ರಂಗಿತರಂಗ, ಯುಟರ್ನ್, ದೃಶ್ಯ, ಕವಲುದಾರಿ, ಶಿವಾಜಿ ಸುರತ್ಕಲ್ ಚಿತ್ರಗಳು ಬೇರೆ ಚಲನಚಿತ್ರಗಳಿಗಿಂತ ವಿಭಿನ್ನವೆನಿಸುತ್ತದೆ. ಚಿತ್ರ ಪ್ರಾರಂಭದ ಹಂತದಲ್ಲಿ ಪ್ರೇಕ್ಷಕರ ಮನದಲ್ಲಿ ಮೂಡಿದ ಕುತೂಹಲ ಚಿತ್ರ ಕೊನೆಯ ಹಂತ ತಲುಪುವವರೆಗೂ ಅನೇಕ ತಿರುವುಗಳನ್ನು ಪಡೆದು ಮತ್ತೊಂದು ಮಜಲನ್ನು ಧಾಟಿ, ಕುತೂಹಲದ ಉತ್ತರವನ್ನು ಕಂಡುಕೊಳ್ಳುವುದರ ಮೂಲಕ ಚಿತ್ರ ಕೊನೆಗೊಳ್ಳುತ್ತದೆ. ಈ ರೀತಿಯಾದ ಕುತೂಹಲಭರಿತ ಚಿತ್ರಗಳು ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವುದರಿಂದ ಅಪಾರ ಜನಮನ್ನಣೆಯನ್ನು ಪಡೆದಿದೆ. ಚಲನಚಿತ್ರಗಳು ನಡೆದುಬಂದ ಹಾದಿಯನ್ನೊಮ್ಮೆ ನೋಡಿದರೆ ಒಂದು ಚಲನಚಿತ್ರ ನೋಡಿದಷ್ಟೇ ಕುತೂಹಲವೆನಿಸುತ್ತದೆ.
ಮಾನವನಲ್ಲಿ ನಾಗರಿಕತೆ ಬೆಳೆಯುತ್ತಾ ಹೋದಂತೆ ಹೊಸ ಹೊಸ ಪ್ರಯೋಗಗಳ ಮೂಲಕ ಒಂದೊಂದೇ ಮಜಲನ್ನು ದಾಟುತ್ತಬಂದ. ತಾನು ಒಂದು ಪ್ರದೇಶದಲ್ಲಿ ನೆಲೆಸುವುದನ್ನು ಕಲಿತ ಬಳಿಕವಂತೂ ಕೃಷಿ, ಆಚಾರ-ವಿಚಾರ, ಕಲೆ-ಸಾಹಿತ್ಯವನ್ನು ಕರಗತ ಮಾಡಿಕೊಂಡ,ಮುಂದೆ ಈ ಕಲೆ ಸಾಹಿತ್ಯಗಳಲ್ಲಿಯೇ ಸಂಗೀತ, ನೃತ್ಯ, ನಾಟಕ, ಜಾನಪದ, ಕಥೆ ಹೀಗೆ ಮೊದಲಾದವುಗಳಾಗಿ ಮಾರ್ಪಡಿಸಿದ.
ಪ್ರಪಂಚದ ನಾನಾ ಮೂಲೆಗಳಲ್ಲಿ ವಿಶಿಷ್ಟ ರೀತಿಯಲ್ಲಿ ಬೆಳವಣಿಗೆ ಹೊಂದಿದ ನಾಗರಿಕತೆಯಿಂದಾಗಿ ವಿಶಿಷ್ಟ ರೀತಿಯಲ್ಲಿ ಕಲೆ-ಸಾಹಿತ್ಯ ಬೆಳವಣಿಗೆ ಹೊಂದಿದವು, ಇವುಗಳಲ್ಲಿ ಜನಪದ ಹಾಗೂ ನಾಟಕಗಳು ಎಲ್ಲರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಇದ್ದುದರಿಂದ ಜನರಿಗೆ ಮತ್ತಷ್ಟು ಹತ್ತಿರವಾಗತೊಡಗಿದರು. ಈ ನಾಟಕಗಳು ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ಮೌಢ್ಯಗಳನ್ನು ಜನರಿಗೆ ತಿಳಿಸುವುದರ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಅನುವುಮಾಡಿಕೊಟ್ಟಿತು.
