- ಎಸ್ ಪಿ ತೇಜರಾಜು.
ಜೀವಂತಿಕೆ ಎಂಬ ವಿಷಯ ಮಾನವ / ಪ್ರಾಣಿ ಕೇವಲ ಬದುಕಿದ್ದಾಗಷ್ಟಕ್ಕೆ ಮಾತ್ರವೇ ಸೀಮಿತವಾಗಿದೆಯೇ ? ಅಥವಾ ಆತ ಮರಣ ಹೊಂದಿದ ನಂತರ ಜೀವಂತಿಕೆ ಕಳೆದುಹೋಗುತ್ತದೆಯೇ ? ಹೌದು ಅಥವಾ ಇಲ್ಲ ಎನ್ನುವುದಕ್ಕೆ ಬಲವಾದ ಕಾರಣಗಳನ್ನು ಕೊಡಬಹುದು. ನೆಚ್ಚಿನ ಪುಸ್ತಕ ಓದುವಾಗ ಪುಸ್ತಕದ ಬರಹಗಾರ ಈ ಮೊದಲೇ ಅಸುನಿಗಿರಬಹುದು ಆದರೆ ಪುಸ್ತಕ ಓದುವಾಗ ಅವರ Journey ಒಳಗೆ ನಾವು ಮುಳುಗಿ ಹೋಗಿರುತ್ತೇವೆ ಅಲ್ಲವೇ ? ಇಂದು ಅಜ್ಜಿ-ತಾತ ನಮ್ಮೊಂದಿಗೆ ಇಲ್ಲದೆ ಇದ್ದರೂ ಅವರೊಂದಿಗಿದ್ದ ನೆನಪುಗಳು, ಬಾಲ್ಯದಲ್ಲಿ ಪ್ರೀತಿಯಿಂದ ಸಾಕಿ ಬೆಳೆಸಿದ ಸಾಕು ಪ್ರಾಣಿಗಳ [ ನಾಯಿ, ಬೆಕ್ಕು, ಬಾತುಕೋಳಿ, ಹಸು ] ನೆನಪುಗಳು ಇಂದಿಗೂ ಹಸಿಯಾಗಿಯೇ ಇದ್ದರೆ ಅಲ್ಲವೇ ? ಹಗದ್ರೆ ಈ ವಿಷಯವನ್ನು ಜೀವಂತಿಕೆ ಎನ್ನಬಹುದೇ ?
ಆಫ್ರಿಕಾದ ಕೆಲವು ದೇಶಗಳು ಇಂದಿಗೂ ನಡೆಸಿಕೊಂಡು ಬಂದಿರುವ ಕೆಲವು ಆಚರಣೆಗಳಲ್ಲಿ ಒಂದಾದ ಮೃತದೇಹವನ್ನು ಮಮ್ಮಿಯ ರೂಪದಲ್ಲಿ ಇಡುವುದು, ಇಂಡೋನೇಷ್ಯಾದ ಆಚರಣೆಗಳಲ್ಲಿ ವರ್ಷಕ್ಕೆ ಒಮ್ಮೆ ಮೃತದೇಹಗಳನ್ನು ಹೊರಗೆತೆಗೆದು ಅವುಗಳಿಗೆ ಹೊಸ ಹುಡುಗೆಯನ್ನು ತೊಡಿಸಿ ಪೂಜೆ ಮಾಡುವುದು ಇಂದಿಗೂ ನಡೆದುಕೊಂಡು ಬಂದಿದೆ ಈ ಆಚರಣೆಗಳ ಮೂಲಕ ಅಲ್ಲಿಯ ಜನರು ತಮ್ಮ ಪೂರ್ವಜರ ಜೀವಂತಿಕೆಯನ್ನು ಕಂಡುಕೊಂಡಿದ್ದಾರೆ. ಮೃತದೇಹಗಳನ್ನು ಕೆಡದಂತೆ ಇಟ್ಟುಕೊಳ್ಳುವ ಕಲೆಯನ್ನೇ ಚರ್ಮ ಪ್ರಸಾಧನ ಇಂಗ್ಲಿಷ್ ನಲ್ಲಿ Taxidermy ಎಂದು ಕರೆಯುತ್ತಾರೆ. ಈ ಕಲೆಯು ಸುಮಾರು ಹನ್ನೆರಡನೇ ಶತಮಾನಗಳಿಂದಲೂ ಮಾನವನಿಗೆ ಕರಗತವಾಗಿದೆ.
