- ಎಸ್ ಪಿ ತೇಜರಾಜು.
ಮಾನವ ಮೊದಲಿನಿಂದಲೂ ಆವಿಷ್ಕಾರ ಜೀವಿ ಪ್ರತಿಭಾರಿಯೂ ತಾನೊಂದು ಹೊಸ ಪ್ರಯೋಗವನ್ನು ಮಾಡಬೇಕೆಂದು ಹಂಬಲಿಸುತ್ತಿರುತ್ತಾನೆ, ಇದು ಆದಿ ಮಾನವ ತನ್ನ ಆಹಾರ ಹಾಗೂ ರಕ್ಷಣೆಗೆಂದು ಕಲ್ಲಿನ ಆಯುಧಗಳನ್ನು ಸಿದ್ಧಪಡಿಸಿಕೊಳ್ಳುವುದರಿಂದ ಹಿಡಿದು ಮುಂದೆ ಹಸಿ ಮಾಂಸವನ್ನು ಬೆಂಕಿಯ ಸಹಾಯದಿಂದ ಬೇಯಿಸಿ ತಿನ್ನಲು ಪ್ರಾರಂಭಿಸಿದ, ಪೊಟರೆಯಿಂದ ಗೃಹ ನಿರ್ಮಾಣ ಮಾಡುವ ಕಲೆಯನ್ನು ಕಲಿತ, ಕಲ್ಲಿನ ಆಯುಧಗಳ ಬದಲಾಗಿ ಲೋಹದ ಆಯುಧಗಳನ್ನು ಬಳಸತೊಡಗಿದ ಹೀಗೆ ಅಲೆಮಾರಿಯಾಗಿದ್ದವ ಸಾಕುಪ್ರಾಣಿಗಳೊಂದಿಗೆ ಕೃಷಿ ಮಾಡಿಕೊಂಡು ಒಂದು ಕಡೆ ನೆಲೆಸುವುದನ್ನು ಕಲಿತ, ತಾನು ಮಾಡಿದ ಕೆಲಸಗಳನ್ನು ಕಲ್ಲಿನ ಮೇಲೆ ಚಿತ್ರಿಸುತ್ತಿದ್ದ, ನಿಧಾನವಾಗಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆಯನ್ನು ಬಳಸುವುದನ್ನು ಪ್ರಾರಂಭಿಸಿದ ಹೀಗೆ ಇದು ಮುಂದುವರೆದು ತನ್ನ ಬಳಗ ಸಮೂಹದ ಮುಖಾಂತರ ಸಂಘಜೀವಿಯಾದ ಇದು ಮುಂದುವರಿಯುತ್ತಾ ದೇಶ, ರಾಜರ ಆಳ್ವಿಕೆ, ಸಾಮ್ರಾಜ್ಯ ವಿಸ್ತರಣೆ, ಮಹಾಯುದ್ಧಗಳೆಲ್ಲವೂ ಆದ ಬಳಿಕ ಇಂದು ಪ್ರತಿಯೊಂದು ದೇಶವೂ ಅವರದ್ದೇ ಆದಂತಹ ರಾಜಧರ್ಮ ನೀತಿಯನ್ನು ಪಾಲಿಸಿಕೊಂಡು ವಿವಿಧ ರಾಷ್ಟ್ರಗಳಾಗಿ ಮುನ್ನಡೆಯುತ್ತಿದೆ.
ಇತಿಹಾಸತಜ್ಞರು ಮಾನವನ ಈ ಬೆಳವಣಿಗೆಯನ್ನು ಆಧರಿಸಿ ವಿವಿಧ ಸ್ತರಗಳಾಗಿ ವಿಂಗಡಿಸಿದ್ದಾರೆ ಹಾಗೂ ಇಂದಿನ 21ನೇ ಶತಮಾನವನ್ನು ಆವಿಷ್ಕಾರಗಳ ಯುಗ ಎಂತಲೇ ಗುರುತಿಸಲಾಗಿದೆ, ಇದರಂತೆಯೇ ದಿನದಿಂದ ದಿನಕ್ಕೆ ವಿಜ್ಞಾನಕ್ಕೆ ಸಂಬಂಧಪಟ್ಟ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಾ ಬಂದಿದೆ.
