ಚಿಕ್ಕವರೇ ಆಗಿರಬೇಕು ಅಂತೇನೂ ಇಲ್ಲ, ಎಷ್ಟೇ ದೊಡ್ಡವರಾಗಿದ್ದರು ಕೂಡ ಶೃಂಗೇರಿಗೆ ಹೋದಾಗಲೂ ಅಥವಾ ಮಂಗಳೂರಿನ ಕಡಲ ತೀರಕ್ಕೆ ಹೋದಾಗಲೂ ಅಲ್ಲಿ ಕಾಣಸಿಗುವ ಬಣ್ಣಬಣ್ಣದ ವಿಶಿಷ್ಟ ಗಾತ್ರ, ಆಕಾರ, ರಚನೆ, ಬಣ್ಣ ಬಣ್ಣದ ಮತ್ಸ್ಯ ಗಳನ್ನು ನೋಡಿ ಮರುಳಾಗದವರು ಬಹಳ ಕಡಿಮೆಯೇ ( ಮತ್ಸ್ಯಗಳ ವೈವಿಧ್ಯತೆಯನ್ನು ತಿಳಿದುಕೊಳ್ಳಲು ಮಾಂಸಾಹಾರಿಗಳೇ ಆಗಿರಬೇಕು ಎಂದೇನೂ ಇಲ್ಲ ) ಮೀನುಗಳ ಚಲನವಲನಗಳನ್ನು ನೋಡುತ್ತಿದ್ದರೆ ಸಮಯ ಹೋಗಿದ್ದೆ ತಿಳಿದಿರುವುದಿಲ್ಲ.
ಬಾಲ್ಯದಲ್ಲಿ ಹಣವನ್ನು ಕೂಡಿಟ್ಟು ಮೀನುಗಳನ್ನು ತಂದು ಅಕ್ವೇರಿಯಂನಲ್ಲಿ ಸಾಕಿದವರು ನೀವು ಆಗಿರಬಹುದು, ಪ್ರತಿ ಬಾರಿ ಮೀನನ್ನು ತಂದು ಅಕ್ವೇರಿಯಂನಲ್ಲಿ ಸಾಕಿದಾಗ ಏನೋ ಒಂದು ರೀತಿಯ ಕುತೂಹಲ, ಬೆಳಿಗ್ಗೆಯಿಂದ ಸಂಜೆವರೆಗೂ ಅವುಗಳ ಮುಂದೆ ಕುಳಿತಿದ್ದು ಇರಬಹುದು, ಕೆಲವೊಮ್ಮೆ ಅವುಗಳೊಂದಿಗೆ ಮಾತನಾಡುವುದಕ್ಕೆ ಪ್ರಯತ್ನ ಪಟ್ಟಿರಬಹುದು, ಇದಕ್ಕಿಂತಲೂ ಇನ್ನು ಕುತೂಹಲಕರ ವಿಷಯವೆಂದರೆ ಅವು ಆಹಾರವನ್ನು ಹೇಗೆ ತಿಂತಾವೆ ? ಹೇಗೆ ಈಜುತ್ತವೆ ? ಹೇಗೆ ಆಟ ಆಡುತ್ತವೆ ? ಕಣ್ಣುನಾ ಹೇಗೆ ಮಿಟುಕಿಸುತ್ತವೇ ? ಹೇಗೆ ಉಸಿರಾಡುತ್ತವೆ ? ನಿದ್ದೆ ಹೇಗೆ ಮಾಡುತ್ತವೆ ? ಅವು ತುಂಬಾದಿನ ಬದುಕಲಿ ಎಂದು ವಾರಕ್ಕೆ ಒಮ್ಮೆಯೋ ಅಥವಾ ಹದಿನೈದು ದಿನಕ್ಕೆ ಒಮ್ಮೆಯೂ ಅಕ್ವೇರಿಯಂ ತೊಳೆದಿರಬಹುದು, Extra care ಮಾಡುತ್ತೇವೆ ಎಂದು ಬಹಳಷ್ಟು ಸಲಕರಣೆಗಳನ್ನು ತಂದು ಜೋಡಿಸಿರಬಹುದು, ಇಷ್ಟೆಲ್ಲಾ ಮಾಡಿಯೂ ಕೂಡ ಕೊನೆಗೆ ಹಸುನೀಗಿದಾಗ ಅತ್ತು ಗೋಳಾಡಿ ಅಂತ್ಯಕ್ರಿಯೆಯನ್ನು ಮುಗಿಸಿ, ಮತ್ತದೇ ಸ್ಪಿರಿಟ್ ನಲ್ಲಿ ಮತ್ತಷ್ಟು ಮೀನುಗಳನ್ನು ತಂದು ಹಾಕಿರಬಹುದು. ಮುಂದೆ ಬೆಳೆಯುತ್ತ Career ಎಂಬ ವಿಷಯದಲ್ಲಿ ಮುಳುಗುತ್ತಾ ಇವುಗಳ ಸಂಪರ್ಕದಿಂದ ದೂರವಾಗಿರಲೂಬಹುದು.
