ಅಂದು ಭಾನುವಾರ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಶಿಬಿರದ ಆಯೋಜಕರಿಗೂ ಕೆಲವು ಬಿರುಸಿನ ಕೆಲಸಗಳು ನಡೆಯುತ್ತಿದ್ದವು ಮಧ್ಯಾಹ್ನದ ಊಟವಾಗುವುದರೊಳಗಾಗಿ ಮೈಸೂರು ಆಕಾಶವಾಣಿಯಲ್ಲಿ ಕರ್ತವ್ಯ ನಿರತರಾಗಿರುವ ಶ್ರೀಯುತ ಉಮೇಶ್ ಅವರು ಬುಡಕಟ್ಟು ಸಂಸ್ಕೃತಿ ಮತ್ತು ಸಮೂಹ ಮಾಧ್ಯಮಗಳು ಎಂಬ ವಿಷಯದ ಮೇಲೆ ಬೆಳಕು ಚೆಲ್ಲುತ್ತಾ ದೇಶದಲ್ಲಿ ಬುಡಕಟ್ಟು ಜನರಿಗೆಂದೇ ಇರುವ ಸಮೂಹ ಮಾಧ್ಯಮಗಳ ಪರಿಚಯವನ್ನು ಮಾಡಿಕೊಟ್ಟರು. ನಂತರ SVYM ಸಂಸ್ಥೆಯ ಡಾ ಎಂ ಆರ್ ಸೀತಾರಾಮ ಅವರು ಬುಡಕಟ್ಟು ಜನರ ಜೀವನ ಮೌಲ್ಯಗಳು ಎಂಬ ವಿಷಯದ ಮೇಲೆ ಮಾತನಾಡಿ ಸುಮಾರು 37 ವರ್ಷಗಳ ಹಿಂದೆ ಬುಡಕಟ್ಟು ಜನರ ಅಭಿವೃದ್ಧಿಗೆದ್ದು ನಾವು ಇಲ್ಲಿಗೆ ಬಂದಾಗ ಇಲ್ಲಿಯ ಜನತೆಯಿಂದ ಕಲಿತದ್ದೆ ಹೆಚ್ಚು ಅದು ಇಲ್ಲಿಯ ಸಂಸ್ಕೃತಿ ಆಗಿರಲಿ, ಆಚರ ವಿಚಾರವೇ ಆಗಿರಲಿ ಎಲ್ಲವೂ ನೈಜತೆಯಿಂದ ಕೂಡಿತ್ತು, ಆದಿವಾಸಿಗಳಲ್ಲಿ ವೈದ್ಯಕೀಯ ಪದ್ಧತಿಯು ಸನಾತನ ಕಾಲದಿಂದಲೂ ಗಿಡಮೂಲಿಕಾ ಔಷಧೀಯಗಳಿಂದ ಕೂಡಿದ್ದು ಹಾಗೂ ಅವರಿಂದ ಕಲಿತದ್ದನ್ನು ಗಿರಿ ಮದ್ದು ಎಂಬ ಪುಸ್ತಕದ ಮೂಲಕ ಈ ಹಿಂದೆ ಹೊರತರಲಾಯಿತು ಎಂಬ ಮಾಹಿತಿಯನ್ನು ತಿಳಿಸಿದರು. ನಂತರ ಸಂತೋಷ್ ತಮ್ಮಯ್ಯ ಅವರು ಸ್ವತಂತ್ರ ಹೋರಾಟ ಮತ್ತು ಬುಡಕಟ್ಟು ಸಮುದಾಯ ಎಂಬ ವಿಷಯದ ಬಗ್ಗೆಯೂ ಹಾಗೂ ಶ್ರೀಯುತ ವಾದಿರಾಜರು ಬುಡಕಟ್ಟು ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯ ಎಂಬ ವಿಷಯದ ಬಗ್ಗೆ ಚರ್ಚಿಸಿ. ಮಧ್ಯಾಹ್ನ ಊಟ ಮುಗಿಸಿಕೊಂಡು ಸುರಿಯುತ್ತಿದ್ದ ಮಳೆಯ ನಡುವೆಯೇ ಬಸ್ಸನ್ನೇರಿ ಬುಡಕಟ್ಟು ಹಾಡಿ ಭೇಟಿ ಹಾಗೂ ಸಮೀಕ್ಷೆಗೆಂದು ಹೊರಟೆವು.
