- ಎಸ್.ಪಿ.ತೇಜರಾಜು.
ಜಗತ್ತು ವೇಗವಾಗಿ ಮುಂದುವರೆದಿದೆ,
ಆದರೆ ಆ ವೇಗದಲ್ಲಿ ವಿನಯವಿಲ್ಲ,
ವಿಚಾರವಿಲ್ಲ ಮೌಲ್ಯಗಳಿಲ್ಲ.
- ಶ್ರೀ ಶ್ರೀ ಸಿದ್ದಗಂಗಾ ಶ್ರೀಗಳು.
ಇಂತಹ ಮಹನೀಯರು, ಕಾಲಜ್ಞಾನಿಗಳು ಹೇಳಿರುವಂತಹ ಮಾತುಗಳು ಸರ್ವಕಾಲಿಕ ಸತ್ಯವಾಗಿದೆ. ನಾವಿಂದು ಎಲ್ಲಾ ವಿಷಯಗಳಲ್ಲಿಯೂ ನಮ್ಮತನವನ್ನು ಕಳೆದುಕೊಂಡಿದಾಗಿದೆ ಹಾಗೂ ಎಲ್ಲಾ ವಿಷಯಗಳಲ್ಲಿಯೂ ವಿದೇಶಿಯರನ್ನು ಅನುಸರಿಸುತ್ತಿದ್ದೇವೆ. ಅಭಿವೃದ್ಧಿ ಎಂಬ ಹೆಸರಿನಲ್ಲಿ ಕೃಷಿಯಾಧಾರಿತವಾದ ದೇಶವನ್ನು ಸೇವಾ ವಲಯದ ಕಡೆಗೆ ತಿರುಗಿಸಲಾಗಿದೆ ಹೀಗಾಗಿ ಕೃಷಿಗಿಂತಲೂ ಹೆಚ್ಚು ಸೇವಾ ವಲಯಗಳಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿದೆ. ವಿದ್ಯಾವಂತ ಹಾಗೂ ಪಟ್ಟಣದ ನಾಲ್ಕು ಜನರಿಗೆ ಉದ್ಯೋಗ ದೊರಕುತ್ತದೆ ಇದರಿಂದ ಅವರ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುವುದರೊಂದಿಗೆ ದೇಶದ ಬೊಕ್ಕಸಕ್ಕೆ ಹಣವರಿದುಬರುತ್ತದೆ ಎಂಬ ಮಹದಾಸೆಯಲ್ಲಿ ಹೊರದೇಶದ ಕಂಪನಿಗಳಿಗೆ ಕೆಂಪು ಹಾಸನ್ನು ಹಾಸಿ ಕರೆದುಕೊಂಡಿದ್ದರಿಂದ ನಮ್ಮ ಪರಿಸ್ಥಿತಿಗಳು ಅದೋಗತಿಗೆ ತಲುಪಿದೆ. ಎಷ್ಟೇ ಆದರೂ ಕೈಗಾರೀಕರಣಕ್ಕೆ ಹೆಚ್ಚು ಮಹತ್ವವನ್ನು ನೀಡುವುದೇ ಈ ಅಭಿವೃದ್ಧಿಯ ಅರ್ಥವಾಗಿದೆ ಅಲ್ಲವೇ?
ಇಷ್ಟೆಲ್ಲಾ ಯೋಜನೆಗಳು ಬಂದರೇನು ಬಡವರ ಸಂಖ್ಯೆ ಕಡಿಮೆಯಾಗಿದೆ ? ಯಾರಿಗಾಗಿ ಈ ಬೆಳವಣಿಗೆ ? ಯಾರಿಗಾಗಿ ಈ ಅಭಿವೃದ್ಧಿ? ನಮ್ಮ ನಿಸರ್ಗವನ್ನು ಹಾಳುಮಾಡಿಕೊಂಡು ಹೊರದೇಶಗಳ ಕಂಪನಿಗಳನ್ನು ಉದ್ಧಾರ ಮಾಡುವ ಉಸಾಬರಿ? ಈ ಎಲ್ಲ ಯೋಜನೆಗಳು ಎಷ್ಟು ಜನರನ್ನು ತಲುಪಿವೆ? ಈ ಎಲ್ಲ ಯೋಜನೆಗಳಿಂದ ತಮ್ಮ ಜೇಬು ತುಂಬಿಕೊಂಡಿರುವ ಒಂದಷ್ಟು ರಾಜಕಾರಣಿಗಳು ಹಾಗೂ ಅಧಿಕಾರಿಗಳು.