ಇಂದು ಮಾನವನಿಗೆ ಹೊಸ ಹೊಸ ಗೃಹಪಯೋಗಿ ಉಪಕರಣಗಳು, ಹೈ ಸ್ಪೀಡ್ ಕಂಪ್ಯೂಟರ್ ಗಳು, ರಾಸಾಯನಿಕ ಉತ್ಪನ್ನಗಳು, ನಭೋಮಂಡಲದಲ್ಲಿ ನಡೆಯುವಂತಹ ಅನೇಕ ವಿಸ್ಮಯಗಳನ್ನು ತಿಳಿದುಕೊಳ್ಳುಲು ಕೈಗೊಂಡಿರುವ ಚಂದ್ರಯಾನ ಮಂಗಳಯಾನ ಯೋಜನೆಗಳು, ಕೃಷಿ ಹಾಗೂ ಕಾರ್ಖಾನೆಗಳಿಗೆ ಬೇಕಾದಂತಹ ದೊಡ್ಡ ಉಪಕರಣಗಳು ಅಥವಾ ಸಲಕರಣೆಗಳು,ಅಣ್ವಸ್ತ್ರ ಕ್ಷಿಪಣಿ ಗಳು, ದೊಡ್ಡ ಅಣೆಕಟ್ಟುಗಳಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಕಲೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾನು ಉಳಿಯಬೇಕೆಂಬ ಹಠ, ಅತ್ಯಾಧುನಿಕ ನಗರೀಕರಣಕ್ಕೆ ಹೊಂದಿಕೊಂಡಂತಿರುವ ಜೀವನಶೈಲಿಯಲ್ಲಿ ಕುತೂಹಲ ಹೆಚ್ಚು.
ಭೂಮಿಯ ಮೇಲೆ ಬುದ್ಧಿವಂತ ಜೀವಿ ಎಂದು ತನಗೆ ತಾನೇ ಬಿರುದುಕೊಟ್ಟು ಕೊಂಡಿರುವ ಈ ಮಾನವ ಭೂಮಿಯ ಮೇಲೆ ಏನನ್ನಾದರೂ ಸೃಷ್ಟಿಸಿ ಪ್ರಯೋಗಿಸಿ ಯಶಸ್ವಿಯಾಗಬಲ್ಲ ಎಂದು ಭಾವಿಸಿದ್ದಾನೆ ಆದರೆ ನಿಸರ್ಗಸಹಜವಾಗಿ ದೊರೆತಂತಹ ನಿಸರ್ಗ ಸಂಪತ್ತನ್ನು ತಾನೆಂದು ಸೃಷ್ಟಿಸಲು ಸಾಧ್ಯವಿಲ್ಲ ಎಂಬುದನ್ನ ಒಂದುಕಡೆ ಮರೆತಿದ್ದಾನೆ. ಮಾನವ ಚಂದ್ರನ ಮೇಲೆ ತನ್ನ ಹೆಜ್ಜೆಯನ್ನು ಇಡುವ ಮೂಲಕ ಹೊಸ ಯುಗವನ್ನೇ ಸೃಷ್ಟಿಸಬಲ್ಲನು ಆದರೆ ಆತ ಅಲ್ಲಿಗೆ ತಲುಪಿದ ಮೇಲೂ ಕೂಡ ತನ್ನ ಉಳಿವಿಗಾಗಿ ಭೂಮಿಯ ಮೇಲೆ ನಿಸರ್ಗಸಹಜವಾಗಿ ದೊರೆತಂತಹ ಆಹಾರ, ನೀರು, ಗಾಳಿಯನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಬೇಕು ಹಾಗೂ ಅಲ್ಲಿಗೆ ತಲುಪಬೇಕಾದರೆ ಈ ಭೂಮಿಯೊಳಗೆ ದೊರಕುವಂತಹ ಇಂಧನವನ್ನು ಬಳಸಬೇಕು, ನಾವಿಂದು ಧರಿಸಿರುವ ಬಟ್ಟೆಗಾಗಿ ನಿಸರ್ಗಸಹಜವಾಗಿ ದೊರೆತ ಹತ್ತಿಯನ್ನು ಬಳಸಬೇಕು, ಬೆಟ್ಟಗುಡ್ಡಗಳನ್ನು ಧರೆಗುರುಳಿ ಗಣಿಗಾರಿಕೆಯ ಮುಖಾಂತರ ಬೆಲೆಬಾಳುವಂತಹ ಖನಿಜ ಸಂಪತ್ತನ್ನು ಹೊರತೆಗೆಯಬಲ್ಲ ಆದರೆ ಸೃಷ್ಟಿಸಲಾರ, ತನ್ನ ಸುತ್ತಮುತ್ತ ಇರುವ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳನ್ನು