- ಎಸ್.ಪಿ.ತೇಜರಾಜು.
ನಾವೆಲ್ಲರೂ ಕೂಡ ನಮ್ಮ ಸುತ್ತಮುತ್ತ ನಡೆಯುತ್ತಿರುವ ನಾನಾ ವಿಷಯಗಳನ್ನು ಕೇಳಿ, ತಿಳಿದು, ನೋಡಿ ಬೆಳೆದವರು ಹಾಗೂ ಇಂದಿಗೂ ಕೂಡ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ಬೆಳೆಯುತ್ತಿರುವವರೆ.
ಇಲ್ಲಿಯ ಜನದಟ್ಟಣೆ, ವಾಹನಗಳು ಓಡಾಡುವ ಶಬ್ದ, ನಾನಾ ಕಾರಣಗಳಿಂದ ನಡೆಯುವ ಕೊಲೆ, ದರೋಡೆ, ಮೋಸ, ಸುಲಿಗೆ, ಸದಾ ತುಂಬಿಹರಿಯುವ ಮೋರಿಗಳು ಹಾಗೂ ಅದರ ದುರ್ಗಂಧ, ನಾವು ಕೂಡ ನಾಲ್ಕು ಜನರಂತೆ ಬಾಳಬೇಕೆಂದು ನಗರಗಳಿಗೆ ವಲಸೆ ಬರುವ ಅಪಾರ ಜನಸಮೂಹ, ಒಬ್ಬರೇ ದುಡಿದರೆ ಮನೆ ನಿರ್ವಹಿಸಲಾಗುವುದು ಇಲ್ಲವೆಂದು ಭವಿಷ್ಯದ ಒಳಿತಿಗಾಗಿ ಹಗಲಿರುಳೆನ್ನದೆ ದುಡಿಯುವ ಜನ, ಸ್ವಂತ ಮನೆಯವರು ಬಾಡಿಗೆ ಮನೆಯವರಿಗೆ ತೋರುವ ತಾರತಮ್ಯ, ಯಾವುದೋ ಸಣ್ಣ ಪುಟ್ಟ ವಿಷಯಗಳಿಗೆ ನೆರೆಯವರೊಂದಿಗೆ ಜಗಳವಾಡಿ ಸಾಯುವವರೆಗೂ ಮಾತನಾಡದ ಜನ, ಹಾಗೂ ಇನ್ನೂ ಕೆಲವೆಡೆ ವಿಶಾಲ ರಸ್ತೆಗಳು ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಿಸುವಂತಹ ಬೆರಳೆಣಿಕೆಯಷ್ಟು ಜನ, ಇರುವ ಜಾಗವು ಸಾಕಾಗದೆ ರಸ್ತೆ ಹಾಗೂ ಮೋರಿಗಳ ಮೇಲು ಕಟ್ಟಿರುವ ಮನೆಗಳು ಹಾಗು ಇಲ್ಲಿ ವಾಸಿಸುವ ಅಪಾರ ಜನ ಹೇಳುತ್ತಾ ಹೋದರೆ ಪಟ್ಟಿಗಳು ಬೆಳೆಯುತ್ತಾ ಹೋಗುತ್ತದೆ.
[ ಒಮ್ಮೆ ಬೆಂಗಳೂರನ್ನು ನೆನಪಿಸಿಕೊಳ್ಳಿ]
ಮಕ್ಕಳ ಭವಿಷ್ಯವೇ ಮುಖ್ಯವೆಂದು ಕೆಲವಷ್ಟು ಜನರನ್ನು ತೋರಿಸಿ ನೀವು ಕೂಡ ಹೀಗಾಗಬೇಕು ಎನ್ನುವ ಪೋಷಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಹಾಗೆ ಶಾಲಾ-ಕಾಲೇಜುಗಳಿಗೆ ಸೇರಿಸುತ್ತಾರೆ. ಶ್ರೀಮಂತರು ತಮ್ಮ ಮಕ್ಕಳನ್ನು ಬಹಳ ಹಣ ತೆತ್ತು ಶಾಲೆಗಳಿಗೆ ಸೇರಿಸುತ್ತಾರೆ ಬೇಸಿಗೆಯ ರಜದ ಸಮಯ ಹಾಳಾಗಬಾರದೆಂದು summer camp, music class, swimming clasಗಳಿಗೆ ಸೇರಿಸುವುದರ ಜೊತೆಗೆ ತಮ್ಮೊಟ್ಟಿಗೆ ಒಂದಕ್ಕೆ ಎರಡರಷ್ಟು ಖರ್ಚಾಗುವ ದೊಡ್ಡ ದೊಡ್ಡ Mallಗಳಿಗೆ, Entertainment park,Hotel, Movie theater ಗಳಿಗೆ ಕರೆದುಕೊಂಡು ಹೋಗುತ್ತಾರೆ.