ನಾಟಕಗಳನ್ನು ಪ್ರದರ್ಶನದ ಆಧಾರದ ಮೇಲೆ ಪೌರಾಣಿಕ, ಹಾಸ್ಯ, ರಾಜಕೀಯ, ಕಾದಂಬರಿಯಾಧಾರಿತ ಹೀಗೆ ವಿವಿಧ ಪ್ರಕಾರಗಳಲ್ಲಿ ವಿಂಗಡಿಸಲಾಯಿತು ಈ ವಿಂಗಡನೆಯ ಆಧಾರದ ಮೇಲೆಯೇ ರಂಗ ಸಜ್ಜುಗೊಳಿಸುವಿಕೆ, ನಾಟಕಕಾರರ ಆಯ್ಕೆ,ಹಿನ್ನೆಲೆಸಂಗೀತ,
ಬಟ್ಟೆಬರೆಗಳು, ಸೌಂದರ್ಯವರ್ಧಕಗಳು ಭಿನ್ನವಾಗಿರುತ್ತಿದ್ದವು. ಕೆಲವು ನಾಟಕಗಳಲ್ಲಿ ಮುಖ್ಯಪಾತ್ರ ನಾಯಕನಟನದ್ದಾದರೆ ಇನ್ನು ಕೆಲವಲ್ಲಿ ನಾಯಕಿ, ಪೋಷಕರ ಪಾತ್ರ, ಅಲ್ಲೊಮ್ಮೆ ಇಲ್ಲೊಮ್ಮೆ ಬಂದು ಹೋಗುವ ಕೆಲ ಪಾತ್ರೆಗಳು ಇಡೀ ನಾಟಕದ ಸ್ವರೂಪವನ್ನೇ ಬದಲಾಯಿಸುತ್ತವೆ. ಕೆಲ ನಾಟಕಗಳು ಮೌನದಲ್ಲಿ ಸಾಗಿದರೆ ಇನ್ನು ಕೆಲವು ನಾಟಕಗಳು ರಂಗದ ಮೇಲೆ ರಣರಂಗದ ಚಿತ್ರಗಳನ್ನು ಮೂಡಿಸುತ್ತವ, ಇನ್ನು ಕೆಲವು ಭಾವನಾತ್ಮಕ ಅಥವಾ ಕಾದಂಬರಿಯಾಧಾರಿತ ನಾಟಕಗಳು ಕ್ರೌರ್ಯದಲ್ಲಿ ಮುಳುಗಿ ಪ್ರೇಕ್ಷಕರ ಮನಸ್ಸನ್ನು ಭಾರಗೊಳಿಸಿ ಕಣ್ಣೀರನ್ನು ಸುರಿಸಿದರೆ ಇನ್ನೂ ಕೆಲವು ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಲಿಸುತ್ತವೆ, ಇಷ್ಟೆಲ್ಲಾ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗುವ ನಾಟಕಗಳು ನಾಟಕಕಾರ ತನ್ನನ್ನು ನಾಟಕದೊಳಗೆ ಎಷ್ಟು ತೊಡಗಿಸಿಕೊಂಡಿದ್ದಾನೆ ಎಂಬುದನ್ನು ಒತ್ತಿಹೇಳುತ್ತದೆ.
ಹೇಗೆ ಪ್ರಪಂಚದ ನಾನಾ ರಾಷ್ಟ್ರಗಳು ರಾಜರಾಳ್ವಿಕೆಇಂದ ಕೊನೆಗೊಂಡು ಪ್ರಜಾಪ್ರಭುತ್ವ ರಾಷ್ಟ್ರಗಳಾದವೋ ಅದೇ ರೀತಿ ನಾಟಕಗಳು ಕೂಡ ಚಲನಚಿತ್ರಗಳಾಗಿ ಮಾರ್ಪಾಟುಗೊಳ್ಳುತ್ತಾ ಬಂದವು, ಮೊದಮೊದಲಿಗೆ ಈ ಚಲನಚಿತ್ರಗಳು ನಾಟಕದ ಕಂಪನಿಗಳಿಗೆ ಟೆಕ್ನಾಲಜಿಕಲ್ ರೆವಲ್ಯೂಷನ್ ನಂತೆ ಕಂಡುಬಂದರು ಮುಂದೆ ಅದು