Sunday, August 28, 2022

ಮುಡಿಗೇರದ ಮೊಲ್ಲೆ.


                        - ಎಸ್ ಪಿ ತೇಜರಾಜು.

  ಆಡುಭಾಷೆಯ ಮಾತೊಂದಿದೆ 'ಹೊಟ್ಟೆಗೆ ಹಿಟ್ಟಿಲ್ಲದೆ ಹೋದರು ಜುಟ್ಟಿಗೆ ಮಲ್ಲಿಗೆ ಹೂವು' ಎಂದು ಹೌದು ಇದು ನಿಜಾನೆ ತಾನೆ ? ಜನ ಎಲ್ಲಿಯಾದರೂ ಹೊಟ್ಟೆ ಖಾಲಿ ಇರುವುದನ್ನು ನೋಡುತ್ತಾರೆಯೇ ಅವರಿಗೆ ಮೊದಲು ಕಾಣಿಸುವುದೇ ವೇಷಭೂಷಣಗಳಲ್ಲವೇ ? 

ಉಳ್ಳವರ ಮನೆಯ ಸಮಾರಂಭಗಳಲ್ಲಿ ನಡೆಯುವ ಆಡಂಬರವನ್ನು ನೀವು ನೋಡಿದ್ದೀರಾ ಎಂದು ಭಾವಿಸುತ್ತೇನೆ, ಇಂತಹ ಕಾರ್ಯಕ್ರಮಗಳನ್ನು ಮಾಡುವುದೇ ಕೆಲವೊಮ್ಮೆ ತೋರ್ಪಡಿಕೆಗಾಗಿ ಎನಿಸಿದರೂ ತಪ್ಪಲ್ಲ, ಟಿಪ್ ಟಾಪಾ ಆಗಿ ರೆಡಿಯಾಗಿ ಕೋಟಿ ಬೆಲೆಬಾಳುವ ಕಾರಿನಿಂದ ಗಂಡಸರು ಇಳಿದರೆ, ಹಿಂದೆಯಿಂದ ಅಲಂಕಾರಗೊಂಡ ಹೆಂಗಸರು ಕೆಜಿಗಟ್ಟಲೆ ಬಂಗಾರವನ್ನು ಹಾಕಿಕೊಂಡು ಬಂದಿರುತ್ತಾರೆ, ಹೂ ಮುಡಿಯುವ ಸಂಸ್ಕೃತಿ ಸ್ವಲ್ಪ ದಿನದ ಹಿಂದೆಯಷ್ಟೇ ಟ್ರೆಂಡಿ ಚೇಂಜ್ ಆಗಿದೆ, ಈಗ ಹೂವಿನ ಡಿಸೈನಿನ ಚಿನ್ನದಾಭರಣಳೇ ಬಂದಿದೆ, ಇನ್ನು ಇಲ್ಲಿ ಬಡಿಸುವ ಊಟದ ವಿಚಾರಕ್ಕೆ ಬಂದರೆ 30 - 40 ವಿಧವಾದ ಭಕ್ಷ್ಯಗಳೇನೋ ಇರುತ್ತದೆ ಎಲ್ಲವನ್ನೂ ಎಲೆಗೆ ಹಾಕಿಸಿಕೊಂಡು ಅನೇಕ ಮಂದಿ ಬಿಡುವುದು ಬೇಸರದ ಸಂಗತಿ, ಆ ವಿಚಾರ ಹಾಗಿರಲಿ

ಶಿವರಾಮ ಕಾರಂತರು ಬರೆದ ಬೆಟ್ಟದ ಜೀವದ ಕಾದಂಬರಿಯ ಸಾಲುಗಳು ಇಲ್ಲಿ ಪ್ರಸ್ತುತವೆನಿಸುತ್ತದೆ, ವೈವಾಹಿಕ ಜೀವನದ 50 ಸಂವತ್ಸರಗಳನ್ನು ಪೂರೈಸಿದ ಭಟ್ಟರು ಹೆಂಡತಿ ಶಂಕರಿಯೊಂದಿಗೆ ಮಾತನಾಡುತ್ತಾ, ತಮ್ಮ ಕೈಯಲ್ಲೇ ಇದ್ದ ಬಟ್ಟೆಯನ್ನು ಅವರ ಹೆಗಲಿಗೆ ಹೊದಿಸಿ ' ನಾವು ಮದುವೆಯಾಗುವ ಸಂದರ್ಭದಲ್ಲಿ ಚಿನ್ನಾಭರಣಗಳು ಇರಲಿಲ್ಲ ಆದರೆ ಹೂವಿನ ಮಾಲೆಯೇ ಆಭರಣವಾಗಿದ್ದವು', ನಿಸರ್ಗ ಶ್ರೀಮಂತಿಕೆಯೊಂದಿಗೆ ಬೆಟ್ಟದಲ್ಲಿ ಜೀವನವನ್ನು ಕಳೆದ ಭಟ್ಟರ ಹೃದಯ ವೈಶಾಲ್ಯ ಎಂತಹದ್ದು ಎಂದು ಈ ಸಾಲುಗಳು ತಿಳಿಸುತ್ತವೆ.