ಮೊದಲಿಗೆ ಈಜಿಪ್ಟ್ನಲ್ಲಿ Taxidermy ಕಲೆಯು ಪ್ರಾರಂಭವಾಯಿತೆಂದು ಮೂಲಗಳು ತಿಳಿಸುತ್ತವೆ. ಮುಂದೆ ಅದು ಧರ್ಮ ಗುರುಗಳ ದೇಹವನ್ನು ಕಾಪಾಡಿಕೊಳ್ಳಲಿಕ್ಕೆ, 13ನೇ ಶತಮಾನದಲ್ಲಿ ರೋಮನ್ ದೊರೆ ಫ್ರೆಡ್ರಿಕ್ - 2 ತಾನು ಬೇಟೆಯಾಡಿದಂತಹ ಪ್ರಾಣಿ-ಪಕ್ಷಿಗಳ ದೇಹ ಕೆಡದಂತೆ ಇಟ್ಟುಕೊಂಡ ಎಂಬುದಾಗಿ ಆರ್ಟ್ ಆಫ್ ಹಂಟಿಂಗ್ ಎಂಬ ಪುಸ್ತಕದಲ್ಲಿ ಮಾಹಿತಿ ಸಿಗುತ್ತದೆ. ಆಗಿನ್ನೂ ಆವಿಷ್ಕಾರದ ಹಂತದಲ್ಲಿದ್ದ ಈ ಚರ್ಮ ಪ್ರಸಾದನ ಕಲೆಯು ಆದಷ್ಟು ಬೇಗ ಕೆಟ್ಟುಹೋಗುತ್ತಿತ್ತು, ಕಾಲಕಳೆದಂತೆ 17ನೇ ಶತಮಾನದ ಆದಿಭಾಗದಲ್ಲಿ ವೈಜ್ಞಾನಿಕ ಆವಿಷ್ಕಾರಗಳು ನಡೆದು, ಹೊಸ ವಿಧಾನ ಸಲಕರಣೆಗಳ ಮೂಲಕ ಚರ್ಮ ಪ್ರಸಾಧನ ಕಲೆಯ ಸುಧಾರಿಸಲಪಟ್ಟು ಅದೇ ಶತಮಾನದ ಅಂತ್ಯಭಾಗದಲ್ಲಿ ಉತ್ಕೃಷ್ಟ ಹಂತವನ್ನು ತಲುಪಿತು.
18ನೇ ಶತಮಾನದ ಆದಿಭಾಗದಲ್ಲಿಯೇ ಬ್ರಿಟಿಷರ ವಸಾಹತುಶಾಹಿಗಳ ಒಳಗೆ ಇದ್ದಂತಹ ದೇಶಗಳಲ್ಲಿ ಹೇಳಹೆಸರಿಲ್ಲದಂತೆ ಪ್ರಾಣಿವಧೆ ಅದರಲ್ಲಿಯೂ ಕಾಡುಪ್ರಾಣಿಗಳ ವಧೆ ಉತ್ಕೃಷ್ಟ ಹಂತವನ್ನು ತಲುಪಿತು. ಈ ಕಾಡು ಪ್ರಾಣಿಗಳ ವಧೆಯಲ್ಲಿ ದೇಶಿ ರಾಜರ ಪಾಲು ಅರ್ಧಭಾಗದಷ್ಟಿತ್ತು. ಚರ್ಮ ಪ್ರಸಾದನ ಕಲೆ ಉತ್ಕೃಷ್ಟ ಹಂತದಲ್ಲಿದ್ದ ಈ ಸಮಯದಲ್ಲಿ ಪ್ರಾಣಿಗಳ ವಧೆಯು ಹೆಚ್ಚಾದ್ದರಿಂದ ಹೊಸ ಹೊಸ ವಾಣಿಜ್ಯ-ವ್ಯಾಪಾರ ಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ತೆರೆದುಕೊಂಡಿತು. ಮನುಷ್ಯನ ದುರಾಸೆಯಿಂದಾಗಿ ಭೂಮಿಯ ಮೇಲೆ ಅನೇಕ ಜೀವಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲು ಪ್ರಾರಂಭಿಸಿದವು, ಕೆಲವಂತೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡವು[ Dodo, Passanger pigeon, Great Auk, Heath hen, Pink headed duck, etc,, ] ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಕೂಡ ಈ ಕೃತ್ಯ ನಿಂತಿರಲಿಲ್ಲ 1972 Wildlife protection act ನಂತರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು, ಬೇಟೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಚರ್ಮ ಪ್ರಸಾದನ ಕಲೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು.