ನಾಟಕ ಕಂಪನಿಗಳಿಗೆ ಕುತ್ತುತರುತ್ತವೆ ಗ್ರಹಿಸಿರಲಿಲ್ಲ. ಈ ಟೆಕ್ನಾಲಜಿಕಲ್ ರೆವೆಲ್ಯೂಷನ್ ಮೊದಮೊದಲು ರಂಗದಮೇಲೆ ಮಾಡುತ್ತಿದ್ದಂತಹ ನಾಟಕಗಳನ್ನೇ ಚಲನಚಿತ್ರಗಳಾಗಿ ಮಾಡಲಾಗುತ್ತಿತ್ತು, ನಾಟಕದಲ್ಲಿನ ಕಲಾವಿದರೆ ಇಲ್ಲಿಯೂ ನಟಿಸಲು ಆರಂಭಿಸಿದರು. ಇಷ್ಟು ವರ್ಷ ವಿವಿಧ ಪ್ರಕಾರಗಳ ನಾಟಕವನ್ನು ನೋಡಿಕೊಂಡು ಬಂದಿದ್ದ ಅಂತಹ ಪ್ರೇಕ್ಷಕವರ್ಗ ತಾವೊಮ್ಮೆ ಚಲನಚಿತ್ರವನ್ನು ಕುಳಿತು ನೋಡಬೇಕೆಂದು ಮನಸ್ಸು ಮಾಡಿದರು, ಇದಕ್ಕೆ ಸರಿಹೊಂದುವಂತೆ ಪಟ್ಟಣದ ಉಳ್ಳವರು ಊರ ತುಂಬಾ ಪೋಸ್ಟರ್ಗಳನ್ನು ಅಂಟಿಸಿ ತಮ್ಮ ಟೆಂಟುಗಳತ್ತ ಪ್ರೇಕ್ಷಕರನ್ನು ಸೆಳೆಯಲಾರಂಭಿಸಿದರು, ಟೆಕ್ನಾಲಜಿಕಲ್ ರೆವಲ್ಯೂಷನ್ ನಲ್ಲಾದ ಈ ಬದಲಾವಣೆ ಜನರ ಮನಸ್ಸಿನಲ್ಲಿ ಕಾತುರ ಮೂಡಲಾರಂಭಿಸಿದವು ದೂರದ ಬೆಳಕಿನಿಂದ ಪರದೆಯ ಮೇಲೆ ಮೂಡುವಂತಹ ಚಿತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಕುತೂಹಲ ಕೆರಳಿಸಿದವು.
ನಾಟಕಗಳಲ್ಲಿ ಅಭಿನಯಿಸುತ್ತಿದ್ದ ನಾಟಕಕಾರರೇ ಚಲನಚಿತ್ರಗಳಲ್ಲಿಯೂ ಅಭಿನಯಿಸಲಾರಂಭಿಸಿದರು ಅಲ್ಲಿಯ ನಾಟಕಕಾರರೇ ಇಲ್ಲಿಯ Actorsಗಾಗಿ ಬದಲಾದರೂ, ನಿರ್ದೇಶಕರು Directorsಗಳಾದರು, ನಿರ್ಮಾಪಕರು producer ಗಳಾದರೂ, ವಸ್ತ್ರ ವಿನ್ಯಾಸಕಾರರು costume designerಗಳಾದರೂ, ಬಣ್ಣ ಬಳಿಯುವರು Makeupನವರಾದರೂ, ಹೀಗೆ ಪ್ರಾದೇಶಿಕ ಭಾಷೆಗಳಿಂದ ಆಂಗ್ಲ ಭಾಷೆಗಳಿಗೆ ವೃತ್ತಿಯ ಹೆಸರುಗಳು ತರ್ಜುಮೆಗೊಳ್ಳುತ್ತಾ ಚಿತ್ರರಂಗದ ಪ್ರತಿಯೊಬ್ಬರಿಗೂ ಹಿರಿಮೆ ಬಂದಂತಾಯಿತು, ಚಲನಚಿತ್ರ ಕ್ಷೇತ್ರದಲ್ಲಿ ಉದ್ಯೋಗದ ಸಂಖ್ಯೆಯು ಹೆಚ್ಚಾದ ಕಾರಣ ಕಾರ್ಮಿಕರ ಜೀವನ ಸುಧಾರಿಸತೊಡಗಿತು.