ಸರಕಾರದ ಅನೇಕ ಯೋಜನೆಗಳಿಂದ ನಿಸರ್ಗದ ಮೇಲಾದ ದೌರ್ಜನ್ಯಗಳನ್ನು ನಾವಿಂದು ತಿಳಿದುಕೊಳ್ಳಲೇಬೇಕಾಗಿದೆ.
1. ಹುಬ್ಬಳ್ಳಿಯಿಂದ ಅಂಕೋಲಾಗೆ ರೈಲ್ವೆ ಯೋಜನೆ ಕಾರ್ಯಗತಿಯಲ್ಲಿದ್ದು ಇದಕ್ಕಾಗಿ 2,50,000 ಮರಗಳನ್ನು ಕಡಿಯಲಾಗುತ್ತಿದೆ ಹಾಗೂ 1472 ಎಕರೆ ಅರಣ್ಯ ಪ್ರದೇಶ ನಾಶವಾಗುತ್ತದೆ.
2. 2011- 2019 ರೊಳಗೆ ಬೆಂಗಳೂರು ಜಿಲ್ಲೆಯೊಂದರಲ್ಲೇ ಅನೇಕ ಯೋಜನೆಗಳಿಗಾಗಿ 50,000 ಮರಗಳನ್ನು ಧರೆಗುರುಳಿಸಲಾಗಿದೆ.
3.ಮೈಸೂರಿನಿಂದ ಕೇರಳಕ್ಕೆ ವಿದ್ಯುತ್ ಸಂಪರ್ಕಕೆಂದು 54,000 ಮರಗಳನ್ನು ಧರೆಗುರುಳಿಸಲಾಗಿದೆ.
4.ಕಾಳಿ ನದಿಯೊಂದಕ್ಕೆ ಐದು ಅಣೆಕಟ್ಟುಗಳನ್ನು ಕಟ್ಟಲಾಗಿದೆ ಇದರಿಂದ 32,000 ಎಕರೆ ಕಾಡು ನಾಶವಾಗಿದೆ.
5. ಮಡಿಕೇರಿಯಲ್ಲಿ ಕೇವಲ ಒಂದು ರೆಸಾರ್ಟ್ ನಿರ್ಮಾಣಕ್ಕಾಗಿ 800 ಮರಗಳನ್ನು ಕಡಿಯಲಾಗಿದೆ.
6.ಎತ್ತಿನಹೊಳೆ ಯೋಜನೆಗೆಂದು ಅಪೂರ್ವ ಪಶ್ಚಿಮ ಘಟ್ಟದ ಜೀವ ವೈವಿಧ್ಯದ ಕೊಂಡಿಯನ್ನು ನಾಶಪಡಿಸಲಾಗುತ್ತಿದೆ.
7. ಕುದುರೆಮುಖದ ಕಬ್ಬಿಣದ ಅದಿರಿನ ಕಾರ್ಖಾನೆಗೆ ಎಂದು ನಿರ್ಮಿಸಲಾದ ಲಕ್ಯ ಡ್ಯಾಮ್ ಹೂಳಿನಿಂದ ತುಂಬಿದೆ ಹಾಗೂ ಭದ್ರಾ ನದಿಯ ನೀರು ಕೆಮ್ಮಣ್ಣಿನಿಂದ ಹರಿಯುತ್ತಿದೆ.
8.ಹರಿಹರ ಪಾಲಿಫೈಬರ್ ಕಾರ್ಖಾನೆಯ ಕಲುಷಿತ ನೀರನ್ನು ತುಂಗಾ ನದಿಗೆ ಹರಿಬಿಡಲಾಗುತ್ತಿದೆ.
9.ನಗರ ಹಾಗೂ ಕಾರ್ಖಾನೆಗಳ ಕಲುಷಿತ ನೀರನ್ನು ಜೀವನದಿಗಳಿಗೆ ಸೇರುತ್ತಿರುವುದರಿಂದ ನದಿಗಳ ಗುಣಮಟ್ಟ C grade ನಿಂದ D gradeಗೆ ಸೇರುತ್ತದೆ.
10.ಮಹಾನಗರಗಳಿಗೆ 24 ಗಂಟೆಗಳ ವಿದ್ಯುತ್ ಸಂಪರ್ಕಕ್ಕೆ ನಿರ್ಮಿಸುವಂತಹ ಅಣೆಕಟ್ಟೆಗಳ ಸುತ್ತಮುತ್ತಲಿರುವ ಜನರಿಗೆ ಇಂದಿಗೂ ಕೂಡ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ.