ವಿಕಸನ ಹಾದಿಯಲ್ಲಿ ಜಲಚರಗಳೇ ಮೊದಲನೆಯವು ಇವುಗಳೇ ಕಾಲಕ್ರಮೇಣ ನೀರಿನಿಂದ ಹೊರಗೆ ಬಂದು ಪ್ರಾಣಿ-ಪಕ್ಷಿಗಳಾಗಿ ಮಾರ್ಪಾಡಾಗಿ ಮುಂದೆ ಮಾನವನ ವಿಕಸನದಲ್ಲಿ ಪಾತ್ರವನ್ನು ವಹಿಸಿದ್ದರಿಂದ ಜಲಚರಗಳು ಮಾನವನಿಗೆ ಮೊದಲಿಂದಲೂ ಪರಿಚಿತ.
ಇಂತಹ ವಿಕಸನ ಆದಿಯಲ್ಲಿಯೇ ಮೀನುಗಳು ಕೂಡ ವೈವಿಧ್ಯಮಯವಾಗಿ ಬೆಳವಣಿಗೆ ಹೊಂದಿದವು, ಇಂದು ಈ ರೀತಿಯಾದಂತಹ ಮೀನುಗಳು ಇಲ್ಲ ಎಂಬ ಹಂತಕ್ಕೆ ಮೀನುಗಳು ವಿಕಸನ ಹೊಂದಿವೆ. ಪ್ರಪಂಚದ ಅತಿ ಪುಟ್ಟ ಮೀನು Paedocypris progenetica, ಅತ್ಯಂತ ದೊಡ್ಡ ಗಾತ್ರದ ತಿಮಿಂಗಳ / Blue whale, ಬುದ್ಧಿವಂತ ಮೀನು Dolphin, ವಿದ್ಯುತ್ತನ್ನು ಹೊರಸೂಸುವ ಎಲೆಕ್ಟ್ರಿಕ್ ಫಿಶ್, ಎಂದೂ ಸಾಯದ Jelly fish, ಕುದುರೆ ಮೀನು, ಸಮುದ್ರದ ಉಪ್ಪು ನೀರಿನಲ್ಲಿ ಬೆಳೆದು ತಾನು ಹುಟ್ಟಿದ ಸಿಹಿನೀರಿನ ಜಾಗಕ್ಕೆ ಹಿಂತಿರುಗುವ Salman fish, ನಕ್ಷತ್ರಮೀನು, ಮುತ್ತು ರತ್ನ ಹವಳಗಳು ಕೂಡ ಜಲಚರಗಳೇ, ಇವುಗಳೊಂದಿಗೆ ಉಭಯಚರಗಳಾದ ಮೊಸಳೆ, ಏಡಿ, ಕಪ್ಪೆ, ಸುದೀರ್ಘ ಜೀವನ ನಡೆಸುವ ಆಮೆ ಹೀಗೆ ಅಗಾಧವಾದ ಜೀವವೈವಿಧ್ಯವನ್ನು ಒಳಗೊಂಡಿದೆ. ಇಷ್ಟೆಲ್ಲಾ ವೈವಿಧ್ಯಗಳ ನಡುವೆ ಸಮುದ್ರದಲ್ಲಿ ಜೀವಿಸುವ ಮೀನುಗಳೇ ಎತ್ತಿದ ಕೈ ಏಕೆಂದರೆ ಸಮುದ್ರ ವಿಸ್ತೀರ್ಣ ಬಹಳ ವಿಶಾಲವಾಗಿದೆ ಅಲ್ಲವೇ ?