ಇತ್ತ ಬಡವರು ತಮ್ಮ ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ಕಳುಹಿಸಿ ಕೊಂಡು ಜೀವನ ನಡೆಸುತ್ತಾರೆ ಬೇಸಿಗೆಯ ರಜೆಗೆ ಮಕ್ಕಳನ್ನು ಪಕ್ಕದಲ್ಲೇ ಇರುವ ದೇವಸ್ಥಾನಗಳಿಗೂ ಪಾರ್ಕ್ ಗಳಿಗೂ ಹಾಗೂ ಮಕ್ಕಳೊಂದಿಗೆ ಆಟವಾಡಿಕೊಂಡು ಕಾಲಕಳೆಯುತ್ತಾರೆ.
ಆನೆಗೆ ಆನೆ ಬಾರ ಇಲಿಗೆ ಇಲಿಯಬಾರ ಎಂಬಂತೆ ಶ್ರೀಮಂತರು ತಮ್ಮ ಸಮಯವನ್ನೆಲ್ಲವನ್ನು ತಾವು ಮಾಡುವ ಖರ್ಚುಗಳನ್ನು ಸರಿದೂಗಿಸಲು ಹಣ ಸಂಪಾದಿಸುತ್ತಾರೆ ಅದೇ ಬಡವ ತನ್ನ ಖರ್ಚುಗಳ ಆದಂತಹ ಮನೆ ಬಾಡಿಗೆ, Electricity bill, Water bill, cable charge, Traveling expenses, Medical expenses, Food, Different loan premium etc, ಹೀಗೆ ನಾನಾ ರೀತಿಯ ಖರ್ಚುಗಳಿಗೆ ಹಣ ಹೊಂದಿಸುವುದುರಲ್ಲಿ ತನ್ನ ಜೀವನದ ಸಮಯವನ್ನು ಕಳೆದು ಬಿಡುತ್ತಾರೆ.
ಇವುಗಳ ನಡುವೆ ಮಕ್ಕಳು ತನ್ನ ಸುತ್ತಮುತ್ತಲಿರುವ ಸ್ನೇಹಿತರೊಂದಿಗೆ ಬೆರೆತು ಕೇವಲ ನಗರದ ಪರಿಧಿಯ ಚೌಕಟ್ಟಿನೊಳಗೆ ತಮಗೆ ಅರಿವಿಲ್ಲದೆ ಬೆಳೆಯುತ್ತಾರೆ. ಹಾಗೆ ಈ ರೀತಿ ನಗರಗಳಓಳಗೆ ಬದುಕುವುದನ್ನು ಜೀವನವೆಂದು ಅರ್ಥ ಮಾಡಿಕೊಂಡು ಬಿಡುತ್ತಾರೆ.
ಹೀಗೆ ಬೆಳೆದ ಶ್ರೀಮಂತರ ಮಕ್ಕಳುಗಳು ಇನ್ನಷ್ಟನ್ನು ಸಂಪಾದಿಸಿ ವಿಲಾಸಿ ಜೀವನಕ್ಕೆ ಹೊಂದಿಕೊಳ್ಳುತ್ತಾರೆ ಹಾಗೂ ಬಡವರ ಮಕ್ಕಳು ಬೆಳೆದು ದಿನದ ಖರ್ಚುಗಳಿಗೆ ಸಾಲ ಮಾಡಿ ಕೆಲವು ದುಷ್ಚಟಗಳಿಗೆ ದಾಸರಾಗುತ್ತಾರೆ.