ನೀವು ಕೆಲವೊಮ್ಮೆ ಗಮನಿಸಿರಬಹುದು ದೊಡ್ಡ ದೊಡ್ಡ ಕ್ಲಬ್ ಹೌಸ್ ಗಳಿಗೆ ಹೋದಾಗಲೂ, ಎಸ್ಟೇಟ್ ಗಳ ದೊಡ್ಡ ಬಂಗಲೆಯಲ್ಲಿಯೋ, ಮಿಲಿಟರಿ ಆಫೀಸ್ಗಳಲ್ಲಿಯೂ, ಅರಮನೆಗಳಲ್ಲಿಯೋ ಪ್ರಾಣಿಗಳು ಯಥಾಸ್ಥಿತಿಯಲ್ಲಿ ನೈಜವಾಗಿ ಇರುವಂತೆಯೇ ಜೋಡಿಸಿರುತ್ತಾರೆ. ಮಠ-ಮಂದಿರಗಳ ಫೋಟೋ ಫ್ರೇಮ್ಗಳಲ್ಲಿ ಗುರುಗಳು ಹುಲಿ ಅಥವಾ ಜಿಂಕೆಯ ಚರ್ಮದ ಮೇಲೆ ಕುಳಿತಿರುವುದನ್ನು ನೋಡಿರಬಹುದು. ಇಂದು ಪ್ರಾಣಿಗಳ ಹಿತದೃಷ್ಟಿಯಿಂದ ಚರ್ಮ ಪ್ರಸಾದನ ಕಲೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಒಂದಾನೊಂದು ಕಾಲಕ್ಕೆ ಪ್ರಪಂಚಕ್ಕೆ ಪ್ರಖ್ಯಾತವಾದ ಪ್ರಾಣಿ ಚರ್ಮ ಪ್ರಸಾಧನ ವ್ಯಾಪಾರ ವಹಿವಾಟು ನಡೆಸಿದವರು ಕರ್ನಾಟಕದಲ್ಲಿ ಅದರಲ್ಲಿಯೂ ಮೈಸೂರಿನಲ್ಲಿಯೇ ನೆಲೆಸಿ Van ingen company ಯನ್ನು ನಡೆಸಿದಂತಹ Edward Joubert van ingen. ಕಾಡು ಪ್ರಾಣಿಗಳ ವಧೆ ಉತ್ಕೃಷ್ಟ ಹಂತ ತಲುಪಿದ ಸಂದರ್ಭದಲ್ಲಿ ಇವರಿಗೆ ದೊರಕಿದಂತಹ ಪ್ರಾಣಿಗಳ ದೇಹದಿಂದಾಗಿ ( ಬಹುತೇಕ ಪ್ರಾಣಿಗಳು ನಮ್ಮ ನಾಗರಹೊಳೆ ಮತ್ತು ಬಂಡಿಪುರ, ಕಾಕನ ಕೋಟೆಯ ಸುತ್ತಮುತ್ತಲಿನವೆ ) ಇವರ ಹೆಸರು ಪ್ರಪಂಚದಾದ್ಯಂತ ಪ್ರಖ್ಯಾತಿಯನ್ನು ಪಡೆಯಿತು. ಇವರ ಕಂಪನಿ ಆಗಿನ ಕಾಲದಲ್ಲಿಯೇ ನೂರು ಜನರಿಗೆ ಉದ್ಯೋಗವನ್ನು ನೀಡಿತ್ತು.