ಹಾಗೂ ಸಸ್ಯ ಕೋಟಿ ಜೀವಸಂಕುಲಗಳನ್ನು ನಾಶ ಪಡಿಸಬಲ್ಲ ಹೊರತು ಸೃಷ್ಟಿಸಲಾರ, ತಾನು ನಿಸರ್ಗಸಹಜವಾಗಿ ಅದರಲ್ಲಿಯೂ ಉಚಿತವಾಗಿ ಬಳಸಿಕೊಳ್ಳುತ್ತಿರುವಂತಹ ನೀರು, ಗಾಳಿ, ಆಹಾರ, ಖನಿಜಸಂಪನ್ಮೂಲಗಳು, ಇಂಧನವನ್ನು ಎಂದೆಂದಿಗೂ ತನ್ನ ಪ್ರಯೋಗಶಾಲೆಗಳಲ್ಲಿ ಸೃಷ್ಟಿಸಿಕೊಳ್ಳಲಾರ. ಮಾನದ ಇನ್ನಷ್ಟು ಮೊಬೈಲ್ ಟವರ್ ಗಳನ್ನು ಅಭಿವೃದ್ಧಿಪಡಿಸಬಹುದು ಒಂದು ಎರೆಹುಳು ನಿಸರ್ಗಕ್ಕೆ ಕೊಡುವ ಕೊಡುಗೆಯಾಗಲಿ ಅಥವಾ ಒಂದು ಜೇನು ಹುಳು ಮಾಡುವ ಕಾಯಕವನ್ನೇ ಆಗಲಿ, ಒಂದು ಬೆಟ್ಟದ ನೆಲ್ಲಿಕಾಯಿ ತಿನ್ನುವಾಗ ಆಗುವಂತಹ ಸಿಹಿ-ಹುಳಿ ಎರಡರ ಸಮ್ಮಿಲನವನ್ನಾಗಲಿ ಕೃತಕವಾಗಿ ಸೃಷ್ಟಿಸಲು ಸಾಧ್ಯವೇ? ಮಾನವ-ನಿಸರ್ಗಕ್ಕಾಗಿ ಕೊಡುತ್ತಿರುವ ಗ್ರಹಿಸುವ ಕೊಡುಗೆ ಎಂದರೆ 1 ಜನಸಂಖ್ಯೆ 2 ಬೇಡವಾದ ಕಸದ ಸೃಷ್ಟಿ.
ನಭೋಮಂಡಲದ ಆಚೆಗೆ ನಡೆಯುತ್ತಿರುವ ವಿಸ್ಮಯಗಳನ್ನು ತಿಳಿದುಕೊಳ್ಳುವ ಕುತೂಹಲಕ್ಕಿಂತಲೂ ಹೆಚ್ಚಿನ ಕುತೂಹಲ ನಮ್ಮ ಈ ಜೀವ ವೈವಿಧ್ಯ ತಾಣಗಳಲ್ಲಿ ನಡೆಯುತ್ತಿದೆ. ಸಸ್ಯ ಕೋಟಿ ಜೀವಸಂಕುಲಗಳು ಹಾಗೂ ಮಾನವನೂ ಕೂಡ ಈ ಭೂಮಿಯ ಮೇಲೆ ಜೀವಿಸುತ್ತಿರುವುದು. ಭೂಮಿಯ ಪ್ರತಿಶತ 71 ಭಾಗ ಸಮುದ್ರದ ಉಪ್ಪು ನೀರಿನಿಂದಲೇ ಆವೃತವಾಗಿದೆ, ನಾವು ಇಷ್ಟು ದಿನಗಳಲ್ಲಿ ತಿಳಿದಿರುವುದು ಕೇವಲ 10% ಜ್ಞಾನವನ್ನು ಮಾತ್ರ ಇನ್ನೂ ಉಳಿದ ಈ ಮುಂದಿನ ಅಭೇದ್ಯ ಕೋಟೆಯ ವಿಸ್ಮಯಗಳನ್ನು ಅರಿಯುವ / ಗ್ರಹಿಸುವ ಶಕ್ತಿ ಮಾನವನಿಗಿನ್ನು ಬಂದಿಲ್ಲ.
ನಮ್ಮ ಪೂರ್ವಜರಲ್ಲಿ ನಾವು ಇಂದು ಕಾಣಬಹುದಾದಂತಹ ಕೊಳ್ಳುಬಾಕತನವಿರಲಿಲ್ಲ, ಅವರು ನಿಸರ್ಗ ಸಹಜವಾಗಿಯೇ ಸಿಗುವಂತಹ ಸೀಗೆಪುಡಿ, ಹಲ್ಲಿನಪುಡಿಯನ್ನು ಉಪಯೋಗಿಸಿದ್ದರಿಂದ ಬಳಸಿ ಬಿಸಾಕುವಂತಹ ಮನೋವೃತ್ತಿ ಬೆಳೆದಿರಲಿಲ್ಲ, ನಿಸರ್ಗದಲ್ಲಿ ನಡೆಯುವಂತಹ ಅನೇಕ ವಿಸ್ಮಯಗಳನ್ನು ಗ್ರಹಿಸಲು ಪ್ರಯತ್ನಿಸಿ ಪರಿಸರಕ್ಕೆ ಪೂರಕವಾಗಿ ಜೀವನವನ್ನು ನಡೆಸುವುದರ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳುತಿದ್ದ.