ಶಿಬಿರಾರ್ಥಿಗಳಲ್ಲಿ ಉತ್ಸಾಹ ಹೆಚ್ಚಾಗಿಯೇ ಇತ್ತು ಬಸ್ ನಿಧಾನವಾಗಿ ಹಳ್ಳ ಕೊಳ್ಳದ ದಾರಿಯಲ್ಲಿ ಚಲಿಸುತ್ತಾ ಸ್ವಲ್ಪ ಹೊತ್ತಾದ ಬಳಿಕ ಹಾಡಿಯ ಮುಖ್ಯರಸ್ತೆಯನ್ನು ಬಂದು ಸೇರಿತು. ಸ್ವಲ್ಪ ಮಳೆ ಕಡಿಮೆಯಾದರೆ ಮೇಲೆ ಕೆಳಗೆ ಇಳಿದು ಹೋಗೋಣ ಎಂಬುವರು ಕೆಲವರು, ಮಳೆ ನಿಲ್ಲುವುದಿಲ್ಲ ಎನ್ನುವುದು ಇನ್ನು ಕೆಲವರ ವಾದ, ಸ್ವಲ್ಪ ಹೊತ್ತು ಕಾದರೂ ಯಾರೂ ಛತ್ರಿಯನ್ನು ತೆಗೆದುಕೊಂಡು ಬರದೇ ಇರುವ ಕಾರಣ ಮಳೆಯಲ್ಲಿಯೇ ನಿಧಾನವಾಗಿ ಒಬ್ಬೊಬ್ಬರೇ ಬಸ್ಸಿನಿಂದ ಇಳಿದು ಹಾಡಿಯ ಕೆಸರು ರಸ್ತೆ ಹಿಡಿದರು.ಮಳೆ ಸುರಿಯುತ್ತಲೇ ಇತ್ತು ನಿಶಬ್ದವಾಗಿದ್ದ ಹಾಡಿಯ ವಾತಾವರಣ ಜನದಟ್ಟಣೆಯಿಂದಾಗಿ ಶಬ್ದಮಯಗೊಂಡು ಹಾಡಿಯ ಮನೆ ಒಳಗೆ ಇದ್ದ ಜನರು ಪಿಳಪಿಳನೆ ಕಣ್ಣುಬಿಡುತ್ತಾ ನಮ್ಮನ್ನು ನೋಡುತ್ತಾ ನಿಂತರು ಪಾಪ ಇವರು ಎಷ್ಟು ಮುಗ್ಧರು ಎಂದರೆ ತಾವು ಮಳೆಯಲಿ ನಿಂತಿದ್ದರೂ ಸಹ ಹೊರಗಿನಿಂದ ಬಂದವರಿಗೆ ತಮ್ಮ ಮನೆಯಲ್ಲಿದ್ದ ಛತ್ರಿಗಳನ್ನು ನೀಡುತ್ತಿದ್ದರು. ನಂತರ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರನ್ನು ಕರೆಸಿ ಅವರ ಕುಂದುಕೊರತೆಗಳನ್ನು ಕೇಳಲಾಯಿತು, ಸಾಮಾನ್ಯವಾಗಿ ಹೊರಗಿನವರನ್ನು ಕಂಡರೆ ನಾಚುವ ಸ್ವಭಾವದವರು ಇವರು ತಮಗೆ ಎಷ್ಟೇ ಕಷ್ಟ ಇದ್ದರೂ ಕೂಡ ಪ್ರೀತಿಯಿಂದ ಎಲ್ಲರನ್ನು ಮಾತನಾಡುತ್ತಿದ್ದರು. ನಮ್ಮ ಮೇಲೆ ಇವರಿಗಿರುವ ಒಂದು ಸಂಶಯವೆಂದರೆ ನಮ್ಮ ಕುಂದುಕೊರತೆಯನ್ನು