ಇಂದು ಈ ಕಲೆಯ ಬಗ್ಗೆ ತಿಳಿದುಕೊಳ್ಳೋ ಬೇಕೆಂದಾದಲ್ಲಿ ಆಂಗ್ಲ ಭಾಷೆಯನ್ನು ಅಥವಾ ನೆರೆ ರಾಷ್ಟ್ರಗಳನ್ನು ಅವಲಂಬಿಸಬೇಕು ಎನ್ನುವ ಮಾಹಿತಿ ಬಹಳ ಬೇಸರ ತರಿಸಿತು, ಹೋಗಲಿ Edward ಅವರ ಬಳಿಯೇ ತಿಳಿದುಕೊಳ್ಳೋಣವೆಂದರೆ 2013 ನೇ ಇಸವಿಯಲ್ಲಿ ತಮ್ಮ 101 ವರ್ಷದ ಜೀವನವನ್ನು ನಡೆಸಿ ಅಸುನೀಗಿದ್ದರು.
ಕೊನೆಗೆ ಬಹಳಷ್ಟು ದಿನ ಇಂಗ್ಲಿಷ್ ನಲ್ಲಿ ಮಾಹಿತಿಯನ್ನು ಕಲೆ ಹಾಕಿದ್ದಾಯಿತು, ಅಚ್ಚರಿಯ ವಿಷಯವೆಂದರೆ ಅಚಾನಕ್ಕಾಗಿ ಯಾವುದೋ ಒಂದು ಮಾಹಿತಿಯನ್ನು ಕಲೆಹಾಕುವಗ Indian only taxidermist - Dr. Santosh gaikwad, Mumbai Vertanary college ಪ್ರಾಧ್ಯಾಪಕರು ಎಂಬ ವಿಷಯ ತಿಳಿಯಿತು, ವಿಷಯ ಸಮಾಧಾನ ತರಿಸಿತು ಏಕೆಂದರೆ ಅವರನ್ನು ಭಾರತದ ಏಕೈಕ Taxidermist ಎಂದಲ್ಲವೇ ? ಇದಾದ ಕೆಲವು ತಿಂಗಳ ನಂತರ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರಾಣಿ ವಸ್ತುಸಂಗ್ರಹಾಲಯದಲ್ಲಿ 2500 ಕ್ಕೂ ಮಿಗಿಲಾದ ಸತ್ತ ಪ್ರಾಣಿಗಳ ದೇಹವನ್ನು ನೈಜವಾಗಿ ಇರುವಂತೆ ಇಟ್ಟುಕೊಳ್ಳಲಾಗಿದೆ, ಇದು ದೇಶದ ಅತಿ ಹಳೆಯ ಸಂಗ್ರಹಾಲಯದೊಂದಿಗೆ, ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಸಂಗ್ರಹಾಲಯ ಎಂಬ ಮಾಹಿತಿಯೂ ತಿಳಿಯಿತು ಈ ನಿಟ್ಟಿನಲ್ಲಿ ಮ್ಯೂಸಿಯಂನ ಇಂಚಾರ್ಜ್ ಆಗದಂತಹ ನವೀನ್ ಅವರ ಸಂಪರ್ಕವುಆಯಿತು.ಫೋನ್ ಕರೆಯ ಮೂಲಕ ಮಾತನಾಡಿ ಮತ್ತಷ್ಟು ವಿಷಯ ತಿಳಿಯುವಂತಾಯಿತು. ಹೀಗೆ ಒಮ್ಮೆ ಫೋನ್ ಕರೆಯಲ್ಲಿ ಮಾತನಾಡುವಾಗ ಮೈಸೂರಿನಲ್ಲಿ ನೆಲೆಸಿರುವ ಮಂಜುಳಾ ಅವರನ್ನು ಭೇಟಿ ಮಾಡಿ ಎಂದು ಸಲಹೆಯನ್ನು ನೀಡಿದರು. ಕೊನೆಗೊಂದು ದಿನ ಸಮಯ ನಿಗದಿಪಡಿಸಿಕೊಂಡು ಮೇಡಮ್ ಅವರನ್ನು ಭೇಟಿ ಮಾಡಿದ್ದಾಯಿತು. ಈ ಭೇಟಿ ನನಗೆ ಎಷ್ಟು ಸಂತೋಷವನ್ನು ನೀಡಿತು ಎಂದರೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ನಮ್ಮ ಕನ್ನಡಿಗರಿದ್ದಾರೆಂದು ಸಂತೋಷ ತರಿಸಿತು.