ಹೀಗೆ ಎರಡು ವಿಧವಾದ ಜನಸಮೂಹವು ಕೂಡ ತಮ್ಮ ಮಕ್ಕಳಿಗೆ ಹೇಳಿಕೊಡ ಬೇಕಾದಂತಹ ಸ್ಪೂರ್ತಿದಾಯಕ ವಿಷಯಗಳನ್ನು ಮರೆತೇ ಬಿಡುತ್ತಾರೆ ಅವುಗಳೆಂದರೆ
ತಂದೆತಾಯಿಗಳು ಹಳ್ಳಿಯಲ್ಲಿ ತೋಟ ಮಾಡಲು ಪಟ್ಟಂತಹ ಶ್ರಮ, ಅವರ ಮಡಿಲಿನಲ್ಲಿ ಬೆಳೆಯುವ ಪ್ರೀತಿ, ತೋಟದಲ್ಲಿ ಬೆಳೆಯುವ ನಾನಾ ರೀತಿಯ ಹಣ್ಣು ಹೂವುಗಳು, ನಿಸರ್ಗದ ಕಾಲಚಕ್ರಕ್ಕೆ ತಕ್ಕಂತೆ ಬದಲಾಗುವ ತೋಟದ ಬೆಳವಣಿಗೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜಮೀನಿನ ಸಮೃದ್ಧಿಗಾಗಿ ದುಡಿಯುತ್ತಿರುವ ಅಂತಹ ಎರೆಹುಳುಗಳು, ಜೇನುನೊಣಗಳು, ಇರುವೆಗಳು, ಗೆದ್ದಲು ಹುಳುಗಳು, ಜೇಡ, ಚಿಟ್ಟೆ, ಹಾವು, ಕಪ್ಪೆಗಳೊಂದಿಗೆ ನಡೆಸುವ ಸೌಹಾರ್ದಯುತ ಜೀವನ, ಹೂ ಕಾಯಾಗಿ ಕಾಯಿ ಹಣ್ಣಾಗಿ ಬದಲಾಗುವ ರೀತಿ, ಎಲ್ಲ ಜನರೊಂದಿಗೆ ಪ್ರೀತಿ ವಿಶ್ವಾಸದಲ್ಲಿ ಬೆಳೆಯುವ ರೀತಿ, ಶ್ರಮಜೀವನ, ನೀರಿನ ಮಿತಬಳಕೆ, ಒಂದೇ ಒಂದು ಬೀಜದಿಂದ ಒಂದು ಹಿಡಿಯಷ್ಟು ಬೆಳೆಯನ್ನು ತೆಗೆಯುವ ಕಲೆ, ಗಿಡದ ತುಂಬಾ ತುಂಬಿರುವಂತಹ ಹಣ್ಣುಗಳನ್ನು ತೋರಿಸಿ ನೀವು ಕೂಡ ಹೀಗೆ ನಾಲ್ಕು ಜನರಿಗೆ ಉಪಕಾರ ವಾಗುವಂತೆ ಬದುಕಬೇಕೆಂದು ಹೇಳಿಕೊಡಬೇಕಾದ ನೀತಿ ಪಾಠಗಳು ಎಲ್ಲವನ್ನೂ ಹೇಳಿ ಕೊಡಲಿಲ್ಲ ಏಕೆ? ಇವರುಗಳಿಗೆ ತಮ್ಮ ಪೋಷಕರು ಮಾಡಿದಂತಹ ಕಾರ್ಯ ಮಾದರಿಯಾಗಲಿ ಇಲ್ಲ ಏಕೆ? ಎಂದೆಲ್ಲಾ ಇವರುಗಳಿಗೆ ಪ್ರಶ್ನಿಸಲಾಗುವುದಿಲ್ಲ ಏಕೆಂದರೆ ಈ ರೀತಿಯ ಬದಲಾವಣೆಗಳೆಲ್ಲವೂ ನಿಮಗೋಸ್ಕರ ಎನ್ನುತ್ತಾರೆ.