ನಿಗಿಸುವುದಾಗಿ ಅನೇಕ ಮಂದಿ ಬಂದು ಫೋಟೋ ತೆಗೆದುಕೊಂಡು ಹೋಗುತ್ತಾರೆ ಆದರೆ ಪ್ರಯೋಜನಗಳೇನು ಆಗುವುದಿಲ್ಲ, ಅದರೊಂದಿಗೆ ಹೀಗೆ ಭೇಟಿ ನೀಡುವವರು ಫೋಟೋಗಳನ್ನು ತೆಗೆದುಕೊಂಡು ಮತ್ತೊಬ್ಬರಿಂದ ಹಣಗಳಿಸುವ ಮಾರ್ಗವನ್ನು ಮಾಡಿಕೊಂಡಿದ್ದಾರೆ ಎಂಬುದು ಇವರ ನಿಲುವಾಗಿತ್ತು. ಇದರ ನಡುವೆ ನಾವು ಹೋದ ವಿಷಯವನೆಲ್ಲವನ್ನು ಅವರಿಗೆ ತಿಳಿಯಪಡಿಸಿದ ಮೇಲೆ ಮುಕ್ತವಾಗಿ ಮಾತನಾಡಲಾರಂಭಿಸಿದರು.
ನಮ್ಮ (ಬುಡಕಟ್ಟು ಜನರ) ಪೂರ್ವಜರೆಲ್ಲರೂ ಮೂಲವಾಗಿ ಇಲ್ಲಿಯೇ ನೆಲೆ ಕಂಡುಕೊಂಡವರು ಕಾಡುಕುರುಬ, ಜೇನು ಕುರುಬ ಜನಾಂಗಕ್ಕೆ ಸೇರಿರುವ ನಾವು ನಿಸರ್ಗಕ್ಕೆ ಪೂರಕವಾಗಿ ಬದುಕಿ ಬಾಳಿದವರು ಇಂದು ಅನೇಕ ಒತ್ತಡಗಳಿಗೆ ಸಿಲುಕಿ ನಮ್ಮ ಮೂಲ ನೆಲೆಗಳಾದ ಕಾಡಿನಿಂದ ಒಕ್ಕಲೆಬ್ಬಿಸಿ ಇನ್ನೆಲ್ಲಿಗೂ ತಂದು ನಮ್ಮನ್ನು ಹಾಕಿದ್ದಾರೆ, ಸ್ವಾತಂತ್ರ್ಯ ವಿರದ ಪರಿಸ್ಥಿತಿಯಲ್ಲಿ ನಾವು ಇಂದು ಬಾಳುತ್ತಿದ್ದೇವೆ ಅರಣ್ಯ ಇಲಾಖೆಯವರು ನಮ್ಮನ್ನು ಕಂಡರೆ ಬಹಳ ನಿಷ್ಠುರವಾಗಿ ಕಾಣುತ್ತಾರೆ.ಇತ್ತ ನಮಗೆ ಸರಕಾರ ಕಟ್ಟಿಕೊಟ್ಟಿರುವ ಅವ್ಯವಸ್ಥೆ ಮನೆ ಮಳೆಗಾಲದಲ್ಲಿ ಮಳೆ ನೀರು ಸೋರುತ್ತದೆ ಬೇಸಿಗೆಯಲ್ಲಿ ಬಿಸಿಲು ಮನೆಯೊಳಗೆ ನುಗ್ಗುತ್ತದೆ. ಸರಿಯಾದ ಯಾವುದೇ ವ್ಯವಸ್ಥೆಗಳು ನಮ್ಮಲ್ಲಿಗೆ ತಲುಪುವ ಮುನ್ನ ಪೋಲಾಗಿ ಹೋಗಿರುತ್ತದೆ. ಅಪೌಷ್ಟಿಕತೆ, ಅನಕ್ಷರತೆ, ದುಶ್ಚಟಗಳಿಗೆ ದಾಸರಾಗಿ ಎಲ್ಲೂ ಸರಿಯಾಗಿ ನೆಲೆಯೂರಿದ ಪರಿಸ್ಥಿತಿ ಬಂದೊದಗಿದೆ.