ಮೂಲತಹ ಇವರ ತಾತನವರು ಮೈಸೂರು ಮಹಾರಾಜರ ಶಿಕಾರಿಯ ಸಂದರ್ಭದಲ್ಲಿ ನೆರವಾಗುತ್ತಿದ್ದವರು, ಪ್ರಖ್ಯಾತರು, ಹಾಗೂ ಮಹಾರಾಜರಿಂದ ಬಿರುದನ್ನು ಪಡೆದವರು. ಇವರ ತಂದೆಯವರು Van ingen company ಯಲ್ಲಿ ಕೆಲಸವನ್ನು ನಿರ್ವಹಿಸಿದವರು. ಮಂಜುಳಾ ಮೇಡಮ್ ಅವರ ಬಾಲ್ಯವೆಲ್ಲವೋ ಈ ಕಂಪನಿಯಲ್ಲಿಯೇ ನಡೆದಿತ್ತು.ತಾತ ತಂದೆಯವರ ಕುಶಲಕಲೆಯಂತೆ ತಾವು ಚರ್ಮ ಪ್ರಸದನ ಕಲೆಯನ್ನು [ ಹೊಸ ಪ್ರಾಣಿಗಳಿಗೆ ಈ ಕಲೆಯನ್ನು ಮಾಡುವಂತಿಲ್ಲ ಇಂದು ಅದು ಶಿಕ್ಷಾರ್ಹ ಅಪರಾಧ, ಈ ಮೊದಲೇ ಇರುವ ಪ್ರಾಣಿಗಳನ್ನು ಹಾಳಾಗದಂತೆ ಸಂರಕ್ಷಿಸಿಕೊಳ್ಳುವುದನ್ನು ] ಕರಗತ ಮಾಡಿಕೊಂಡರು. ಇವರು ದೇಶದ ನಾನಾ ಮೂಲೆಗಳಲ್ಲಿ ಕಲೆಯನ್ನು ಉಳಿಸಲಿಕ್ಕೆ ಕೆಲಸವನ್ನು ಮಾಡಿದವರು, ಎಷ್ಟೋ ಕಡೆ ಉಚಿತವಾಗಿಯೇ ಕೆಲಸವನ್ನು ಕಲೆ ಉಳಿಸಲಿಕ್ಕೋಸ್ಕರ ಮಾಡಿದರು. ಜೀವನವನ್ನೇ ಕಲೆ ಗೋಸ್ಕರ ಮೂಡುಪಾಗಿ ಇಟ್ಟಿರುವವರು. ಆದರೆ ಇವರ ಕೆಲಸ ಅಷ್ಟು ಸುಲಭದ್ದಾಗಿರಲಿಲ್ಲ, ಬಹಳಷ್ಟು ಕಡೆ ವಿರೋಧವನ್ನು ಎದುರಿಸಬೇಕಾಯಿತು, ತಮ್ಮ ತಾತನವರಿಗೆ ಬಳುವಳಿಯಾಗಿ ಬಂದಿದಂತಹ ಟ್ರೋಫಿಗಳನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಮುಟ್ಟುಗೋಲು ಮಾಡಿಕೊಂಡಿರು, ಕಲೆಯನ್ನು ಮುಂದುವರಿಸಬೇಕೆಂದರೆ ಲಂಚವನ್ನು ಕೊಡಬೇಕೆಂದು ಎಚ್ಚರಿಕೆಯನ್ನು ನೀಡಿದ್ದರು, ಬಹಳಷ್ಟು ದಿನ ಪೊಲೀಸ್ ಸ್ಟೇಷನ್, ಕೋರ್ಟು ಕಚೇರಿಯ ಮೆಟ್ಟಿಲು ಏರಬೇಕಾಯಿತು, ಇವರ ಹಾದಿ ಬಲು ಕಠಿಣವಾಗಿ ಕೆಲಸವನ್ನೇ ಬಿಟ್ಟುಬಿಡಬೇಕೆಂದು ನಿರ್ಧರಿಸಿದ್ದರು.