11.ಮೈಸೂರು ಹಾಗೂ ಬೆಂಗಳೂರು, ಬೆಂಗಳೂರು ಹಾಗೂ ಮಂಗಳೂರು, ಮೈಸೂರು ಹಾಗೂ ಚಾಮರಾಜನಗರಗಳ ರಸ್ತೆ ಅಗಲೀಕರಣಕ್ಕೆಎಂದು ಲಕ್ಷಾಂತರ ಮರಗಳನ್ನು ಕಡೆದಿದ್ದಾರೆ. ಕೇವಲ ಬೀದರ್ ರಸ್ತೆ ಅಗಲೀಕರಣಕೆಂದು 5000 ಮರಗಳನ್ನು ಕಡಿಯಲಾಗಿದೆ.
12.ಅನೇಕ ಅಣೆಕಟ್ಟುಗಳ ನಿರ್ಮಾಣಗಳಿಂದಾಗಿ ಮುಳುಗಡೆಯಾದ ಜನರಿಗೆ ಇಂದಿಗೂ ಕೂಡ ಯೋಜನೆಗಳು ತಲುಪದಗಿವೆ.
13.ಕುದುರೆಮುಖ ದಿನಗೂಲಿ ನೌಕರರ ಜೀವನ ಇಂದಿಗೂ ಕೂಡ ಶೋಚನೀಯವಾಗಿದೆ.
14.ಪ್ರಪಂಚದ ನಾನಾ ದೇಶಗಳು ಅಣುವಿದ್ಯುತ್ ಸ್ಥಾವರಗಳ ಅಪಾಯವನ್ನರಿತು ನಿರ್ಬಂಧಿಸಿರುವ ಸಂದರ್ಭದಲ್ಲಿ ನಮ್ಮ ಸರಕಾರಗಳು ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಐದು ಮತ್ತು ಆರನೇ ಘಟ್ಟಗಳನ್ನು ಪ್ರಾರಂಭಿಸಲು ಮುಂದಾಗಿದೆ.[ ಒಮ್ಮೆ ಚೆರ್ನೋಬಿಲ್ ಹಾಗೂ ಜಪಾನಲ್ಲಿ ನಡೆದಂತಹ ಅಣು ವಿದ್ಯುತ್ ಸ್ಥಾವರಗಳ ದುರಂತವನ್ನು ನೆನಪಿಸಿಕೊಳ್ಳಿ].
15. ಹೊಸಯೋಜನೆಗಳಿಂದ ಹೊರಗಿನವರು ಉದ್ಯೋಗ ಪಡೆಯುತ್ತಿದ್ದಾರೆ ಹೊರತು ಸ್ಥಳೀಯರಿಗೆ ಸರಿಯಾದ ಉದ್ಯೋಗಗಳು ಇಂದಿಗೂ ದೊರೆತಿಲ್ಲ.
16.ಪ್ರತಿ ಜಿಲ್ಲೆಗಳಲ್ಲಿ ಇರುವಂತಹ ಕೈಗಾರಿಕಾ ಪ್ರದೇಶಗಳಿಂದ ಉದ್ಯೋಗ ದೊರೆಯುತ್ತಿರುವುದೇನೋ ನಿಜವಾದರೂ ಇದರಿಂದ ಸುತ್ತಮುತ್ತಲ ಜನರ ಆರೋಗ್ಯದ ಪರಿಸ್ಥಿತಿಗಳು ದಿನೇ ದಿನೇ ಹದಗೆಡುತ್ತಿದೆ.
17.ಕೈಗಾರಿಕೆಗಳಿಗಾಗಿ ಅಂತರ್ಜಲ ನೀರನ್ನು ಬಳಸಿಕೊಳ್ಳುವುದರ ಜೊತೆಗೆ ಕಲುಷಿತ ನೀರನ್ನು ಸುತ್ತಮುತ್ತಲ ಕೆರೆಗಳಿಗೆ ಹರಿ ಬಿಡಲಾಗುತ್ತಿದೆ.
18.ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಬೆಂಗಳೂರು, ಮೈಸೂರು ,ಹುಬ್ಬಳ್ಳಿ-ಧಾರವಾಡ, ಮಂಗಳೂರು ಜಿಲ್ಲೆಗಳದ್ಯಂತ ಕಸದ ರಾಶಿ ಬೆಟ್ಟದಷ್ಟೆತ್ತರ ಏರಲಿದೆ.
19.ಮೇಲುಕೋಟೆ - ಧನುಷ್ಕೋಟಿ ಸುತ್ತಮುತ್ತಲಿದ್ದ ಮರಗಳನ್ನು ಧರೆಗುರುಳಿಸಲಾಗಿದೆ.
20.ರಾಜ್ಯದ ಒಟ್ಟು ವಿಸ್ತೀರ್ಣದ 21% ಕಾಡಿದೆ ಎಂದು ರಾಜ್ಯ ಸರ್ಕಾರದ ವರದಿಯಲ್ಲಿದಾದರು ಪರಿಸರ ಹೋರಾಟಗಾರರ ಸಮಗ್ರ ವರದಿಯ ಪ್ರಕಾರ 19% ಕಾಡಿದೆ ಅಷ್ಟೇ.
21.ಸಾವಿರಾರು ಯೋಜನೆಗಳು ಶ್ರೀಸಾಮಾನ್ಯರ ನಡುವೆಯೇ ನಡೆಯುತ್ತಿದ್ದರು ಯೋಜನೆಗಳಿಗಾಗಿ ಕಡಿಯುತ್ತಿರುವಂತ ಮರಗಳ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ.
22.ಇಂದಿಗೂ ಕೂಡ ಹರಳುಗಳು ಹಾಗೂ ಮರಳಿನ ಹಗರಣ ನಡೆಯುತ್ತಲಿದೆ.
ಹೀಗೆ ಸಾವಿರಾರು ಯೋಜನೆಗಳಿಂದ ಕೋಟ್ಯಂತರ ಮರಗಳು ದೇಶದಲ್ಲಿ ಧರೆಗುರುಳಿವೆ, ಲಕ್ಷಾಂತರ ಜನರು ಪರಿಸರದ ಅಸಮತೋಲನದಿಂದ ಸಾವಿಗೀಡಾಗುತ್ತಿದ್ದಾರೆ. ಅನೇಕ ಜನರಿಗೆ ಈ ರೀತಿಯಾದಂತಹ ಮಾಹಿತಿಗಳೇ ತಿಳಿದಿಲ್ಲ.
ತಿಳಿದವರೆಲ್ಲರೂ ತಮ್ಮ ಜೀವನದೋಟದಲ್ಲಿ ಮುಳುಗಿಹೋಗಿದ್ದಾರೆ.
ಇಷ್ಟಾದರೂ ಸರಕಾರಗಳೇ ಸಮಿತಿಗಳನ್ನು ರಚಿಸಿ ತಯಾರಿಸಿದಂತಹ ಮಾಧವ ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ವರದಿಗಳನ್ನು ಮೂಲೆಗುಂಪಾಗಿಸಿದೆ. ನಮ್ಮ ರಾಜಕಾರಣಿಗಳೇ ಈ ವರದಿಗಳಿಂದ ಸ್ಥಳೀಯರನ್ನು ಒಕ್ಕಲೆಬ್ಬಿಸುತ್ತಾರೆ ಎಂದು ಸುಳ್ಳು ಸಂದೇಶಗಳನ್ನು ತಿಳಿಸಿದ್ದರಪರಿಣಾಮವಾಗಿ ಜನರು ಈ ವರದಿಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇವರೇನಾದರೂ ಪರಿಸರ ಆಸಕ್ತರಾಗಿದ್ದರೆ ನಿಜವಾಗಿಯೂ ಇಂತಹ ವರದಿಗಳನ್ನು ತಳ್ಳಿ ಹಾಕುತ್ತಿದ್ದಾರೆ ? ಈ ಯೋಜನೆಗಳು ಜಾರಿಯಾಗಿ ಬಿಟ್ಟರೆ ತಮ್ಮ ಜೋಬಿಗೆ ಸೇರಬಹುದಾದಂತಹ ಹಣ ಇಲ್ಲದಗುತ್ತದಲ್ಲ ಎಂದು ಅವರ ಭಾವನೆಯಾಗಿದೆ.ಇದರಿಂದಲೇ ನಮಗೆ ತಿಳಿಯುತ್ತದೆ ರಾಜಕಾರಣಿಗಳು ಪರಿಸರದ ಮೇಲೆ ಇಟ್ಟಿರುವ ಕಾಳಜಿ.
