Saturday, March 19, 2022

ಹಸಿರ ಕಿಚ್ಚೆಚ್ಚ ಬೇಕು.

 


                            - ಎಸ್ ಪಿ ತೇಜರಾಜು.


ತನ್ನೊಳಗಿನ ಛಲದಿಂದ ಪೃಥ್ವಿಯೊಳಗಾವರಿಸಿದ 

ತರುಲತೆ ಬೆಳ್ಳಿಗಳಂತೆ, ಮನುಜರ ಮನದಲ್ಲಿ

ಹಸಿರ ಕಿಚ್ಚೆಚ್ಚ ಬೇಕು.


ತಾನೇ ಬೆಳೆಸಿ ಪೋಷಿಸಿದ ಸಮಸ್ತ ಜೀವಸೃಷ್ಟಿಯ - 

ಮೇಲಿಟ್ಟ ನಿಷ್ಕಲ್ಮಶ ಪ್ರೀತಿಯ ಹಾಗೆ,

ಹಸಿರ ಕಿಚ್ಚೆಚ್ಚ ಬೇಕು.


ನಾಗರಿಕ ಪ್ರಪಂಚದಲಿ ಸಿಲುಕಿ 

ತೊಳಲಾಡುತ್ತಿರುವ ಮಾನವನ ಮನಶುದ್ಧಿಗಾಗಿ,

ಹಸಿರ ಕಿಚ್ಚೆಚ್ಚ ಬೇಕು.


ಮಹಾಮರವಾಗಿ ಬೆಳೆಯಲು ಹವಣಿಸುವ ಯುವಕರಲ್ಲಿ, 

ಬೆಳೆದ ಹಿರಿಯರಲ್ಲಿ, ಹುಟ್ಟಿದ ಮಗುವಿನ ಉಸಿರಾಟದಲ್ಲಿ,

ಹಸಿರ ಕಿಚ್ಚೆಚ್ಚ ಬೇಕು.


ಆಗಸದಲ್ಲಿ ಹಾರಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ 

ಪಕ್ಷಿಗಳ ಕಣ್ಣಿನ ಆನಂದವನ್ನು ಆಸ್ವಾದಿಸಲು

ಹಸಿರ ಕಿಚ್ಚೆಚ್ಚ ಬೇಕು.


ತನ್ನೊಳಗಿದ್ದರೂ ತಿಳಿಯದ, ಕಣ್ಣಿಗೆ ಗೋಚರಿಸದ,

ಉಸಿರಿಗೆ ಉಸಿರಾದ ಪ್ರಾಣವಾಯುವಿನಂತೆ,

ಹಸಿರ ಕಿಚ್ಚೆಚ್ಚ ಬೇಕು.


ಕುವೆಂಪುರವರ ಮನುಜನ ಮತ ವಿಶ್ವಪಥ ಸಿದ್ಧಾಂತದಂತೆ, 

ಡಿವಿಜಿಯವರ ಹುಲ್ಲಾಗು ಬೆಟ್ಟದಡಿ ಕವಿತೆಯ ಸಾಲಿನಂತೆ,

ಹಸಿರ ಕಿಚ್ಚೆಚ್ಚ ಬೇಕು.


ಕೆಸರಿನಲ್ಲಿ ಹುಟ್ಟಿ, ಕೆಸರಿನಲ್ಲಿ ಬೆಳೆದು, 

ಅತೀವ ಸಂದರ್ಯ ತಳೆದು ದುಂಬಿಯನಾಕರ್ಷಿಸಿದ ಕಮಲದಂತೆ,

ಹಸಿರ ಕಿಚ್ಚೆಚ್ಚ ಬೇಕು.


ಕಣ್ಣಿಗೆ ಕಂಡರೂ, ತಕ್ಷಣ ಮನವರಿಯದ,

ಪ್ರಕೃತಿಯ ಅಂತರಾಳದ ಭಾವಗಳನ್ನು ಅರ್ಥೈಸಿಕೊಳ್ಳಲು,

ಹಸಿರ ಕಿಚ್ಚೆಚ್ಚ ಬೇಕು.


ಜ್ಞಾನವೆಂಬ ಅಜ್ಞಾನದಳು ಸಿಲುಕಿ ಪ್ರಕೃತಿಯ

ಹಾಳುಗೆಡುವ ಮನುಜರಲ್ಲಿ,

ಹಸಿರ ಕಿಚ್ಚೆಚ್ಚ ಬೇಕು.


ತನ್ನಂಶದ ಕುಡಿಯನ್ನು ದೂರದಲ್ಲೆಲ್ಲೋ ಬೆಳೆಯಲು

ಬೀಜದೊಳು ತುಂಬಿದ ಶಕ್ತಿಯಂತೆ,

ಹಸಿರ ಕಿಚ್ಚೆಚ್ಚ ಬೇಕು.


 ಹಸಿರೇ ಉಸಿರು, ಹಸಿರಿದ್ದರೆ ನಾವು ಎಂದರಿತು,

 ಹಸಿರ ಕಿಚ್ಚು ಹಚ್ಚಬೇಕು, ಹಸಿರು ಕಿಚ್ಚು ಹೆಚ್ಚಬೇಕು,

 ಕಿಚ್ಚಷ್ಟೇಯಲ್ಲಾ ಎಲ್ಲೆಡೆ ಹಸಿರಚ್ಚಬೇಕು,

 ಸಾಕ್ಷಾತ್ಕಾರದ ಹಾದಿಗೆ ನಡೆಯಬೇಕು.


 ಧನ್ಯವಾದಗಳು.

12 comments:

  1. Wow wt a poem really ignition of spark to grow and go for greenish

    ReplyDelete
  2. 💐Very Nice Bro🙏🏻❤🥰🙂

    ReplyDelete
  3. ನಿಮ್ಮ ಈ ಕವಿತೆಯಿಂದ ಎಲ್ಲರಲ್ಲು ಕಿಚ್ಚೆಚ್ಚಿಸಿದ್ದೀರಿ. ಧನ್ಯವಾದಗಳು

    ReplyDelete
  4. Beautiful descriptions about the nature🍂🌿

    ReplyDelete
  5. Wonderful Theju...The day of publishing your anthology of poetry is not far... Kudos

    ReplyDelete
  6. ಹಸಿರೇ ಉಸಿರು💚

    ReplyDelete
  7. ಚೆನ್ನಾಗಿದೆ, ಹೀಗೆ ಮುಂದುವರಿಸಿ.

    ReplyDelete
  8. ಬಹಳ ಚೆನ್ನಾಗಿದೆ

    ReplyDelete
  9. ತುಂಬಾ ಚೆನ್ನಾಗಿದೆ

    ReplyDelete
  10. You have tried your best in poetic creative activity, keep going

    ReplyDelete