ವೈವಿಧ್ಯಮಯವಾದ ಈ ಮತ್ಸ್ಯಗಳ ಲೋಕದಲ್ಲಿ ಪ್ರತಿಶತ 90 ಭಾಗ ಮೊಟ್ಟೆ ಇಡುವ ಮೀನುಗಳೇ, ಇನ್ನ ಉಳಿದ ಹತ್ತು ಪರ್ಸೆಂಟ್ ನೇರವಾಗಿ ಮರಿಗಳಿಗೆ ಜನ್ಮವನ್ನು ನೀಡುತ್ತವೆ ಇವುಗಳನ್ನು ಸಸ್ತನಿಗಳು ಅಥವಾ Mammals( ನೇರವಾಗಿ ಮರಿಗಳಿಗೆ ಜನ್ಮವನ್ನು ನೀಡುವ, ಹಾಲು ಉಣಿಸುವ ) ಎಂದು ಕರೆಯಲಾಗುತ್ತದೆ ( ಮಾನವರು ಕೂಡ ಸಸ್ತನಿಗಳ ಗುಂಪಿಗೆ ಸೇರುವುದು ) ( Exa - Dolphin, Blue whale etc, ) ಕೆಲವು ಮೀನುಗಳು ಸಮುದ್ರದಲ್ಲಿ ಮಾತ್ರ ಬದುಕುತ್ತವೆ, ಇನ್ನು ಕೆಲವು ಸಿಹಿ ನೀರಿನಲ್ಲಿ ಮಾತ್ರ, ಗಮನಿಸಬೇಕಾದ ಅಂಶವೆಂದರೆ ಈ ಸಮುದ್ರದಲ್ಲಿ ವಾಸಿಸುವ ಮೀನುಗಳು ಸಮುದ್ರದ ಕೆಲವು ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ, ಆ ಪ್ರದೇಶ ಮಾಂಗ್ರೋ ಗಿಡಗಳಿಂದ ಕೂಡಿರಬಹುದು, ಹವಳ ದಿಣ್ಣೆಗಳು ಆಗಿರಬಹುದು, ಕೆಲವು ನದಿ ಮುಖಜ ಭೂಮಿಯಲ್ಲಿ, ಕಲ್ಲಿನ ಪೊಟರೆಗಳಲ್ಲಿ ಜೀವನ ನಡೆಸುತ್ತವೆ, ಸಣ್ಣ ಮೀನುಗಳೇ ದೊಡ್ಡ ಮೀನುಗಳಿಗೆ ಆಹಾರ, ಈ ಸಣ್ಣ ಮೀನುಗಳು ಹುಳಗಳನ್ನು ಅಥವಾ ತರಗೆಲೆಯ ಕಸವನ್ನು ತಿಂದು ಬದುಕುತ್ತವೆ. ಇವುಗಳ ದೇಹರಚನೆಯ ಮೈಮೇಲಿನ ಲೋಳೆ ಅಂಶ ನೀರಿನಲ್ಲಿ ಸರಾಗವಾಗಿ ಚಲಿಸಲು, ಕಿವಿರುಗಳು ಉಸಿರಾಡಲು, ಬಾಲಾ ರೆಕ್ಕೆಗಳು ಮುಂದೆ ಚಲಿಸಲು ಅನುವು