ಇಂದು ಕರೋನಾ ಮಹಾಮಾರಿ ವಿಶ್ವವನ್ನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸಿದ್ದಾಗಿದೆ ಈ ನಿಟ್ಟಿನಲ್ಲಿ ಪ್ರತಿ ದೇಶಗಳು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಅನೇಕ ವಿದೇಶಿ ಕಂಪನಿಗಳಿಗೆ ಕೆಂಪು ಹಾಸನ್ನು ಹಾಕುವುದರ ಮೂಲಕ ತನ್ನ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಷ್ಟ್ರವು ಕೂಡ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಎಂದು 4.61ಲಕ್ಷ ಹೆಕ್ಟೇರ್
ಪ್ರದೇಶವನ್ನು ಗುರುತಿಸಲಾಗಿದೆ [ ಲಕ್ಸಂಬರ್ಗ್ ದೇಶದ ವಿಸ್ತೀರ್ಣದ ಎರಡುಪಟ್ಟು] ಇದಕ್ಕಾಗಿ ಜಪಾನ್,ಅಮೆರಿಕ,ಚೀನಾ,ದೇಶಗಳಿಗೆ ಕೆಂಪು ಹಾಸನ್ನು ಹಾಸಲಾಗಿದೆ ಇವುಗಳಿಂದ ಸದ್ಯಕ್ಕೆ ನಮ್ಮ ಪರಿಸರದಮೇಲಿರುವ ಹಾನಿಗಳ ಜೊತೆಗೆ ಮತ್ತಷ್ಟು ಸೇರಿಕೊಳ್ಳಲಿದೆ. ಒಮ್ಮೆ ಯೋಚಿಸಿ ಇನ್ನೂ ನೂರಾರು ತಲೆಮಾರುಗಳಿಗೆ ಬೇಕಾಗಿರುವ ಪರಿಸರವನ್ನು ಹಾಳು ಮಾಡಿಕೊಂಡು ಸದ್ಯದ ಮಟ್ಟಿಗೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಪರಿ. ನಿಜವಾಗಿಯೂ ನಮಗೆ ಈ ರೀತಿಯಾದಂತಹ ಅಭಿವೃದ್ಧಿಗಳು ಬೇಕೆ?
ಹೀಗಾಗಿ ಪರಿಸರ ಹೋರಾಟಗಾರರೇನೋ ಸರಕಾರದ ಅಥವಾ ಸರಕಾರದ ಯೋಜನೆಗಳಿಗೆ ವಿರೋಧಿಗಳಲ್ಲ ಬದಲಿಗೆ ನಮ್ಮ ಅಭಿವೃದ್ಧಿಗಳೆಲ್ಲವೂ ಕೂಡ ಪರಿಸರ ಪೂರಕವಾಗಿರಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ.
1.ಹುಟ್ಟಿದ ಪ್ರತಿ ಮಗುವಿಗೆ ಎರಡು ಗಿಡದಂತೆ ಸರ್ಕಾರದ ಸಾವಿರಾರು ಹೆಕ್ಟೇರ್ ಪಾಳುಬಿದ್ದಿರುವ ಭೂಮಿಯಲ್ಲಿ ಬೆಳೆಸಬಹುದಾಗಿದೆ.
2.ಸೋಲಾರ್ ಹಾಗೂ ವಿಂಡ್ ಎನರ್ಜಿಗಳಿಗೆ ಇನ್ನಷ್ಟು ಆದ್ಯತೆಯನ್ನು ಕೊಡಬಹುದಾಗಿದೆ.
3.ಪೆಟ್ರೋಲ್ ಅಥವಾ ಡೀಸೆಲ್ ವೆಹಿಕಲ್ಗಳನ್ನು ತೆಗೆದುಕೊಳ್ಳುವ ಬದಲಾಗಿ ಎಲೆಕ್ಟ್ರಿಕ್ ವಾಹನಗಳನ್ನು ತೆಗೆದುಕೊಳ್ಳಬಹುದಾಗಿದೆ.
ಹೀಗೆ ಕೆಲವಷ್ಟು ಮುಂಜಾಗ್ರತಾ ಕ್ರಮಗಳನ್ನು ಇಂದಿನಿಂದಲೇ ಪಾಲಿಸುವುದರ ಮೂಲಕ ಪರಿಸರವು ಸಮತೋಲನವಾಗಿರುತ್ತದೆ ಹಾಗೂ ಜನರು ಸುಭಿಕ್ಷವಾಗಿರುತ್ತಾರೆ. ಹೀಗಾಗಿ
"ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ".
(Source : different news papers, journals, Magazines, internet source and many international reports)

GOOD matter
ReplyDelete👏👏
ReplyDeleteGood thoughts
ReplyDelete