ನಾವು ಹಿಂದೆ ಏನು ನಡೆದಿತ್ತು ಎಂದು ತಿಳಿದುಕೊಳ್ಳುವುದರಲ್ಲಿ ಜಾಗೃತವಾಗದೆ ಹೋದರೆ ಮುಂದಿನ ತಲೆಮಾರುಗಳು ಅಂಧಕಾರದಲ್ಲಿ ಮುಳುಗಿ ಹೋಗುತ್ತದೆ. ನೀವೊಮ್ಮೆ ಯೋಚಿಸಿ.
ನಿಸರ್ಗ ತನ್ನೊಳಗೆ ನಡೆಯುತ್ತಿರುವಂತಹ ಕೋಟ್ಯಂತರ ವಿಸ್ಮಯಗಳನ್ನು ಗ್ರಹಿಸುವ ಅಧಿಕಾರವನ್ನು ಮಾನವನಿಗೆ ನೀಡಿದೆಯೇ ಹೊರತು ನಿಸರ್ಗವನ್ನು ನಾಶಪಡಿಸುವ ಅಧಿಕಾರ ಅಥವಾ ಯೋಗ್ಯತೆ ಮಾನವಗಿನ್ನು ಕೊಟ್ಟಿಲ್ಲ.
ಡಾ. ರಹಮತ್ ತರೀಕೆರೆ ಅವರ ಒಂದು ಮಾತಿದೆ "ದೈವವಿಲ್ಲದ ಹೊಸ ಧರ್ಮವೆಂದರೆ, ಪರಿಸರವಾದ ಅಲ್ಲಿ ಮನುಷ್ಯರಿರುತ್ತಾರೆ. ಅದರ ಜೊತೆಗೆ ಸಹಜವಾದ ಸಂಬಂಧವನ್ನು ಹೊಂದಿರುವ ಗಿಡ ಮರ ಕೀಟ ಪ್ರಾಣಿ ನೀರು ಆಗಸ ನೆಲೆಗಳಿರುತ್ತವೆ. ನಮ್ಮ ಕಾಲದ ಮಕ್ಕಳು ನಂಜೆರಿಸುವ ಧರ್ಮಗಳಿಗಿಂತ ಅಂತಃಕರಣ ಬೆಳಗುವ ಈ ಪರಿಸರ ಧರ್ಮದ ಅನುಯಾಯಿಗಳಾಗುವ ಅಗತ್ಯವಿದೆ".
ಧನ್ಯವಾದಗಳು.
ಪ್ರಸ್ತುತ ಸಂದರ್ಭಕ್ಕೆ ಅರ್ಥಪೂರ್ಣ ಲೇಖನ. ಹೌದು ಪರಿಸರವೇ ನಮ್ಮ ಧರ್ಮ
ReplyDeleteಪರಿಸರದ ಅರಿವು ಮೂಡಿಸಬೇಕು ಈಗಿನ ಪ್ರತಿಯೊಬ್ಬ ನಾಗರಿಕರಿಗೆ.. ಅದ್ಬುತ ಸರ್ .
ReplyDeleteಕಣ್ಣಿಗೆ kaanisada daivakinta
ReplyDeleteಕಣ್ಣಿಗೆ ಕಾಣುವ ಪರಿಸರ ಪೂಜಿಸಿ....best message SP sir
Hasire usiru,thumba channagodhe
DeleteProtecting environment is a collective responsibility.
ReplyDeleteGood article 👍
You could also focus on human nature in the modern days like, by aiming to go into space, he is forgetting interpersonal relationships and human values.
ReplyDeleteಕಾಡು ಬೆಳೆಸಿ ನಾಡು ಉಳಸಿ,
ReplyDeleteನೈಸ್ ಆರ್ಟಿಕಲ್
Once when nature starts protecting it self , we are none to stand before its arrival... According to Bible God made nature in 6 days and last day he created a man with mud and so like that we are from mud and at the end we turn into mud so in between if man hurts nature surely God will hurt man badly ... Thank you sir for this article...
ReplyDelete