ಮಾಡಿಕೊಡುತ್ತದೆ. ಉಭಯಚರಗಳಲ್ಲಿ ಒಂದಾದ ಕಪ್ಪೆ ನೀರಿನಲ್ಲಿದ್ದಾಗ ಚರ್ಮದಿಂದಲೂ, ಆಮೆ, ಪೆಂಗ್ವಿನ್, ನೀರು ನಾಯಿ ನೀರಿನಿಂದ ಹೊರಗೆ ಇದ್ದಾಗ ಮೂಗಿನ ಸಹಾಯದಿಂದ ಉಸಿರಾಡುತ್ತವೆ. ಇನ್ನು ಕಣ್ಣಿನ ವಿಷಯಕ್ಕೆ ಬರುವುದಾದರೆ ಬಹಳಷ್ಟು ಸ್ವಾರಸ್ಯವಾಗಿಯೇ ಉಳಿದಿದೆ, ಕೆಲವಕ್ಕೆ ಮಾನವನಂತೆ ಕಣ್ಣಿನ ರೆಪ್ಪೆ ಇದ್ದು ಕಣ್ಣನ್ನ ಮಿಟುಕಿಸುತ್ತವೆ,Gold fish ನಂತಹ ಕಣ್ಣಿನ ರೆಪ್ಪೆ ಇರದ ಮೀನುಗಳು ಇವೆ, ಇದೆರಡೂ ಬಗೆಯಾದ ಮೀನುಗಳು ನಿದ್ರಿಸುವುದು, ಸುದೀರ್ಘ ಜೀವನ ನಡೆಸುವ ಆಮೆ ಸಸ್ಯಾಹಾರಿಯಾಗಿರುವುದು, ಕೇರಳದ ದೇವಸ್ಥಾನವೊಂದರಲ್ಲಿ ಸಸ್ಯಹಾರಿ ಮೊಸಳೆ, ಬುದ್ಧಿವಂತಿಕೆಯನ್ನು ಪ್ರದರ್ಶಿಸಿ ಮಾನವನ ಮಾತುಗಳನ್ನು ಅರ್ಥಮಾಡಿಕೊಂಡು ಅಕ್ವೇರಿಯಂನಲ್ಲಿ ಆಟವಾಡುವುದನ್ನು ಕಲಿತ Dolphin fish, ಇರುವುದೆಲ್ಲವೂ ಮತ್ಸ್ಯ ಲೋಕದ ಸ್ವಾರಸ್ಯಮಯ ವಿಷಯವೇ.
ಪ್ರಪಂಚದಲ್ಲಿ ಒಟ್ಟು 33600 ಬಗೆಯಾದ ಮೀನು ಜಾತಿಗಳಿವೆ ಎಂದು ಗುರುತಿಸಲಾಗಿದೆ ಅವುಗಳಲ್ಲಿ 30000 ಸಮುದ್ರದಲ್ಲಿ ವಾಸಿಸಿದರೆ 4000 ಜಾತಿ ಮೀನುಗಳು ಸಿಹಿನೀರಿನಲ್ಲಿ ವಾಸಿಸುತ್ತವೆ, 2000 ಬಗೆಯಾದ ಉಭಯಚರ ಜೀವಿಗಳಿವೆ, ಮಾನವನ ದುರಾಸೆಯಿಂದಾಗಿ / Fishing, 1100 ಅಧಿಕ ಮೀನುಜಾತಿಗಳು ಅಳಿವಿನಂಚಿಗೆ ತಲುಪಿವೆ.