ಕಲೆ ಮುಂದಿನ ಪೀಳಿಗೆಗೆ ಉಳಿಯಬೇಕು, ಚರ್ಮ ಪ್ರಸಾದನ ಕಲೆಯ ಬಗ್ಗೆ ಜನರಿಗೆ ಅರ್ಥವಾಗಬೇಕು ಎಂದು ಕನ್ನಡದ ಕಟ್ಟಕಡೆಯ ಟ್ಯಾಕ್ಸಿಡಾರ್ನಿಸ್ಟ್ ಆದಂತಹ ಮಂಜುಳಾ ಅವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಇವರು ಮಾಡುವ ಕೆಲಸದ ಎಷ್ಟು ನೈಪುಣ್ಯತೆ ಹಾಗೂ ನೈಜತೆಯಿಂದ ಕೂಡಿರುತ್ತದೆ ಎಂದರೆ ಅವರ ಕೆಲಸವನ್ನು ನೋಡಬೇಕು ಅಷ್ಟು ಸೃಜನಶೀಲತೆಯಿಂದ ಕೆಲಸವನ್ನು ನಿರ್ವಹಿಸುತ್ತಾರೆ. ಒಂದು ಕಡೆ ಸರ್ಕಾರ ಇವರಿಗೆ ಕಲೆಯನ್ನು ಮಾಡಬಹುದು ಎಂದು ರಹದಾರಿಯನ್ನು ನೀಡಿದ್ದರೂ ಸಹ, ಮತ್ತೊಂದು ಇಲಾಖೆಯಿಂದ ಕಿರುಕುಳವನ್ನು ನೀಡಿದೆ. ಇಂದು ಅರಣ್ಯ ಇಲಾಖೆಯಲ್ಲಿಯೇ ಸಾವಿರಾರು ಸಂಖ್ಯೆಯ ಪ್ರಾಣಿಗಳ ಟ್ರೋಫಿಗಳು ಗೆದ್ದಲು ಹಿಡಿದು ಹಾಳಾಗುತ್ತಿದೆ, ಕನಿಷ್ಠ ಪಕ್ಷ ಅವುಗಳನ್ನುದರೂ ಸ್ವಚ್ಛಗೊಳಿಸಿ ಒಂದು ಮ್ಯೂಸಿಯಂಮಾಡಿ, fee collect ಮಾಡುವುದರೊಂದಿಗೆ, ಪ್ರವಾಸಿಗರಿಗೆ ಕಲೆಯ ಬಗ್ಗೆ ಮಾಹಿತಿಯ ತಿಳಿಯುತ್ತದೆ, ಸರ್ಕಾರದ ಬೊಕ್ಕಸಕ್ಕೆ ಆದಾಯ ಬಂದು ಸೇರುತ್ತದೆ ಎಂದು ಬಹಳಷ್ಟು ದಿನಗಳಿಂದ ಹೋರಾಡುತ್ತಿದ್ದಾರೆ ಆದರೆ ಯಾವುದೇ ಪಾಸಿಟಿವ್ ಮೂವ್ ಇದುವರೆಗೆ ಕಂಡುಬಂದಿಲ್ಲ. ಇವರಿಗೆ ಇಂದು ಬೇಕಾಗಿರುವುದು ಯಾವುದೇ ರಾಜಕಾರಣಿಗಳ ಆಶ್ವಾಸಗಳು ಅಲ್ಲ, ಯಾರೊಬ್ಬರ ಹಣಕಾಸಿನ ನೆರವು ಅಲ್ಲ ಬದಲಿಗೆ ಮೇಲೆ ತಿಳಿಸಿದ ಮ್ಯೂಸಿಯಂ ಕೆಲಸ ಆಗಿಬಿಟ್ಟರೆ ಮತ್ತೊಂದು ಮಜಲಿಗೆ ಕಲೆ ತಾನಾಗಿಯೇ ಹೋಗುತ್ತದೆ ಎನ್ನುತ್ತಾರೆ, ಇವರು ಕಲೆಯ ಮೇಲಿಟ್ಟಿರುವ ಗೌರವ, ಅಭಿಮಾನ ಅದಕ್ಕಿಂತ ಮಿಗಿಲಾಗಿ ಜ್ಞಾನಭಂಡಾರ ಅಪಾರವಾದದ್ದು. ಮಹಾರಾಜರ ಬೇಟೆಯಲ್ಲಿ ಇವರ ತಾತನವರು ನೆರವಾಗಿ ಬಿರುದನ್ನು ಪಡೆದದ್ದು,ಇವರ ತಂದೆಯವರ ಕಾಲದಲ್ಲಿ ಕಾಕನಕೋಟೆಯ ಕಾಡನ್ನು ಬಿಟ್ಟು ಮೈಸೂರಿಗೆ ಬಂದು ಸೇರಿದ್ದು, Edward ಅವರ Van ingen company ಯಲ್ಲಿ ಕೆಲಸಕ್ಕೆ ಸೇರಿದ್ದು, ಕಂಪನಿ ನಡೆಸುತ್ತಿದ್ದ ಜಾಗದ ಇಂದಿನ ಪರಿಸ್ಥಿತಿ, ಇದೆ ಕಂಪನಿಯಲ್ಲಿ ಮಂಜುಳಾ ಅವರು ತಮ್ಮ ಬಾಲ್ಯವನ್ನು ಕಳೆದ ನೆನಪುಗಳು, ಸ್ವತಂತ್ರ ಪೂರ್ವದಲ್ಲಿ ಕಂಪನಿಯನ್ನು ನಡೆಸುತ್ತಿದ್ದ ಬ್ರಿಟಿಷರು ತಮ್ಮ ಕೆಲಸಗಾರರನ್ನು ನೋಡಿಕೊಳ್ಳುತ್ತಿದ್ದಂತಹ ರೀತಿ, ಆಗಿನ ಕಾಲಕ್ಕೆ ಬ್ರಿಟಿಷರ ಧೋರಣೆ ನಿಲುವುಗಳು, ಸಾಕಿದರೆ ವಿದೇಶಿ ಜಾತಿಯ ಪ್ರಾಣಿಗಳನ್ನು ಸಾಕಬೇಕು ಎಂದು ವಿದೇಶಿ ಜಾತಿಯ ನಾಯಿ-ಬೆಕ್ಕು ಕುದುರೆ ಪ್ರಾಣಿಗಳನ್ನು ವೈಭವಯುತವಾಗಿ ನೋಡಿಕೊಳ್ಳುತ್ತಿದ್ದ ರೀತಿ, ತಮ್ಮ ದೇಶದವರು ಬಂದಾಗಲೂ ಹೊರಗಿನವರು ಬಂದಾಗಲೂ ಅವರು ನೋಡಿಕೊಳ್ಳುತ್ತಿದ್ದಂತಹ ರೀತಿ,Edward ಅವರ ಕುಟುಂಬ - ಮನೆತನ - ಜೀವನ, ಸ್ವಾತಂತ್ರಾನಂತರದ ಅವರ ಪರಿಸ್ಥಿತಿಗಳು, ಹೀಗೆ ಹತ್ತು ಹಲವು ಮಾಹಿತಿಯ ಬಗ್ಗೆ ಕೇವಲ ಒಂದು ಅಂಕಣ ಅಲ್ಲ ಒಂದು ಪುಸ್ತಕದ ಇವರ ಮನೆತನ ಹಾಗೂ ಕಲೆಯ ಬಗ್ಗೆ ಆಗುತ್ತದೆ ಎಂಬುದು ನನ್ನ ಭಾವನೆ.
ಪ್ರಾಣಿಗಳ ಮೃತದೇಹಗಳಿಗೆ ಜೀವಂತಿಕೆ ನೀಡುವಂತಹ ಇವರ ಕಲೆ ಉಳಿಸಲಿಕ್ಕೆ ಸರಕಾರ ಜೀವಂತಿಕೆಯನ್ನು ನೀಡಬೇಕಾಗಿದೆ.
ಧನ್ಯವಾದಗಳು.
💐👌🏻ಸೂಪರ್... 🙏🏻❤🙂
ReplyDeleteTeju sir...You are blessed with the best writing skills
ReplyDeleteVery interesting. Keep up the good articles
ReplyDeleteOther than all i am impressed by the word "jeevanthike " and how you proceeded with the concept, good writing, well done
ReplyDeleteಪ್ರಸ್ತುತ ಸಂದರ್ಭಕ್ಕೆ ಅತ್ಯುತ್ತಮವಾದ ಲೇಖನ ಹಾಗೂ ಅತ್ಯವಶ್ಯಕ.ಎಷ್ಟು ಪ್ರಾಣಿಗಳು ಸತ್ತು ಮಣ್ಣುಪಾಲಾಗುವ ಬದಲು ಅವುಗಳಿಗೆ ಜೀವ ಕೊಡುವಂತಹ ಕಲಾಕಾರರು ಬೆಳೆಯಬೇಕು.ಅವರಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು
ReplyDeleteVery nice article 👍
ReplyDeleteKeep writing, all the best
Nice
ReplyDelete