ಮಾನವ ಎಲ್ಲಾ ವಿಷಯದಲ್ಲಿ ತಾರತಮ್ಯ ಮಾಡುವುದನ್ನು ಬಿಡಲಿಲ್ಲ ಎಂಬುದು ಮಾನವನ ಉದ್ದಗಲಕ್ಕೂ ಕಾಣಸಿಗುವ ಚಿತ್ರಣವಾಗಿದೆ, ಈತ ಎಲ್ಲಿಯೋ ಒಂದು ಕಡೆ ಹೂಗಳೊಳಗೂ ಮಾಡಿದ ತಾರತಮ್ಯ ಕೆಲವು ಪುಷ್ಪಗಳು ಮೂಡಿಗೆರೆದಂತಾಗಿ ಅಲಂಕಾರಿಕ ಸಸ್ಯಜಾತಿಗಳೊಳಗೆ ಸೇರಿಕೊಂಡವು ಅವುಗಳಲ್ಲಿ ಕೆಲವೆಂದರೆ ಡೇರೆ ಹೂ, ಟುಲಿಪ್, ದಾಸವಾಳ ಇತ್ಯಾದಿ, ಒಂದು ಕಡೆ ಮಾನವ ಹೂಗಳಲ್ಲಿ ತಾರತಮ್ಯ ಮಾಡಿದ್ದು ಒಳ್ಳೆಯದೆನಿಸುತ್ತದೆ, ಏಕೆಂದರೆ ಕೊನೆಯಪಕ್ಷ ಇಂತಹ ಹೂವುಗಳನ್ನಾದರೂ ಗಿಡದಲ್ಲಿ ನೋಡಿ ಆನಂದಿಸಬಹುದು ಆದರೆ ಈ ಸಸ್ಯಗಳ ಇಂದಿನ ಚಿತ್ರಗಳೇ ಬೇರೆ ಇಂದು ಇವುಗಳನ್ನು ಮದುವೆ, ಮನೆಗಳ ಅಲಂಕಾರಕ್ಕಾಗಿ ಬಳಸಲಾಗುತ್ತದೆ.

ಹೂಗಳ ವೈವಿಧ್ಯತೆ ಅಪಾರವಾದದ್ದು ಇವುಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ವೈವಿಧ್ಯಮಯವಾದ ಪುಷ್ಪಗಳು ಇದ್ದರೂ ಸಹ ಯಾವುದೇ ರೀತಿಯ ತಾರತಮ್ಯ ಮಾಡದೆ ತಮ್ಮಷ್ಟಕ್ಕೆ ತಾವು ಶತಮಾನಗಳಿಂದ ಬೆಳೆದು ಬಂದಿವೆ, ಹೂಗಳ ಸೌಂದರ್ಯಕ್ಕೆ ಮಾರುಹೋಗದ ಜನ ಎಲ್ಲಿಯಾದರೂ ಇದ್ದಾರ ? ಪ್ರತಿ ಜೇನುಹುಳುಗಳಿಗೂ ಹೂವು ಬೇಕೇ ಬೇಕು ಇಲ್ಲವಾದಲ್ಲಿ ಹಸುನೀಗುತ್ತವೆ, ಇದರೊಂದಿಗೆ ಹೂಗಳು ಸೌಂದರ್ಯಯುತವಾಗಿ ಬೆಳೆಯಲು ಕಾರಣವೇನು ? ಇವುಗಳು ವಿವಿಧ ಬಣ್ಣ ಹಾಗೂ ಆಕಾರದ ವೈವಿಧ್ಯತೆಯನ್ನು ಹೇಗೆ ಪಡೆದವು ? ಪ್ರತಿ ಮರದ ಹೂ ಮತ್ತೊಂದಕ್ಕಿಂತ ವಿಭಿನ್ನವಾಗಿ ಬೆಳೆದದ್ದು ಹೇಗೆ ? ಇದೇ ಹೂಗಳು ಪಕ್ಷಿಗಳನ್ನು, ಸಾಹಿತಿಗಳನ್ನು ತನ್ನತ್ತ ಸೆಳೆದದ್ದು ಹೇಗೆ ? ಇವು ಸಣ್ಣ ಪ್ರಶ್ನೆಗಳೇ ಎನಿಸಬಹುದು ಆದರೆ ಇಂತಹ ಪ್ರಶ್ನೆಗಳು ವಿಜ್ಞಾನಿಗಳ ತಲೆ ಕೆಡಿಸಿದ್ದವು.

ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲಾದ ( ಜೀವ ವಿಕಸನದಲ್ಲಾದ ) ಬದಲಾವಣೆಗಳು ವೈವಿದ್ಯಮಯವಾದ ಸಸ್ಯ ಜಾತಿಗಳನ್ನು ತಳೆಯಲು ಕಾರಣವಾಯಿತು, ಈ ಸಸ್ಯಗಳಲ್ಲಿ ನಾಲ್ಕು ಲಕ್ಷಕ್ಕಿಂತಲೂ (4,00,000) ಹೆಚ್ಚು ವೈವಿಧ್ಯಮಯವಾಗಿ ಹೂ ಬಿಡುವ ಸಸ್ಯ ಜಾತಿಗಳಿವೆ, ಇವುಗಳಲ್ಲಿ ಕೆಲವು ಪರಾವಲಂಬಿ ಸಸ್ಯಗಳಿವೆ, ಇವುಗಳು ಸಹ ಅಲಂಕಾರಿಕ ಹೂಬಿಡುವ ಸಸ್ಯ ಜಾತಿಗಳಿಗೆ ಸೇರಿದೆ, ಇಂತಹ ಪರಾವಲಂಬಿ ಸಸ್ಯಗಳಲ್ಲಿ ಅತ್ಯಾಕರ್ಷಕವಾಗಿ ಹೂಬಿಟ್ಟ ಸಸ್ಯಗಳೇ ಸೀತಾಳೆ ಗೆಡ್ಡೆ / ಆರ್ಕಿಡ್ಸ್ ಗಳು.