ಪಂಚಭೂತಗಳನ್ನು ಪೂಜಿಸಿದ ಭಾರತೀಯರು ಮೀನುಗಳನ್ನು ಪೂಜಾ ಭಾವನೆಯಿಂದಲೇ ಕಂಡವರು, ವಿಷ್ಣುವಿನ ಅವತಾರಗಳಲ್ಲಿ ಮತ್ಸ್ಯಾವತಾರ, ಸಮುದ್ರ ಮಂಥನದಲ್ಲಿ ನಡೆಯುವ ಪೌರಾಣಿಕ ಹಿನ್ನೆಲೆ, ಮತ್ಸ್ಯಾವತಾರದಲ್ಲಿ ಅಭೂತಪೂರ್ವವಾಗಿ ವಿವರಿಸಲಾಗಿದೆ. ಧರ್ಮಿಕ ಆಚರಣೆಗಳಲ್ಲಿಯೂ ಮೀನುಗಳು ಹಾಸುಹೊಕ್ಕಾಗಿ ನಮ್ಮೆಲ್ಲಾ ಪುಣ್ಯಕ್ಷೇತ್ರಗಳ ನದಿತಟದಲ್ಲಿ ಪೂಜಿಸಲಾಗುತ್ತದೆ. ಇನ್ನು ಕೆಲವು ಕಥೆಗಳಲ್ಲಿ ಒಡಮೂಡುವ ಮತ್ಸ್ಯಕನ್ಯೆಯ ಪ್ರಸಂಗ ಮಕ್ಕಳಲ್ಲಿ ಸಂತಸವನ್ನು ಮೂಡಿಸುತ್ತದೆ. ನಿಮಗೆ ತಿಳಿದಿರಬಹುದು ಮೀನುಗಳ ಚಲನವಲನಗಳನ್ನು ನೋಡುವುದರಿಂದ ಹೃದಯಾಘಾತವಾಗುವುದನ್ನು ತಪ್ಪಿಸಬಹುದು ಎಂದು ಸಂಶೋಧನೆಗಳು ಹೇಳುತ್ತದೆ.
ರಾಜರ ಆಳ್ವಿಕೆಯಲ್ಲಿ ನೋಡುವುದಾದರೆ ರಾಣಿಯರಿಗಾಗಿ ನಿರ್ಮಿಸುತ್ತಿದ್ದ ಪುಷ್ಪ ವನಗಳ ಕೊಳಗಳಲ್ಲಿ ವೈವಿಧ್ಯಮಯವಾದ ಮೀನುಗಳನ್ನು ಕಾಣಬಹುದಾಗಿತ್ತು, ಇದು ಪ್ರಪಂಚದ ನಾನಾ ಭಾಗಗಳ ರಾಜರ ಆಳ್ವಿಕೆಯ ಕಾಲದಲ್ಲಿ ಉಲ್ಲೇಖವಾಗಿದೆ. ಇದೇ ಕಾಲದಲ್ಲಿ ಸಂಸ್ಥಾನಕ್ಕೆ ದ್ರೋಹ ಬಗೆಯುವವರನ್ನು, ಗೂಢಚಾರಿಗಳನ್ನು ವಿಷಕಾರಿ ಮೀನು ಹಾವುಗಳಿಂದ ಕೂಡಿದ್ದ ಹಳ್ಳಕ್ಕೆ ತಳ್ಳಲಾಗುತ್ತಿತ್ತು ಎಂಬುದು ತಿಳಿಯುತ್ತದೆ. ಹೀಗಾಗಿಯೇ ಇಂದಿಗೂ ಅನೇಕ ದೇಶಗಳ ರಾಷ್ಟ್ರ ಲಾಂಛನಗಳಲ್ಲಿ ಮೀನುಗಳು ಸಾರ್ವಭೌಮತ್ವವನ್ನು ಸಾಧಿಸಿಕೊಂಡಿದೆ.
ಸುಮಾರು ಐದುನೇ ಶತಮಾನದಲ್ಲಿ ಇದ್ದಂತಹ ಅಮರಸಿಂಹ ತನ್ನ ನಾಗಲಿಂಗ ಶಾಸನದಲ್ಲಿ ಕೆಲವು ಮತ್ಸ್ಯ ಜಾತಿಗಳ ಬಗ್ಗೆ ತಿಳಿಸಿದ್ದಾನೆ, ಇದು ಅಮರಕೋಶ ಪುಸ್ತಕದ, ಪ್ರಥಮ ಕಾಂಡದ, ವಾರಿ ವರ್ಗ ಅಧ್ಯಾಯದ 39ನೇ ಪುಟದಲ್ಲಿದೆ.