ಇಂತಹ ಬದಲಾವಣೆಯ ಬೆಳವಣಿಗೆಗಳು ನಮ್ಮ ಮನೆಗಳಿಗೆ ಅನ್ವಯವಾಗುವಂತೆ ನಮ್ಮ ದೇಶಕ್ಕೂ ಕೂಡ ಅನ್ವಯವಾಗುತ್ತದೆ. ಪ್ರಪಂಚದ ಪುಟ್ಟ ರಾಷ್ಟ್ರಗಳಲ್ಲಿ ಒಂದ್ ಆಗಿರುವಂತಹ, ಜಗತ್ತಿಗೇ ಮಾದರಿಯಾದ, ನಮ್ಮ ದೇಶದ ಗಡಿಗೆ ಹೊಂದಿಕೊಂಡಿರುವ ಪುಟ್ಟರಾಷ್ಟ್ರ ಭೂತಾನ್
ಈ ಪುಟ್ಟ ರಾಷ್ಟ್ರದಿಂದ ನಾವು ಕಲಿಯಬೇಕಾಗಿರುವುದು ಬಹಳಷ್ಟಿದೆ ಅವುಗಳಲ್ಲಿ ಮುಖ್ಯವಾದವುಗಳೆಂದರೆ
1.ನಿಸರ್ಗ ಸ್ನೇಹಿ ಜೀವನ: ದೇಶದ %71 ಭೂಭಾಗ ಹಸಿರಿನಿಂದ ಕಂಗೊಳಿಸುತ್ತಿದೆ.
2.ಪ್ರಪಂಚದ ಮೊದಲ Corbon negative ರಾಷ್ಟ್ರವಾಗಿದೆ.
3. ಮಹಿಳೆಯರಿಗೆ ಸಮಾನ ಗೌರವ ಹಾಗೂ ಸ್ಥಾನಮಾನಗಳನ್ನು ನೀಡಲಾಗಿದೆ.
4.400 ವರ್ಷಗಳ ಇತಿಹಾಸವುಳ್ಳ ವೇಷಭೂಷಣವನ್ನು ಇಂದಿಗೂ ಪಾಲಿಸುತ್ತಿದೆ.
5.ರಾಸಾಯನಿಕ ಕೃಷಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
6.ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ವಸತಿ ಸೌಕರ್ಯವನ್ನು ಒದಗಿಸಲಾಗಿದೆ.
7.ಪ್ರಪಂಚದ ಮೊದಲ ತಂಬಾಕು ಬೆಳೆ ನಿಷೇಧಿಸಿದ ರಾಷ್ಟ್ರವಾಗಿದೆ.
8.ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ತನ್ನ ದೇಶದ ಜನರ ಸಂತೋಷವನ್ನು ಅಳೆಯುವ ಸಮಿತಿಯನ್ನು ಕಾರ್ಯರೂಪಕ್ಕೆ ತಂದಿದೆ[GNH:Gross national happyness committee]
9.ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ Decorationಗಳನ್ನು ತಮ್ಮ ಸಂಸ್ಕೃತಿಗೆತಕ್ಕ ಹಾಗೆ ತಾವೇ ಮಾಡಿಕೊಳ್ಳುತ್ತಾರೆ.
10.ಒಂದೇ ಒಂದು Traffic signalಗಳಿಲ್ಲದ ರಾಷ್ಟ್ರವಾಗಿದೆ.
ಈರೀತಿ ಅರ್ಥಪೂರ್ಣ ಜೀವನವನ್ನು ನಡೆಸು ತ್ತಿರುವ ರಾಷ್ಟ್ರ ನಮಗಿಂದು ಮಾದರಿಯಾಗಬೇಕಿದೆ. ನಮ್ಮ ಸರ್ಕಾರಗಳ ಪರಿಸ್ಥಿತಿಗಳು ನಮಗೆ ಚೆನ್ನಾಗಿ ತಿಳಿದಿದೆ. ಇಂತಹ ಸಂದರ್ಭದಲ್ಲಿ ಈ ಮಾದರಿಗಳನ್ನು ದೇಶಕ್ಕೆ ಅಳವಡಿಸಿಕೊಳ್ಳಲಾಗಿದೆ ಇದ್ದಾಗ, ನಾವೆಲ್ಲರೂ ಇಂತಹ ಆಯ್ಕೆಗಳನ್ನು ನಮ್ಮ ಮನೆಗಳಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಮರಳಿ ಮಣ್ಣಿಗೆ ಹಿಂತಿರುಗಿದ್ದೆ ಆದಲ್ಲಿ ನಮ್ಮ ದೇಶವು ಕೂಡ ಭೂತಾನ್ ರಾಷ್ಟ್ರದಂತೆ ಜಗತ್ತಿಗೆ ಮಾದರಿಯಾಗುತ್ತದೆ.

👏👏
ReplyDeletenice thoughts
ReplyDelete👌
ReplyDeleteSpr dude
ReplyDeletePrasu druva.... Spr dude
ReplyDelete