ಹೂಗಳಿಗೆ ವೈವಿಧ್ಯಮಯವಾದ ಬಣ್ಣ ಹೇಗೆ ಬಂದಿತು ಎಂಬ ವಿಚಾರ ರೋಚಕ ವಹಿಸುತ್ತದೆ, ಹೂವುಗಳೊಳಗಿರುವ ವಿವಿಧ ಬಣ್ಣದ ಪಿಗ್ಮೆಂಟ್ ಗಳು / ರಾಸಾಯನಿಕ ಸಂಯೋಜನೆ ಹೂಗಳಿಗೆ ವಿವಿಧ ಬಣ್ಣ ಬರುವಂತ ಮಾಡಿತು.

ಆರ್ಕಿಡ್ ಸಸ್ಯದ ಹೂ ಎಂಬ ಅರ್ಥವೇ ಕೆಲವು ಕಡೆ ಸಂಕೀರ್ಣವಾದ, ಅತಿ ಮನಮೋಹಕ, ಸುಂದರ ಹಾಗೂ ಅತ್ಯಾಕರ್ಷಕ ಹೂ ಎಂದು ಇದೆ, ಈ ಆರ್ಕಿಡ್  ಎಂಬ ಪದ ಗ್ರೀಕ್ ಭಾಷೆಯ 'Orkhis' ಪದದಿಂದ ಬಂದದ್ದು, ಪಾಶ್ಚಾತ್ಯ ಗ್ರೀಕ್ ಸಸ್ಯಶಾಸ್ತ್ರಜ್ಞ Throphrastos ಈ ಪುಷ್ಪಗಳನ್ನು ಕಂಡು ವಿಲಕ್ಷಣ ಹೂವು ಎಂದು ಕರೆದಿದ್ದಾನೆ. ಈ ಆರ್ಕಿಡ್ ಸಸ್ಯಗಳು ಭೂಮಿಯ ಮೇಲೆ ಎರಡನೇ ಅತಿ ಹೆಚ್ಚು ಹೂ ಬಿಡುವ Asteraceae ಕುಟುಂಬಕ್ಕೆ ಸೇರಿದೆ, ಆರ್ಕಿಡ್ ಸಸ್ಯಗಳಲ್ಲಿ 25 ಸಾವಿರಕ್ಕೂ ಹೆಚ್ಚು ಜಾತಿಗಳಿದ್ದು, ಇವುಗಳನ್ನು 763 ತಳಿಗಳನ್ನಾಗಿ ವರ್ಗೀಕರಿಸಲಾಗಿದೆ.

ಆರ್ಕಿಡ್ ಗಳನ್ನು ಬೆಳವಣಿಗೆಯ ಆಧಾರದ ಮೇಲೆ ಮೂರು ಮುಖ್ಯವಾಗಿ ವಿಂಗಡಿಸಲಾಗಿದೆ ಅದುವೇ,

1 ಎಪಿಫೈಟ್ -  ಮರದ ತೊಗಟೆಯ ಮೇಲೆ ಬೆಳೆಯುತ್ತವೆ, ಆದರೆ ಮರಕ್ಕೆ ಯಾವುದೇ ರೀತಿಯ ಹಾನಿ ಉಂಟುಮಾಡುವುದಿಲ್ಲ,

2 ಟೆರೆಸ್ಟ್ರಿಯಲ್ -  ಇದು ಮಣ್ಣಿನಲ್ಲಿ ಬೆಳೆಯುತ್ತದೆ,

3 ಮೈಕೋಹೆಟೆರೊಟ್ರೋಫಿಕ್ -  ಇವುಗಳು ಭಾಗಶಃ ಅಥವಾ ಸಂಪೂರ್ಣವಾಗಿ ದ್ಯುತಿಸಂಶ್ಲೇಷಕವಲ್ಲದ ಸಸ್ಯಗಳಾಗಿವೆ, ಇವು ಶಿಲೀಂಧ್ರಗಳಿಂದ ಶಕ್ತಿ ಮತ್ತು ಪೋಷಕಾಂಶಗಳನ್ನು ಪಡೆಯುತ್ತವೆ.

ಆರ್ಕಿಡ್ ಗಳು ಧ್ರುವ ಪ್ರದೇಶಗಳನ್ನು ಹೊರತುಪಡಿಸಿ, ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಬೆಳೆದರೂ ಮಳೆಗಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ,ಈ ಸಸ್ಯಗಳು ಬಿಡುವ ಹೂಗಳಲ್ಲಿ ಕೆಲವು ಒತ್ತೊತ್ತಾಗಿ ಬೆಳೆದರೆ ಇನ್ನು ಕೆಲವು ಪ್ರತ್ಯೇಕ ಪ್ರತ್ಯೇಕವಾಗಿ ಹೂಬಿಡುತ್ತದೆ, ಇವುಗಳು ಹೂ ಹಿಡಿದು ಏಕದಳ ಬೀಜವನ್ನು ಬಿಡುತ್ತದೆ, ಇವುಗಳ ಎಲೆಗಳು ದಪ್ಪವಾಗಿದ್ದು ಕ್ಲೋರೊಫಿಲ್ ಕೊರತೆ ಇರುವ ಕಾರಣ ಪರಾವಲಂಬಿ ಸಸ್ಯವಾಗುತ್ತದೆ, ಬೇರುಗಳು ದುಂಡಾದ ರಚನೆಯಿಂದ ದಪ್ಪವಾಗಿದ್ದು ನೀರು ಮತ್ತು ಪೋಷಕಾಂಶವನ್ನು ಅರಸುತ್ತಾ ಮರದ ತೊಗಟೆಯ ಮೇಲೆ ಅಂಟಿರುವ ಸಾವಯವ ವಸ್ತುಗಳು, ಧೂಳು ಹಾಗೂ ಪಕ್ಷಿಗಳ ಹಿಕ್ಕೆಯನ್ನು ಆಹಾರವಾಗಿ ಸೇವಿಸುತ್ತಾ ಮರದ ತೊಗಟೆಯನ್ನು ಭದ್ರವಾಗಿ ಹಿಡಿದು ನಿಲ್ಲುತ್ತದೆ.

