

ನಾವೆಲ್ಲ ನಿನ್ನ ಮಡಿಲ ಕೈಗೊಂಬೆಗಳು,

ನೀ ಬೆಳೆಸಿದಂತೆ ನಾವು ಬಾಳುವೆವು,

ನಿನ್ನ ಪ್ರೀತಿ ವಾತ್ಸಲ್ಯಕ್ಕೆ ಚಿರಋಣಿಯಾಗಿಹೆವು,

ಕೈಬೀಸಿ ಕರೆದಾಗ ಹರುಷದಿ ನಿನ್ನ ಮಡಿಲ ಸೇರುವೆವು.


ಆ ನಿನ್ನ ಅಕ್ಕರೆಯ ಸೇವೆಗೆ ನಾ ಏನ ಕೊಡಲಿ ?