ಇಷ್ಟೆಲ್ಲಾ ಬುಡಕಟ್ಟು ಸಮುದಾಯದ ಕಷ್ಟ ಕಾರ್ಪಣ್ಯಗಳನ್ನು ಕೇಳುತ್ತಿದ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮರುಕವೂ ಹುಟ್ಟಿದಂತಾಗಿ ತಾವು ನೆರವಾಗಬಹುದಾದ ಮಾರ್ಗೋಪಾಯವನ್ನು ಗುರುತು ಮಾಡಿಕೊಂಡರು ನಂತರ ಕೊನೆಯಲ್ಲಿ ಚಿಕ್ಕಮಕ್ಕಳಿಂದ ಬುಡಕಟ್ಟು ಜನಾಂಗದ ಹಾಡನ್ನು, ನೃತ್ಯವನ್ನು ನೋಡಿಕೊಂಡು ಬಂದ ಮಾರ್ಗದಲ್ಲಿ ಹಿಂತಿರುಗಿದೆವು.
ನಂತರ ಅದೇ ಬಸ್ನಲ್ಲೇ ಸ್ವಲ್ಪ ದೂರದಲ್ಲಿದ್ದ ಮಲೆಮಹದೇಶ್ವರ ಸಂಬಂಧಪಟ್ಟ ಪೌರಾಣಿಕ ಹಿನ್ನೆಲೆಯುಳ್ಳ ರಮ್ಯ ರಮಣೀಯ ಭೀಮನಕೊಲ್ಲಿ ಎಂಬ ದೇವಸ್ಥಾನಕ್ಕೆ ಬಿಟಿ ನೀಡಿದೆವು. ಈ ಪ್ರದೇಶದ ಭೌಗೋಳಿಕ ವೈಶಿಷ್ಟವೆಂದರೆ ಹೇಗೆ ಭಾರತದ ಮೂರು ದಿಕ್ಕುಗಳಲ್ಲಿ ನೀರಿನಿಂದ ಆವೃತವಾಗಿದೆಯೋ ಅದೇ ರೀತಿ ಈ ಪ್ರದೇಶವು ಕಬಿನಿ ಹಿನ್ನೀರಿನಿಂದ ಆವೃತಗೊಂಡಿದೆ. ಇಲ್ಲಿ ಹರಿಯುವ ಕಪಿಲಾನದಿಯ ಮತ್ತೊಂದು ವಿಶೇಷತೆಯೆಂದರೆ ಬಲಭಾಗದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಎಡಬದಿಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ತನ್ನೊಳಗೆ ಅಡಗಿಸಿಕೊಂಡಿದೆ. ಒಂದಾನೊಂದು ಕಾಲಕ್ಕೆ ಗೊಂಡಾರಣ್ಯ ವಾಗಿದ್ದ ಈ ಭೀಮನಕೊಲ್ಲಿ ಇಂದು ತಾಳೆ ಸಂಶೋಧನಾ ಕೇಂದ್ರದ ತಾಳೆಗಿಡಗಳಿಂದಲೂ ಜಮೀನಿನವರ ತೆಂಗಿನ ತೋಟಗಳಾಗಿ ಮಾರ್ಪಾಡಾಗಿದೆ. ಹೀಗೆ ಈ ಸುತ್ತಲ ನಿಸರ್ಗದ ಸೌಂದರ್ಯವನ್ನು ಸವಿಯುತ್ತ ಚಳಿಗೆ ಪುರಿ ಕಾರವನ್ನು ತಿಂದು ಎಲ್ಲರೊಟ್ಟಿಗೆ ಒಂದು ಗ್ರೂಪ್ ಫೋಟೋ ತೆಗೆದುಕೊಂಡು ನಾಳೆಯೇ ಶಿಬಿರದ ಕೊನೆಯ ದಿನ ಎಂದುಕೊಳ್ಳುತ್ತ ನಾಲ್ಕುದಿನಗಳ ಶಿಬಿರದ ನೆನಪುಗಳನ್ನು ಮರುಕಳಿಸುತ್ತಾ ಬಸ್ನಲ್ಲಿ ಹಾಡು ಹೇಳಿಕೊಂಡು ಶಾಲೆಗೆ ಹಿಂದಿರುಗಿದೆವು.