ಇನ್ನು ಈ ಆರ್ಕಿಡ್ಸ್ ಸಸ್ಯಗಳು ಜನರಿಗೆ ಹೇಗೆ ಪರಿಚಯವಾಯಿತು, ಹೇಗೆ ಮನ್ನಣೆ ಪಡೆಯಿತು, ಹೇಗೆ ಪ್ರಖ್ಯಾತಿಯನ್ನು ಪಡೆಯಿತು ಎಂದು ಮಾಹಿತಿ ತಿಳಿಯಬೇಕಾದರೆ ಕನಿಷ್ಠಪಕ್ಷ ಸುಮಾರು 400 ವರ್ಷಗಳ ಇತಿಹಾಸ ನೋಡಬೇಕಾಗುತ್ತದೆ, 16 ರಿಂದ 17 ನೇ ಶತಮಾನದ ಭಾಗದಲ್ಲಿ ಕಾಡಿಗೆ ಹಾಗೂ ಕೆಲವೇ ಕೆಲವು ಅರಮನೆಗಳಿಗೆ ಸೀಮಿತವಾಗಿದ್ದ ಈ ಪುಷ್ಪ 18ನೇ ಶತಮಾನದ ಆದಿಭಾಗದಲ್ಲಿಯೇ ಬಹಳಷ್ಟು ಪ್ರಖ್ಯಾತಿಯನ್ನು ಪಡೆದು ಪಾಶ್ಚಿಮಾತ್ಯರ ಮನೆಗಳಲ್ಲಿ ತಮ್ಮ ಶ್ರೀಮಂತಿಕೆಯನ್ನು ತೋರ್ಪಡಿಸಿಕೊಳ್ಳಲಿಕ್ಕೆ ಅಲಂಕಾರಿಕ ಗಿಡವಾಗಿ ಬೆಳೆಸಲು ಪ್ರಾರಂಭಿಸುತ್ತಾರೆ. ( ಶ್ರೀಮಂತಿಕೆಯನ್ನು ತೋರ್ಪಡಿಸಿಕೊಳ್ಳುವ ಗಿಡ ಏಕೆಂದರೆ ಈ ಸಸ್ಯ ಹೆಚ್ಚು Care ಅನ್ನು Expect ಮಾಡುತ್ತದೆ, ಹಾಗೂ ಈ ಗಿಡವನ್ನು ಕೊಂಡು ತರುವ ಬೆಲೆಯೂ ಹೆಚ್ಚು ).

ಹೇಗೆ ಈ ಸಸ್ಯ ಜನರ ಮನಸ್ಸಿನಲ್ಲಿ ಹಾಗೂ ಮನೆಯಲ್ಲಿ ಪ್ರಖ್ಯಾತಿಯನ್ನು ಪಡೆದು ವ್ಯಾಪಾರ ವಹಿವಾಟುಗಳು ಹೆಚ್ಚಾದವೋ ಅಂದಿನಿಂದ ಹೆಚ್ಚು ಜನ ವೈವಿಧ್ಯಮಯವಾದ ಆರ್ಕಿಡ್ ಸಸ್ಯಗಳ ಹುಡುಕಾಟದಲ್ಲಿ ಪ್ರಪಂಚದ ಮೂಲೆಗಳನ್ನು ಸುತ್ತಲಾರಂಭಿಸಿ ಜನಮನ್ನಣೆಯನ್ನು ಪಡೆದರು, ಈ ಬೆಳವಣಿಗೆ 18ನೇ ಶತಮಾನದ ಮಧ್ಯ ಭಾಗಕ್ಕೆ ಅತ್ಯಂತ ವೇಗ ಪಡೆದು ಸಸ್ಯಗಳ ಹುಡುಕಾಟ ಎಂಬ ಪದ ಹೋಗಿ ಆರ್ಕಿಡ್ಸ ಸಸ್ಯಗಳ ಬೇಟೆ ಎಂದು ಹೆಸರನ್ನು ಪಡೆದ ಪರಿಣಾಮವಾಗಿ ಒಂದೊಂದಾಗಿ ಆರ್ಕಿಡ್ಸ್ ಜಾತಿಯ ಸಸ್ಯಗಳು ಕಣ್ಮರೆಯಾಗಿ, ಕೆಲವಂತೂ ಅಳಿವಿನಂಚಿಗೆ ಬಂದವು, ಇದು ಹದಿನೆಂಟನೇ ಶತಮಾನದ ಅಂತ್ಯದೊಳಗಾಗಿ 1500 ಹೆಚ್ಚು ಆರ್ಕಿಡ್ಸ್ ಸಸ್ಯಗಳು IUCN ನ Redbook ಗೆ ಸೇರಿದವು.

ಬಹಳಷ್ಟು ಮಂದಿ ಆರ್ಕಿಡ್ಸ್ ಬೇಟೆಗಾರರು 18ನೇ ಶತಮಾನದಲ್ಲಿ ಭಾರತಕ್ಕೆ ಬಂದು ಸಸ್ಯಗಳನ್ನು ಹುಡುಕಿದ್ದಾರೆ, ಆದರೆ ಆ ಸಮಯಕ್ಕೆ ಭಾರತೀಯರು ಆರ್ಕಿಡ್ಸ್ ಪುಷ್ಪಗಳನ್ನು ಗಿಡದಲ್ಲಿಯೇ ನೋಡಿ ಆನಂದಪಡುತ್ತಿದ್ದರೇ ಹೊರತು ಯಾವ ಆರ್ಕಿಡ್ ಸಸ್ಯಗಳನ್ನು ಅಳಿವಿನಂಚ ಹಂತಕ್ಕೆ ತಲುಪಿಸಿರಲಿಲ್ಲ, ಬ್ರಿಟಿಷರೇ ಆಳುತ್ತಿದ್ದ ಆ ಕಾಲದಲ್ಲಿ ಸ್ಕಾಟ್ಲೆಂಡ್ನ ನ ಸಸ್ಯಶಾಸ್ತ್ರಜ್ಞ William Roxburgh, Hortus Bengalensis ಎಂಬ ಪುಸ್ತಕದಲ್ಲಿ ನೂರಾರು ಸಸ್ಯಗಳ ವಿವರಣೆಗಳನ್ನು ನೀಡಿದ್ದಾನೆ ಇದರಲ್ಲಿ ಈತ ಒಂದು ಬಾರಿ ಚಿತ್ತಗಾಂಗ್ ಪ್ರದೇಶದಲ್ಲಿ ( ಇಂದಿನ ಬಾಂಗ್ಲದಲ್ಲಿದೆ ) Thecostele alata ಎಂಬ ಆರ್ಕಿಡ್ ಸಸ್ಯವನ್ನು ನೋಡಿದ್ದೇನೆ ಎಂದು ಉಲ್ಲೇಖಿಸಿದ್ದಾನೆ, ಆದರೆ ಈ ವಿಧವಾದ ಆರ್ಕಿಡ್ ಸಸ್ಯ ಇಲ್ಲಿಯವರೆಗೂ ಎಲ್ಲಿಯೂ ಕಾಣಸಿಕ್ಕಿಲ್ಲ.

ಭಾರತದ ಉದ್ದಗಲಕ್ಕೂ ವೈವಿಧ್ಯಮಯವಾದ ಆರ್ಕಿಡ್ ಸಸಿಗಳನ್ನು ನೋಡಲು ಸಿಗುತ್ತವೆ, Botanical survay of India ಎಂಬ ಸಂಸ್ಥೆ ಭಾರತದಲ್ಲಿ 1252 ವಿಧವಾದ ಆರ್ಕಿಡ್ ಸಸ್ಯಗಳಿವೆ ಎಂದು, ಇವುಗಳ ಸಾಂದ್ರತೆ ಹೆಚ್ಚಿನದಾಗಿ ಈಶಾನ್ಯ ಭಾರತದ ಕಾಡುಗಳು, ಪಶ್ಚಿಮ ಘಟ್ಟದ ಸಾಲುಗಳು ಹಾಗೂ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಕಾಣಸಿಗುತ್ತದೆ ಎಂದು ತಿಳಿಸುತ್ತದೆ.

ಪ್ರಸ್ತುತ ಪ್ರಪಂಚದಲ್ಲಿ 30,000 ವೈವಿಧ್ಯಮಯವಾದ ಆರ್ಕಿಡ್ ಸಸ್ಯಗಳು ಇರಬಹುದು, ಆದರೆ ಇಂದು ಅವುಗಳನ್ನೆಲ್ಲವನ್ನೂ ಸಂರಕ್ಷಣೆಯ ದೃಷ್ಟಿಕೋನದಲ್ಲಿಯೇ ನೋಡಿಕೊಳ್ಳಲಾಗುತ್ತದೆ, ಏಕೆಂದರೆ 1500 ಹೆಚ್ಚು ಆರ್ಕಿಡ್ ತಳಿಗಳು ಕಣ್ಮರೆಯಾಗಿದೆ, 195 Critically endangerd ಪಟ್ಟಿಯಲ್ಲಿದೆ ಹಾಗೂ 394 endangerd ಸಾಲಿನಲ್ಲಿದೆ. 

ಪ್ರಸ್ತುತ ಬಾಂಗ್ಲಾದೇಶ ಒಂದರಲ್ಲಿಯೇ 32 ಪ್ರಭೇದದ ಆರ್ಕಿಡ್ ಳು ಗತಿಸಿಹೋಗಿದೆ, ಕಾಂಬೋಡಿಯ ದೇಶ ಒಂದರಲ್ಲಿಯೇ 4270 ವಿಧವಾದ ಆರ್ಕಿಡ್ ಸಸ್ಯ ಗಳಿದ್ದು ಇವುಗಳಲ್ಲಿ ಶೇಕಡಾ 37 ಅಳಿವಿನಂಚಿಗೆ ತಲುಪುತ್ತಿವೆ, 21ನೇ ಶತಮಾನದ ವಿಜ್ಞಾನ ಯುಗದಲ್ಲಿರುವ ನಾವು Grafting & Hybrid ವಿಧಾನದಿಂದ 1,00,000 ದಷ್ಟು ವೈವಿಧ್ಯಮಯವಾದ ಆರ್ಕಿಡ್ ತಳಿಗಳನ್ನು ಸಂಶೋಧಿಸಿ ಬೆಳೆಸಲಾಗಿದೆ.

ಈ ಪ್ರಕೃತಿಯನ್ನು ಎಷ್ಟು ಬಾರಿ ಅರ್ಥ ಮಾಡಿಕೊಳ್ಳಲಿಕ್ಕೆ ಪ್ರಯತ್ನಪಟ್ಟರು ಮನುಷ್ಯನಿಂದ ಸಾಧ್ಯವೇ ಆಗಿಲ್ಲ, ಏಕೆಂದರೆ, ಈ ಹಿಂದೆಯೇ ಗತಿಸಿ ಹೋಗಿದೆ ಎಂದುಕೊಳ್ಳಲಾಗಿದ್ದ Eulophia obtusa ಎಂಬ ನೆಲದ ಆರ್ಕಿಡ್ ಸಸ್ಯ ಸುಮಾರು 118 ವರ್ಷಗಳ ಬಳಿಕ ಭಾರತದ ಉತ್ತರಾಖಂಡ ರಾಜ್ಯದಲ್ಲಿ ಕಾಣಸಿಕ್ಕಿದ್ದು.
ಆರ್ಕಿಡ್ ಸಸಿಗಳನ್ನು ಕೇವಲ ಅಲಂಕಾರಿಕ ಸಸ್ಯ ಅಷ್ಟೇ ಅಲ್ಲದೆ, ಇದರಲ್ಲಿರುವ ಕೆಲವು ಸಸ್ಯಗಳು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದ್ದು ಆಯುರ್ವೇದದಲ್ಲಿಯೂ ಬಳಕೆಯಲ್ಲಿದೆ.