ಪೂರ್ವದಲ್ಲಿ ಸಮುದ್ರದ ದಡದಲ್ಲಿ ವಾಸಿಸಿದ ಮಾನವ ಮೀನನ್ನು ಆಹಾರವಾಗಿಸಿಕೊಂಡ ಪುಟ್ಟ ದೋಣಿಯನ್ನು ಮಾಡುವುದನ್ನು ಕಲಿತು ಬಲೆ ಹೆಣೆಯುವುದನ್ನು ಕಲಿತವ ಸಣ್ಣಪ್ರಮಾಣದಲ್ಲಿ ಮೀನುಗಳನ್ನು ಹಿಡಿಯುತ್ತಾ ನನ್ನ ಕುಟುಂಬದವರಿಗೆ ಆಹಾರವನ್ನು ದೊರಕಿಸಿ ಕೊಡುವುದನ್ನು ಕಲಿತ, ಇಂದಿಗೂ ಪುಟ್ಟ ಕೈ ದೋಣಿಯನ್ನಿಡಿದು ಸಮುದ್ರಕ್ಕೆ ಧುಮುಕುವ ಮೀನುಗಾರರು ಮೀನುಗಳಿಗೆ ನಮಿಸಿಯೆ ದಿನ ಪ್ರಾರಂಭಿಸುವುದು. ಎಂದು ಮೀನುಗಾರಿಕೆ ಕಮರ್ಷಿಯಲ್ ಆಗತೊಡಗಿತೋ ಅಂದಿನಿಂದ ದೊಡ್ಡ ದೊಡ್ಡ ಹಡಗುಗಳ ಮೂಲಕ ಆಳವಾದ ಸಮುದ್ರಗಳಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಮೀನನ್ನು ಹಿಡಿಯುತ್ತಾ ಅವುಗಳ ಸಂತತಿ ಕ್ಷೀಣಿಸುವ ಹಾಗೆ ಮೀನುಗಾರಿಕೆಯನ್ನು ಮಾಡಿದ. ( ಗುಲಾಬಿ ಟಾಕೀಸ್, Life of pi movie, Blue whale documentory ಒಮ್ಮೆ ನೋಡಿ )
ಇಂದು ಪ್ರಪಂಚದ ಒಟ್ಟು ಮತ್ಸ್ಯ ವ್ಯಾಪಾರ 285,359.7 million US $ ಗಳಲ್ಲಿ ನಡೆಯುತ್ತಿದೆ. ಭಾರತದ ಒಟ್ಟು ಜಿಡಿಪಿಯ ಪ್ರತಿಶತ 2% ಮತ್ಸ್ಯ ವ್ಯಾಪಾರದಿಂದಲೇ ಬರುತ್ತಿದೆ. ಮತ್ಸ್ಯಗಳ ಅಧ್ಯಯನ, ಸಂಶೋಧನೆಗೆಂದೇ ಪ್ರತ್ಯೇಕ ಸಂಸ್ಥೆಗಳಿವೆ, ಸಾವಿರಾರು ಸಂಶೋಧನೆಗಳು ನಡೆದಿದೆ. ನಗರದ ಜಂಜಾಟದ ಜೀವನದಲ್ಲಿ ಸಿಲುಕಿರುವ ಮಾನವನಿಗೆ ಮತ್ಸ್ಯಲೋಕ ಮಾನವರಿಗೆ ಸಂತೋಷವನ್ನು ನೀಡುವುದರಿಂದ ಇದರ ಹಿಂದೆ ದೊಡ್ಡ ವ್ಯಾಪಾರವೂ ಇದೆ, ಲಕ್ಷಾಂತರ ಜನ ಭಾರತದಲ್ಲಿ ಅಕ್ವೇರಿಯಂ ಮಳಿಗೆಗಳನ್ನು ಇಟ್ಟಿದ್ದಾರೆ, ಕೊಳ್ಳುವವರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲೇ ಇದೆ, Dolphin ಗಳ ಪಳಗಿಸಿ ಜಲಕ್ರೀಡೆಯೊಳಗೆ ಮನೋರಂಜನೆಗಾಗಿ ಬಳಸುವುದರಿಂದ ಇದನ್ನು ನಡೆಸುವ ಸಂಸ್ಥೆಗೆ ಲಕ್ಷಾಂತರ ರೂಪಾಯಿ ವ್ಯವಹಾರವಾಗುತ್ತದೆ. ಮರುಭೂಮಿಯಾದ ದುಬೈನಲ್ಲಿ ಪಂಚದ ಅತಿ ದೊಡ್ಡ ಅಕ್ವೇರಿಯಂ ಇರುವುದು ( ಮಾನವ ಮೀನುಗಳನ್ನು ಬೆಳೆಸಲು ಕಲಿತ ವಿದ್ಯೆ ) ಅಚ್ಚರಿಯ ಸಂಗತಿಯೇ.