ಮರುದಿನ ಸೋಮವಾರ, ಶಿಬಿರದ ಕೊನೆಯ ದಿನ ಶಿಬಿರಾರ್ಥಿಗಳೆಲ್ಲರೂ ಶಿಸ್ತಿನ ಸಿಪಾಯಿಗಳಾಗಿ ಸಮಯಪಾಲನೆ ಮಾಡುತ್ತಿದ್ದರು ಬೆಳಿಗ್ಗೆ ಮುಂಚಿತವಾಗಿಯೇ ಎದ್ದು ಯೋಗಾಸನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮಗಿದ್ದ ಸಂಶಯಗಳನ್ನು ಬಗೆಹರಿಸಿಕೊಂಡಿರು ನಂತರ ಯೋಗಾಸನವನ್ನು ಹೇಳಿಕೊಟ್ಟ ಗುರುಗಳಿಗೆ ವಂದನಾರ್ಪಣೆಯನ್ನು ನಡೆಸಿಕೊಡಲಾಯಿತು. ಆನಂತರ ಎಲ್ಲರೂ ಫ್ರೆಶ್ ಅಪ್ ಆಗಿ ಉಪಾಹಾರವನ್ನು ಸೇವಿಸಿ ಮೊದಲಿಗೆ ಶಿಬಿರಾರ್ಥಿಗಳಿಂದ ಕವಿಗೋಷ್ಠಿ ಮತ್ತು ಕಥಾ ಓದನ್ನು ನಡೆಸಿಕೊಡಲಾಯಿತು ಇದರಲ್ಲಿ ಶಿಬಿರಾರ್ಥಿಗಳು ತಾವು ಸ್ವತಃ ಬರೆದಂತಹ ಕವಿತೆಗಳನ್ನು ಓದಿದರು, ನಂತರ ಸಾಧಕರೊಂದಿಗೆ ಸಂವಾದದಲ್ಲಿ ವಿಧಾನಪರಿಷತ್ ಸದಸ್ಯರಾದ ಹಾಗೂ ಸಿದ್ದಿ ಜನಾಂಗಕ್ಕೆ ಸೇರಿದ ಶಾಂತರಾಮ್ ಸಿದ್ಧಿ ಅವರು ತಮ್ಮ ಜೀವನದಲ್ಲಿ ವನವಾಸಿ ಕಲ್ಯಾಣದ ಮೂಲಕ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ ಯಶೋಗಾಥೆಯನ್ನು ಹಂಚಿಕೊಂಡರು ನಂತರ ಕುಲಪತಿಗಳು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯ ಬೆಂಗಳೂರು ಡಾಕ್ಟರ್ ಗೋಮತಿದೇವಿಯವರು ವಿದ್ಯಾರ್ಥಿಗಳೊಂದಿಗೆ ಬುಡಕಟ್ಟು ಸಮುದಾಯ ಮತ್ತು ಶಿಕ್ಷಣ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಸದಾ ಸರಕಾರವನ್ನು ದೂರುತ್ತಾ ನಿರಾಶಾವಾದಿಗಳಾಗುವುದಕ್ಕಿಂತ ನಮ್ಮಿಂದ ಬದಲಾವಣೆ ಸಾಧ್ಯವಾಗುವುದಾದರೆ ನಾವೇಕೆ ಮಾಡಬಾರದು ? ಬುಡಕಟ್ಟು ಜನರ ಹೇಳಿಕೆಗಾಗಿ ನಾವೇನು ಮಾಡಬಹುದೆಂದು ಆಲೋಚಿಸಿ ಪಟ್ಟಿ ಮಾಡಿಕೊಂಡು ಕಾರ್ಯಕ್ರಮ ಅನುಷ್ಠಾನಕ್ಕೆ ಇರುವ ಅಡೆತಡೆಗಳನ್ನು ದೂರ ಮಾಡೋಣ ಹಾಗೂ ಈ ಬುಡಕಟ್ಟು ಜನಾಂಗದ ಮಕ್ಕಳಿಗೆ ದೊರಕುತ್ತಿರುವ ಶಿಕ್ಷಣದ ಬಗ್ಗೆ ವಿಸ್ತಾರವಾಗಿ ವಿವರಿಸುತ್ತಾ ಶಿಬಿರಾರ್ಥಿಗಳಿಗೆ ಆಶಾವಾದದ ಭರವಸೆಯನ್ನು ನೀಡಿದರು. ನಂತರ ಶಿಬಿರದ ಕೊನೆಯ ಪಾಯಸದ ಭೋಜನವಾಗಿ ಕಾರ್ಯಕ್ರಮದ ಕೊನೆಯ ಘಟ್ಟವಾದ ಸಮಾರೋಪ ಸಮಾರಂಭಕ್ಕೆ ಎಲ್ಲರೂ ಬಂದು ಸೇರಿದರು.
ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನು ಹೇಳಿದರು ಶ್ರೀ ಶಾಂತರಾಮ್ ಸಿದ್ಧಿಯವರು ಸಮುದಾಯದ ಅಭಿವೃದ್ಧಿ ಎಂಬುದು ಸಮಾಜದ ಒಂದು ದೊಡ್ಡ ಒಳಿತಿನ ಕಾಯಕ. ಸಮಾಜದಲ್ಲಿ ಸಮಗ್ರವಾಗಿ ಎಲ್ಲರೂ ಕೈ ಜೋಡಿಸಿ ಮುಂದೆ ಬರುವುದರಿಂದ ಮಾತ್ರ ದೇಶದ ಹೇಳಿಗೆ ಸಾಧ್ಯವೆಂದು ಸಾರುವ ಗೀತೆಯನ್ನು ಎಲ್ಲರಿಗೂ ಹೇಳಿಕೊಟ್ಟು ಹಾಡುತ್ತಾ ಸಮರೂಪ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾಕ್ಟರ್ ಗೋಮತಿದೇವಿಯವರು ಬುಡಕಟ್ಟು ಸಮುದಾಯದ ಅಭಿವೃದ್ಧಿಯ ದೂರದೃಷ್ಟಿ ಬಗ್ಗೆ ಬೆಳಕು ಚೆಲ್ಲುತ್ತಾ ಮುಖ್ಯ ಅತಿಥಿಗಳ ಭಾಷಣವನ್ನು ಮಾಡಿದ್ದರು.
ಕಮ್ಮಟದ ನಿರ್ದೇಶಕರಾಗಿದ್ದ ಪ್ರೊ ನೀಲಗಿರಿ ತಳವಾರರು ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಆಯೋಜಕರು ಒಂದು ಕಡೆಯಾದರೆ ಇದಕ್ಕಿಂತಲೂ ಮೂಲ ಮುಖ್ಯ ಕಾರಣಕರ್ತರು ಶಿಬಿರಾರ್ಥಿಗಳು ನಿಮ್ಮ ಸಕ್ರಿಯ ಭಾಗವಹಿಸುವಿಕೆಯಿಂದಾಗಿಯೇ ಕಾರ್ಯಕ್ರಮ ಇಷ್ಟು ಯಶಸ್ವಿಯಾಗಲು ಕಾರಣವಾಯಿತು ನೀವುಗಳೆಲ್ಲವೂ ಯೋಜನೆಗಳು ಹಾಗೂ ಬುಡಕಟ್ಟು ಜನರ ನಡುವೆ ಇರುವ ಅಂತರದ ಕೊಂಡಿಗಳು ನೀವಾಗಬೇಕು ಎಂದು ಹೇಳಿದರು.