ಪ್ರಪಂಚದಲ್ಲಿ ವೈವಿಧ್ಯಮಯವಾದ ಆರ್ಕಿಡ್ ಸಸ್ಯಗಳು ನೋಡಲು ಸಿಗುತ್ತವೆ,
Grammatophyllum speciosum ಎಂಬ ಆರ್ಕಿಡ್ ಹೂವು ಪ್ರಪಂಚದ ದೈತ್ಯ ಹೂ ಎಂದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ನೊಂದಾಯಿಸಿ ಕೊಂಡಿದೆ,

Platystele jungermannioides ಎಂಬ ಆರ್ಕಿಡ್ ಹೂಗಳು ಪ್ರಪಂಚದ ಪುಟ್ಟ ಹೂಗಳೆಂದು ಗುರುತಿಸಿಕೊಂಡಿದೆ.

ಗ್ರೀಕ್ ಸಸ್ಯಶಾಸ್ತ್ರಜ್ಞ Throphrastos ಈ ಪುಷ್ಪಗಳನ್ನು ವಿಲಕ್ಷಣ ಹೂವು ಎಂದು ಕರೆಯಲು ಕಾರಣಗಳಿವೆ, ಹಾಗೂ ಕೆಲವು ಆರ್ಕೆಟ್ ಸಸ್ಯಗಳಿಗಿರುವ ಹೆಸರುಗಳು ನಗೆಯನ್ನು ತರಿಸುತ್ತದೆ,

1 Naked man orchid / Orchis italica
2 Bird orchid 
3 Flyingduck orchid
4 Monyey face orchid
5 Bee orchid
6 White egret orchid


7 Holy ghost orchid
8 Swaddhed babies orchid
9 Tiger face orchids
10 Clamsell orchids
11 Moth orchids
12 Angel orchids


13 Ballerina orchids
14 Lady slipper orchids
15 Violet color orchids
16 Rose orchids
17 Queen orchids
18 Little star orchids


ಬಹಳಷ್ಟು ಆರ್ಕಿಡ್ ಸಸ್ಯಗಳು ಕೇವಲ ಬಣ್ಣಕ್ಕೆ ಮಾತ್ರ ಸೀಮಿತವಾಗದೆ ಪರಿಮಳ ಗಂಧವನ್ನು ಹೊಂದಿದೆ,

1 Sweet / ಸಿಹಿ ರುಚಿಯನ್ನು - Brassavola nodosa, Little star orchid

2 Coconut / ತೆಂಗಿನಕಾಯಿಯ ರುಚಿಯನ್ನ - Encyclia radiata, Maxillaria tenifolia 

3 Jasmine / ಮಲ್ಲಿಗೆ ರುಚಿಯನ್ನು - Neofinetia falcata 

4 Rose / ಗುಲಾಬಿ ರುಚಿಯನ್ನು - Miltoniopsis

5 Honey /  ಜೇನುತುಪ್ಪದ ರುಚಿಯನ್ನು-  Encyclia fragrans


ಕೆಲವು ದೇಶಗಳು ಆರ್ಕಿಡ್ ಸಸ್ಯಗಳನ್ನು ರಾಷ್ಟ್ರ ಪುಷ್ಪ ಎಂದು ಗುರುತಿಸಿಕೊಂಡಿದೆ ಅವುಗಳಲ್ಲಿ ಕೆಲವೆಂದರೆ

1 Venuzuela - Cattleya mossiae

2 Colombia - Cattleya trianae

3 Singapor - Vanda Miss 

4 Belize - Black orchids, etc


ಇನ್ನು ನಮ್ಮ ಭಾರತದಲ್ಲಿಯೇ ಮನಮೋಹಕ ಆರ್ಕಿಡ್ ಸಸ್ಯಗಳಿವೆ,

1 Blue vanda orchid
2 Dearei orchid
3 Miss joaguim orchid
4 Stangeana orchid
5 Mountain vanda orchid

6 Vanda bicolor orchid
7 Vanda tessellate orchid
8 Vanda wightii
9 Vanda cristata


ಭಾರತದಲ್ಲಿ ಅತ್ಯಂತ ಹೆಚ್ಚು ಆರ್ಕಿಡ್ಸ್ ಸಸ್ಯಗಳು ಸಿಕ್ಕಿಂ ರಾಜ್ಯದಲ್ಲಿ ಕಂಡು ಬರುತ್ತವೆ, ಆದುದರಿಂದಲೇ ಈ ರಾಜ್ಯವನ್ನು ಹೂ ಪ್ರೀತಿಸುವವರ ಸ್ವರ್ಗ ' A flower lovers heaven' ಎಂದು ಕರೆಯಲಾಗುತ್ತದೆ. ಹಾಗೂ ತನ್ನ ರಾಜ್ಯ ಪುಷ್ಪವೆಂದು Dendrobium nobile ಆರ್ಕಿಡ್ ಸತ್ಯವನ್ನೇ ಗುರುತಿಸಿಕೊಂಡಿದೆ, ಈ ರಾಜ್ಯದಲ್ಲಿ ಒಟ್ಟು 165 ವೈವಿಧ್ಯಮಯವಾದ ಆರ್ಕಿಡ್ಸ್ ಸಸ್ಯಗಳು ಕಂಡುಬಂದಿದ್ದು ಇವು ದೇಶದ 30% ಆರ್ಕೆಟ್ ಸಸಿಗಳನ್ನು ಪ್ರತಿನಿಧಿಸುತ್ತದೆ.