ನಮ್ಮ ದೇಶ ರಾಜ್ಯಗಳಲ್ಲಿಯೂ ವೈವಿಧ್ಯಮಯವಾದ ಪ್ರಾಣಿ-ಪಕ್ಷಿಗಳಿಂದ ಕೂಡಿದೆ. ರಾಜ್ಯ ಪ್ರಾಣಿ ಆನೆಎಂತಲೂ, ರಾಜ್ಯ ಮರ ಶ್ರೀಗಂಧವೆಂತಲೂ, ರಾಜ್ಯ ಪಕ್ಷಿ ನೀಲಕಂಠ ವೆಂತಲೂ,ರಾಜ್ಯ ಚಿಟ್ಟೆ Southern birdwing ಎಂತಲೂ ಗುರುತಿಸಲಾಗಿದೆ, ಹಾಗಾದರೆ ರಾಜ್ಯ ಮೀನು / ಮತ್ಸ್ಯ ಯಾವುದೆಂದು ಊಹಿಸಬಹುದೇ ? ಅದುವೇ ಮಹಶೀರ್ Mahasheer ಅದ್ಭುತವಾದಂತಹ ಮೈ ಹೊಳಪು, ನೀಳ ದೇಹ, ಯಾರನ್ನಾದರೂ ಆಕರ್ಷಿಸದೆ ಇರುವುದಿಲ್ಲ, ಚಿನ್ನ ಹಾಗೂ ಬೆಳ್ಳಿಯ ಹೊಳಪು ಎರಡು ಬಗೆಯಾಗಿ ಕಾಣಸಿಗುತ್ತವೆ, ಭೂತಾನ್ ದೇಶ ಈ ಮೀನನ್ನು Tiger fish, Tiger of water ಎಂದು ಪೂಜ್ಯ ಭಾವನೆಯಲ್ಲಿ ಕಾಣುತ್ತದೆ. ಶುದ್ಧ ಸಿಹಿನೀರಿನಲ್ಲಿ ಮಾತ್ರ ಕಂಡುಬರುವುದು ಈ ಮೀನಿನ ವಿಶೇಷ, ಸ್ವಲ್ಪ ನೀರು ಕಲುಷಿತವಾದರೂ ಈ ಮೀನು ಅಲ್ಲಿಂದ ಕಾಲ್ ಕೀಳುತ್ತದೆ.