SVYM ಸಂಸ್ಥೆಯ CEO ಅವರಾದ ಡಾ ಕುಮಾರ್ ಅವರು ಬುಡಕಟ್ಟು ಸಮಾಜದ ಅಭಿವೃದ್ಧಿ ಎಂದರೆ ಸಮುದಾಯದ ಜನರಲ್ಲಿ ಬೆರೆತು ಕಲಿತು ಅವರಿಗೆ ಎಲ್ಲಾ ಆಯಾಮಗಳಲ್ಲಿ ಅನುಕೂಲವಾಗುವಂತೆ ಹಾಗೂ ಅವರ ಮೂಲ ಸಂಸ್ಕೃತಿಗೆ ಧಕ್ಕೆಯಾಗದಂತೆ ಮಾಡುವುದೇ ಬುಡಕಟ್ಟು ಜನಾಂಗದ ಸರ್ವಂಗಿನ ಅಭಿವೃದ್ಧಿ ಎಂದರು.
ಇದಾದ ಬಳಿಕ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ವಿತರಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾಕ್ಟರ್ ಬಿ ವಸಂತ್ ಕುಮಾರ್ ಅವರು ಬೆಳಿಗ್ಗೆ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಯನ್ನು ನೆನಪಿನಲ್ಲಿಟ್ಟುಕೊಂಡು ಉತ್ತರಿಸಿ ಐದು ದಿನಗಳ ಶಿಬಿರದ ಕಾರ್ಯಕ್ರಮಗಳೆಲ್ಲವನ್ನೂ ಮೆಲುಕುಹಾಕುತ್ತಾ ಶಿಬಿರವನ್ನು ನೀವೆಲ್ಲರೂ ಯಶಸ್ವಿಯಾಗಿ ಮುಗಿಸಿದ್ದೀರಿ, ನಿನ್ನೆ ಹಾಡಿಯ ಭೇಟಿಯಲ್ಲಿ ನೀವೆಲ್ಲರೂ ಬುಡಕಟ್ಟು ಸಮುದಾಯದ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೀರಿ ಅವರ ಕಣ್ಣುಗಳಲ್ಲಿ ನಿಮ್ಮ ಭೇಟಿ ಆಶಾಭಾವನೆಯನ್ನು ಮೂಡಿಸಿದೆ, ಜವಾಬ್ದಾರಿಯುತವಾಗಿ ಅವರ ಕಷ್ಟಕಾರ್ಪಣ್ಯಗಳನ್ನು ದೂರಗೊಳಿಸಿದರೆ ಶಿಬಿರ ನಡೆದದ್ದು ಸಾರ್ಥಕವಾಗುತ್ತದೆ ಎನ್ನುತ್ತಾ ಶಿಬಿರ ಯಶಸ್ವಿಯಾಗಲಿಕ್ಕೆ ಕಾರಣೀಭೂತರಾದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾಯಕ ವೃಂದದವರಿಗೂ, ಶಿಬಿರಾರ್ಥಿಗಳಿಗೂ, ಕಾರ್ಯಕ್ರಮ ಇದೇ ಸ್ಥಳದಲ್ಲಿ ನಡೆಯಲಿಕ್ಕೆ ಅವಕಾಶ ಮಾಡಿಕೊಟ್ಟ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನ ವಿವೇಕಾನಂದ ಭಾರತೀಯ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾಕ್ಟರ್ ರೇಖಾ ಶಣ್ಮುಖ ಹಾಗೂ ಅವರ ಸಿಬ್ಬಂದಿ ವರ್ಗದವರಿಗೂ, ವಿವೇಕ ಶೈಕ್ಷಣಿಕ ಗಿರಿಜನ ಕೇಂದ್ರ ಸಿಬ್ಬಂದಿ ವರ್ಗದವರಿಗೂ ಐದು ದಿನವೂ ರುಚಿಯಾದ ಊಟವನ್ನು ಬಡಿಸಿದ ಅಡಿಗೆಯವರಿಗೆ, ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಕಾರ್ಯಕ್ರಮ ಯಶಸ್ವಿಯಾಗಲು ನೆರವು ಮಾಡಿಕೊಟ್ಟ ಎಲ್ಲರಿಗೂ ನಮಿಸುತ್ತಾ, ಬಹುದೂರದಿಂದ ಬಂದಂತಹ ವಿದ್ಯಾರ್ಥಿಗಳ ಪಯಣವನ್ನು ನೆನಪಿನಲ್ಲಿಟ್ಟುಕೊಂಡು ಮೈಸೂರು ನಗರದ ರೈಲ್ವೆ ಸ್ಟೇಷನ್ ವರೆಗೂ ವಾಹನ ವ್ಯವಸ್ಥೆ ಆಗಿದೆ ಎಂದು ಹೇಳಿ ಕೊನೆಗೆ ಎಲ್ಲರೂ ಒಟ್ಟಿಗೂಡಿ ಒಂದು ಗ್ರೂಪ್ ಫೋಟೋ ತೆಗೆದುಕೊಂಡು ಕೊನೆಗೆ ಚಹಾ ಹಿರಿ ಮೊದಲೇ ರೆಡಿ ಇಟ್ಟುಕೊಂಡಿದ್ದ ಲಗೇಜ್ ಗಳನ್ನು ಬಸ್ ನಲ್ಲಿ ಹಾಕಿ, ಎಲ್ಲರೂ ಮತ್ತೊಮ್ಮೆ ಸಿಗೋಣವೆಂದು ಶಿಬಿರದ ನೆನಪುಗಳನ್ನು ಮೆಲುಕುಹಾಕುತ್ತಾ ಶಿಬಿರ ಕೊನೆಗೊಂಡಿತು.
ವಿದ್ಯಾರ್ಥಿಗಳೆಲ್ಲ ಹೊರಟ ನಂತರ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತೊಮ್ಮೆ ಸಂಸ್ಥೆಯ ಸಿಬ್ಬಂದಿ ವರ್ಗದವರನ್ನು ನೇರವಾಗಿ ಭೇಟಿಯಾಗಿ ಧನ್ಯವಾದಗಳನ್ನು ಹೇಳುತ್ತಾ ಹಿಂತಿರುಗಿದರು. ಇತ್ತ ಐದು ದಿನಗಳು ಶಿಬಿರಾರ್ಥಿಗಳು ನಲಿದಾಡುತ್ತಿದಂತಹ ಕ್ಯಾಂಪಸ್ ಸಣ್ಣಗೆ ಬಿಕೋ ಎನ್ನುವ ಪ್ರಾರಂಭವಾಯಿತು ನಮ್ಮ ಪಯಣ ಹಿಂದಿರುಗಿ ನಗರಕ್ಕೂ ಶಿಬಿರಾರ್ಥಿಗಳ ಪಯಣ ಬುಡಕಟ್ಟು ಜನರ ಅಭಿವೃದ್ಧಿಯೆಡೆಗೆ ಹೊರಟಿತು.
ಧನ್ಯವಾದಗಳು.
Nicely written the experience of the journey towards the Tribes. I appreciate your language and writing skill. I wish you all the best 👍
ReplyDeleteyour experience in svym express through the your good writing skill that's nice
ReplyDelete💐Very Nice Dear Friend ❤
ReplyDelete