ಅರುಣಾಚಲಪ್ರದೇಶದಲ್ಲಿ ದೇಶದ ಮೊದಲ ಆರ್ಕಿಡ್ ಗಾರ್ಡನ್ ಅನ್ನ ನಿರ್ಮಿಸಲಾಗಿದೆ.

ಕನ್ನಡಿಗರಿಗೆ ಅತಿ ಹೆಚ್ಚು ಹತ್ತಿರವಾಗಿರುವ ಆರ್ಕಿಡ್ ಸಸ್ಯ ಯಾವುದು ಎಂದು ನಿಮಗೆ ತಿಳಿದಿದೆಯೇ ? ಈ ಸಸ್ಯವನ್ನು ಅನೇಕರು ತಮ್ಮ ಮನೆಗಳಲ್ಲಿ ಬೆಳೆಸಿದ್ದಾರೆ, ಪರಿಮಳವನ್ನು ಸೂಸುವುದಷ್ಟೇ ಅಲ್ಲದೆ ಔಷಧೀಯ ಗುಣವನ್ನು ಹೊಂದಿದೆ ಇದರ ತೈಲವನ್ನು ತಲೆನೋವಿನ ರಾಮಬಾಣವಾಗಿ ಉಪಯೋಗಿಸುತ್ತಾರೆ, ಹಾಗಾದರೆ ಈಗ ಹೇಳಿ ಆ ಆರ್ಕಿಡ್ ಸಸ್ಯ ಯಾವುದಾಗಿರಬಹುದು ? ನನಗೂ ಮೊದಲು ಈ ಸಸ್ಯ ಆರ್ಕಿಡ್ ಗೆ ಸೇರಿದೆ ಎಂದು ತಿಳಿದಿರಲಿಲ್ಲ, Bauhinia acuminata ಎಂಬ ವೈಜ್ಞಾನಿಕ ಹೆಸರುಳ್ಳ ಆರ್ಕಿಡ್ಸ್ ಸಸ್ಯವನ್ನು ಕನ್ನಡಿಗರು ಇದನ್ನ ಮಂದಾರ ಪುಷ್ಪ ಎಂದು ಕರೆಯುತ್ತಾರೆ.

ಇನ್ನು ನಮ್ಮ ಪಶ್ಚಿಮಘಟ್ಟದ ಸಾಲಿನಲ್ಲಿ ಪ್ರಖ್ಯಾತಿಯನ್ನು ಪಡೆದ Aerides maculos ಎಂಬ ವೈಜ್ಞಾನಿಕ ಹೆಸರುಳ್ಳ ಆರ್ಕಿಡ್ಸ್ ಸಸ್ಯ ಇಂಗ್ಲಿಷ್ ನಲ್ಲಿ Fox tail ಕನ್ನಡದಲ್ಲಿ ನರಿಯ ಬಾಲ ಅಥವಾ ದ್ರೌಪತಿ ಪುಷ್ಪವೆಂದು ಕರೆಯುತ್ತಾರೆ.
ಇನ್ನು ಕೆಲವು ಆರ್ಕಿಡ್ಸ್ ಸಸ್ಯದ ಹಣ್ಣುಗಳ ಸ್ವಾದವನ್ನು ನಾವು ಆಸ್ವಾದಿಸಿರುತ್ತೇವೆ ಆದರೆ ಅವು ನಿಜವಾಗಿಯೂ ಆರ್ಕಿಡ್ ಸಸ್ಯಗಳಿಂದ ಬೆಳೆದಿದೆ ಎಂದು ತಿಳಿದಿರುವುದೇ ಇಲ್ಲ ಇದಕ್ಕೆ ಒಂದು ಉದಾಹರಣೆ ಮಡಗಾಸ್ಕರ್ ದೇಶದಲ್ಲಿ ಹೆಚ್ಚು ಬೆಳೆದು ಇಡೀ ಪ್ರಪಂಚಕ್ಕೆ ರಫ್ತಾಗುವ ಹಾಗೂ ಹೆಚ್ಚು ಬೆಲೆಬಾಳುವ ಹಣ್ಣುಗಳೇ Vanilla orchids, ಈ flavour ರನ್ನು ಹೆಚ್ಚಿನದಾಗಿ ಐಸ್ ಕ್ರೀಮ್ ಲ್ಲಿ ತಿಂದಿರುತ್ತವೆ ಅಲ್ಲವೇ ? ಹೀಗೆ ಅನೇಕ ವಿಧವಾದ ಆರ್ಕಿಡ್ ಗಳನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ಇಷ್ಟೆಲ್ಲ ವೈವಿಧ್ಯಮಯವಾದ ಹಾಗೂ ಇತಿಹಾಸವನ್ನು ಹೊಂದಿರುವ ಆರ್ಕಿಡ್ ಸಸ್ಯಗಳನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಜೀವವೈವಿಧ್ಯ ( Botanical garden ) ಪಾರ್ಕ್ ಗಳು ಉಳಿಸಿ ಮುಂದಿನ ಭವಿಷ್ಯಕ್ಕಾಗಿ ಸಂರಕ್ಷಿಸುತ್ತಿದೆ, ಇವುಗಳಲ್ಲಿ ಕೆಲವೆಂದರೆ Royal botanical garden - London , North american orchids conservation etc, ಇನ್ನೂ ರಾಷ್ಟ್ರೀಯ ಮಟ್ಟದಲ್ಲಿ ಭಾರತದಲ್ಲಿ ಜಗದೀಶ್ ಚಂದ್ರ ಬೋಸ್ Botanical garden ನಲ್ಲಿ & number of botanical garden ಗಳಲ್ಲಿ ಸಂರಕ್ಷಿಸಲ್ಪಪಟ್ಟಿದೆ, ರಾಜ್ಯಮಟ್ಟದಲ್ಲಿ ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ Orchids society of karnataka ಸಂರಕ್ಷಣೆಯಲ್ಲಿ ತೊಡಗಿದೆ, ಸಂಸ್ಥೆಗಳ ಹೊರತಾಗಿಯೂ ಅನೇಕ ಖಾಸಗಿ ವ್ಯಕ್ತಿಗಳು ಎಲೆಮರೆ ಕಾಯಿಗಳಂತೆ ಇಂತಹ ಅದ್ಭುತ ಸಸ್ಯಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ, ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಅರಣ್ಯ ಇಲಾಖೆಯ ನೌಕರರು ಆದ ಕೆ ಎಸ್ ಶಶಿಧರ್ ಎಂಬುವವರು ತಮ್ಮ ಮನೆಯ ತಾರಸಿಯಲ್ಲಿ ವೈವಿಧ್ಯಮಯವಾದ ಆರ್ಕಿಡ್ಸ್ ಸಸ್ಯಗಳನ್ನು ಬೆಳೆಸಿದ್ದಾರೆ.