ಕರ್ನಾಟಕದ ಜೀವನದಿಯಾದ ಕಾವೇರಿ ಉಗಮ ಸ್ಥಾನ, ಉಪನದಿಗಳ ಮೂಲಗಳಲ್ಲಿ, ಕಾವೇರಿ ವನ್ಯಜೀವಿಧಾಮಗಳಲ್ಲಿಯೂ ಇವು ಕಂಡುಬರುತ್ತವೆ, ಮಾನವನ ದುರಾಸೆಯಿಂದ Dam construction, industrialization, ಮರಳುಗಾರಿಕೆ, ಕಲ್ಲಿನ ಕ್ವಾರಿ, ನಗರದ ತ್ಯಾಜ್ಯವನ್ನು, ಕೊಳಚೆ ನೀರನ್ನು ಬಿಟ್ಟಿದ್ದರಿಂದ, ನೀರು ಕಲುಷಿತವಾಗುತ್ತಲೂ, ಅತಿಯಾದ ಮೀನುಗಾರಿಕೆಯಿಂದಲೂ ಭಾರತದ ಸ್ವಾತಂತ್ರ ಸಮಯದಲ್ಲಿಯೇ ಇವುಗಳು ಅವನತಿಯ ಹಾದಿಯನ್ನು ಹಿಡಿದು Red list ನಲ್ಲಿ ಇವುಗಳು ಸೇರಿದವು. ಇವುಗಳ ಬೇಟೆ ಇಂದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 1985 ರಲ್ಲಿ ಪೊನ್ನಪ್ಪ ಎಂಬುವವರು ಹಿಡಿದ ಮಹಶೀರ್ ಮೀನು ಬರೋ ಬರಿಯ 44 ಕೆಜಿ ಅನ್ನು ತೂಗಿತ್ತು, ಈ ಮೀನು 100ಕೆಜಿ ಯವರಿಗೂ ಬೆಳೆಯುವ ಸಾಮರ್ಥ್ಯವಿದೆ.
ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲಿಕ್ಕಾಗಿ ಅನೇಕ ಸೇವ ಸಂಘ-ಸಂಸ್ಥೆಗಳು ಶ್ರಮಿಸುತ್ತಲಿವೆ, ನೋಡಿದರೆ ಮನಸ್ಸಿಗೆ ಮುದ ನೀಡುವ ಇಂತಹ ಅದ್ಭುತವಾದ ಮೀನುಗಳ ಉಳಿವಿಗಾಗಿ ನಮ್ಮ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ, ನೀರನ್ನು ಕಲುಷಿತಗೊಳಿಸುವ ದನ್ನು, ನಿರುಪಯುಕ್ತ ವಸ್ತುಗಳನ್ನು ಕೊಂಡು ಎಸೆಯುವ ಸಂಸ್ಕೃತಿಯನ್ನು, ಇಂತಹ ಮೀನುಗಳ ಬಗ್ಗೆ ಮಕ್ಕಳಲ್ಲಿ ಅರಿವು ಹಾಗೂ ಜಾಗೃತಿಯನ್ನು ಮೂಡಿಸಬೇಕಾಗುತ್ತದೆ. ಪರಿಸರ ಹಾಳು ಮಾಡುವುದನ್ನು ನಾವು ಹೀಗೆ ಮುಂದುವರಿಸುತ್ತಾ ಹೋದಲ್ಲಿ ಇಂತಹ ಅದ್ಭುತ ಜೀವಿಗಳು ಕಣ್ಮರೆಯಾಗಿ, ಒಂದು ಜೀವ ವೈವಿಧ್ಯದ ಕೊಂಡಿ ಸಂಪೂರ್ಣವಾಗಿ ನಾಶವಾಗುತ್ತದೆ.
ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Coorg Wildlife Society ಸಂಪರ್ಕಿಸಬಹುದಾಗಿದೆ. ಸಮಯ ಮಾಡಿಕೊಂಡು ಇಂತಹ ವಿಷಯಗಳ ಬಗ್ಗೆ ಮಾಹಿತಿಯನ್ನು ಕಲೆಹಾಕುವಾಗ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ.
ಮಾಯಲೋಕ ವಿ ಮತ್ಸ್ಯಲೋಕ ಎಂದೆಂದೂ ಮರೆಯಾಗದಿರಲಿ / ಮಾಯವಾಗದಿರಲಿ.
ಧನ್ಯವಾದಗಳು.
Thank you for your introduction to the colourful world
ReplyDeleteNight article
Keep it up
💐👌🏻Super Friend ❤🐳🐋🐬🐟🐠🦈
ReplyDeleteಮತ್ಸ್ಯ ಲೋಕದ ಬಗ್ಗೆ ಬರೆದ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು.
ReplyDeleteSuperb article
ReplyDelete