ಮರವಾಗಬೇಕು !!!!
ಮರವಾಗಬೇಕು ಮನ ಮರೆವ ಮರವಾಗಬೇಕು
ಮನದಾಳದಿಂದ ಮಮತೆಯ ಮನತಣಿಸುವ
ಮರವಾಗಬೇಕು
ಮಣ್ಣಲ್ಲಿ ಹುಟ್ಟಿ ಮಣ್ಣನ್ನು ತಿಂದು ಮರಳಿ ಮಣ್ಣಾಗುವ ಮರವಾಗಬೇಕು
ಮಣ್ಣ ಮಗನ ಮನದಾಳದ ಮಾತುಗಳರಿಯಲು
ಮರವಾಗಬೇಕು
ಮಂದಾರ ಪುಷ್ಪದಲ್ಲಿ ಮಧುತುಂಬಿ ಮಕರಂದ ಹೀರಲು ಮರುಕರೆವ ಮರವಾಗಬೇಕು
ಮೌನದ ಕಣಿವೆಯಲ್ಲಿ ಮೌನಿಯ ಮಾತನು ಮನನ ಮಾಡುವ ಮರವಾಗಬೇಕು
ಮಾನವನ ಮೌಲ್ಯಗಳ ನಡುವೆ ಮೌನಿಯಾದ ಮಗುವಿನಂತಹ ಮರವಾಗಬೇಕು
ಮಾತೃವಾತ್ಸಲ್ಯದಿ ಮೋಡಗಳ ಮೇಘನಾದನು ಮುದ್ದಿಸುವ ಮರವಾಗಬೇಕು
ಮೇರು ಪರ್ವತದ ಮೇಲೆ ಬೆಳೆದು ಮಣ್ಣುಮುಕ್ಕಿ ಮಣ್ಣ ಹಿಡಿದು ಮಹಾಕಾಯದಂತ ಮರವಾಗಬೇಕು
ಮರೆತರು ಮರೆಯಲಾಗದ, ಮೌನದೊಳಗೆ ಮಾತನಾಡುವ, ಮಾತುಗಳಲ್ಲಿ ಮುಗಿಯದ ಮರವಾಗಬೇಕು
ಮರಳಿ ಮರಳಿ ಮತ್ತೆ ಮತ್ತೆ ಮರೆಯಲಾಗದ ಮರವಾಗಬೇಕು
ಎಸ್ ಪಿ ತೇಜರಾಜು.
ಮನೆಗೊಂದು ಮರ, ಊರಿಗೊಂದು ಕಾಡು ಕಾಡಿದ್ದರೆ ನಾಡು, ನಾಡಿದ್ದಾರೆ ನಾವು, ಕಾಡನ್ನು ಬೆಳೆಸಿ ನಾಡನ್ನು ಉಳಿಸಿ
ReplyDeleteಪರಿಸರ ಪ್ರೇಮಿ ತೇಜ ಗೆ ಸಲಾಂ
Fresh thoughts for environmental awareness
ReplyDeleteGood interpretation
ReplyDeleteಮನದಾಳದ ಮಾತು....
ReplyDeleteI had thought that you are writer, who gives importance to nature but today I got to know you are poet too, pleased to read this
ReplyDeleteI pray .... Kevala maravalla hemmaravaagi ,,dodda kaadagi, belayabeku nivu. haage nimma kadalli nanondu sasi yaagi sanna gidavagi beledu nillabeku .... Feels good brother thank you 👍
ReplyDeleteNice
ReplyDelete