ನೋಡಿ ಒಂದು ಪುಟ್ಟ ಹೂ ಬಿಡುವ ಸಸ್ಯ ಇಡೀ ಪ್ರಪಂಚದ ಜನರನ್ನು ತನ್ನತ್ತ ಸೆಳೆದು, ಅಲಂಕಾರಿಕ ಸಸ್ಯಗಳ ಸಾಲಿನ ಅಗ್ರಗಣ್ಯ ಸ್ಥಾನಮಾನ ಪಡೆದ ಬಗೆಯನ್ನು, ಹೇಗೆ ಜನರು ದುಶ್ಚಟಗಳಿಗೆ ದಾಸರಾಗುತ್ತಾರೋ, ಅದೇ ರೀತಿ ಪ್ರಪಂಚದ ಹಲವಾರು ಜನ ವೈವಿಧ್ಯಮಯವಾದ ಆರ್ಕಿಡ್ ಸಸ್ಯಗಳ ಸಂಗ್ರಹದಲ್ಲಿ ದಾಸರಾಗಿದ್ದಾರೆ, ಈ ಸಂಗ್ರಹ ನಮಗೆ ಸಂತಸ, ಮನಶಾಂತಿ ಹಾಗೂ ಆನಂದವನ್ನು ನೀಡಿದೆ ಎಂದು ಹೇಳುತ್ತಾರೆ.

ಪ್ರತಿವರ್ಷವೂ ಹವಾಮಾನದ ವೈಪರೀತ್ಯ ಹಾಗೂ ಇತರೆ ಕಾರಣಗಳಿಂದ ಈ ಅದ್ಭುತ ಸಸ್ಯಗಳು ಕಣ್ಮರೆಯಾಗುತ್ತಲಿವೆ, ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ.

ಮುಡಿಗೇರಿದ ಪುಷ್ಪವಾದರೂ ಸೀತಾಳೆ ಗೆಡ್ಡೆ / ಆರ್ಕಿಡ್  ಸಸ್ಯಗಳಿಗಿರುವ ವೈವಿಧ್ಯತೆ ಹಾಗೂ ಇತಿಹಾಸ ಈ ಅಂಕಣದಿಂದ ತಿಳಿಯಿತು ಎಂದು ಭಾವಿಸಿದ್ದೇನೆ, ಎಲ್ಲೆಡೆಯೂ ಹಸಿರು ಕಿಚ್ಚೆಚ್ಚಲಿ, ಕಿಚ್ಚಸ್ಟೇಯಲ್ಲ ಹಸಿರು ಹೆಚ್ಚಲಿ.

ಧನ್ಯವಾದಗಳು.



4 comments:

  1. ಕಾಲಘಟ್ಟದಲ್ಲಿ ನಶಸಿ ಹೋದ ವಿವಿಧ ಹೂವುಗಳ ವೈವಿಧ್ಯತೆ,
    ಇನ್ನು ಮುಂದೆ ನಾವು ಕಾಪಾಡಿಕೊಂಡು ಬರಬೇಕಿರುವ ಹೂವುಗಳ ಮಹತ್ವ ,
    ಇದರ ಬಗ್ಗೆ ವಿಸ್ತಾರವಾಗಿ ನಮಗೆ ತಿಳಿಸಿರುತ್ತೀರಿ.
    "ಜನ ಸೇರಿದರೆ ಜಾತ್ರೆ ನೋಡಲು ಬಹಳ ಸೊಗಸು" ಅದೇ ರೀತಿಯಲ್ಲಿ
    ಪರಿಸರ ಉಳಿಸುವರು
    ಬೆಳೆಸುವರು
    ಒಟ್ಟಾಗಿ ಸೇರಿದಾಗ ಪರಿಸರದ ಸೊಬಗನ್ನು ನೋಡಲು ಬಹಳ ಸೊಗಸು ... ವಂದನೆಗಳು

    ReplyDelete
  2. ಆರ್ಕಿಡ್ ಸಸ್ಯ ತಳಿಯ ಬಗ್ಗೆ ಬರೆದಂತಹ ಲೇಖನ ಚೆನ್ನಾಗಿ ಮೂಡಿ ಬಂದಿದೆ.

    ReplyDelete