ಚಲನಚಿತ್ರಗಳು ಮುನ್ನಡೆದು ದಿನೇದಿನೇ ದಾಪುಗಾಲಿಡುತ್ತಾ ಹೊಸ ಪ್ರಯೋಗಗಳಿಗೆ ಭಾಜನವಾಯಿತು, ಕಪ್ಪು ಬಿಳುಪಿನ ಚಿತ್ರಗಳು ಹೊಸ ಕ್ಯಾಮೆರಾಗಳ ಬಳಕೆಯಿಂದಾಗಿ ರಂಗುರಂಗಿನ ಬಣ್ಣಗಳ ಮೂಲಕ ಪ್ರಜ್ವಲಿಸಲಾರಂಭಿಸಿದವು, ಆದರೆ ಇತ್ತ ನಾಟಕಗಳು ಮಾತ್ರ ನಿಧಾನವಾಗಿ ಕತ್ತಲೆಯ ದಾರಿ ಇಡಿಯಲಾರಂಭಿಸಿದವು, ಆರ್ಥಿಕ ಮುಗ್ಗಟ್ಟಿನಿಂದಾಗಿ ನಾಟಕಕಾರರಿಗೆ ಬರುವ ಹಣ ನಿರ್ವಹಣೆಗೂ ಸಾಕಾಗದೆ ಕಂಪನಿಯನ್ನು ಮುಚ್ಚಲ್ ಆರಂಭಿಸಿದರು, ಇದರಿಂದಾಗಿ ತಲೆತಲಾಂತರದಿಂದ ನಾಟಕವನ್ನು ಮಾಡಿಕೊಂಡು ಬಂದಿದ್ದ ಅಂತಹ ಮನೆತನಗಳು ತಮ್ಮ ಜೀವನ ನಿರ್ವಹಣೆಗಾಗಿ ಚಲನಚಿತ್ರದ ಹಾದಿಯನ್ನು ಇಡಿದರೆ ಇನ್ನು ಕೆಲವರು ಬೇರೆಬೇರೆ ಉದ್ಯೋಗಳಿಗೆ ಹೊರಳ ತೊಡಗಿದರು. ಇಂದು ನಾಟಕಗಳೇನೋ ಸಂಪೂರ್ಣವಾಗಿ ಅವನತಿಯನ್ನು ಹೊಂದಿಲ್ಲ ಬದಲಿಗೆ ಶಾಸ್ತ್ರೀಯವಾದ ಸುಸರ್ಜಿತ ವೇದಿಕೆಯ ಇರುವುದರಿಂದಲೇ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದೆನಿಸುತ್ತದೆ.
ಚಲನಚಿತ್ರ ಮಾಧ್ಯಮವು ಇಂದು ಒಂದು ಬಹುದೊಡ್ಡ ಕ್ಷೇತ್ರವಾಗಿ ಹೊರಹೊಮ್ಮಿದೆ ಲಕ್ಷಾಂತರ ಮಂದಿ Actors ಗಳು, ಚಿತ್ರೀಕರಣದ ಸಮಯದಲ್ಲಿ ಕಾರ್ಯನಿರ್ವಹಿಸುವಂತಹ ಕಾಯಕ ವರ್ಗ ಹೀಗೆ ಅನೇಕರು ತಮ್ಮ ಜೀವನವನ್ನು ಈ ಕ್ಷೇತ್ರಗಳಲ್ಲಿ ಕಂಡುಕೊಂಡಿದ್ದಾರೆ. ಚಲನಚಿತ್ರಗಳಿಗಾಗಿಯೇ ರಾಷ್ಟ್ರಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಚಲನಚಿತ್ರ ಮಂಡಳಿಗಳು ಕಾರ್ಯನಿರ್ವಹಿಸುತ್ತವೆ, ಇವು ಕಾಲನು ಕ್ರಮಕ್ಕೆ ಸರಿಹೊಂದುವಂತೆ ಅನೇಕ ಸುತ್ತೋಲೆಗಳನ್ನು ಹೊರಡಿಸುತ್ತವೆ.
ಪ್ರತಿವರ್ಷವೂ ರಾಷ್ಟ್ರೀಯ ಚಲನಚಿತ್ರ ಮಂಡಳಿಯ ಅತ್ಯುತ್ತಮ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಲಿದೆ. ರಾಷ್ಟ್ರ ಪ್ರಶಸ್ತಿಗೆ ಭಾಜನವಾದ ಬಹುಪಾಲು ಚಿತ್ರಗಳೆಲ್ಲವೂ ಕಲೆಗೆ ಸಂಬಂಧಪಟ್ಟದ್ದಾಗಿರುವು ನಿಜಕ್ಕೂ ಶ್ಲಾಘನೀಯ ಸಂಗತಿ. ಈ ಕಲೆಯಾದಾರಿತ ಚಿತ್ರಗಳು ಆಡಂಬರಗಳಿಗೆ, ಊಹಾಪೋಹ, ಕಲ್ಪನೆಗಳಿಗೆ ಆಸ್ಪದ ಕೊಡದೆ ನೈಜತೆಯಿಂದ ತುಂಬಿ ತುಳುಕುತ್ತಿರುತ್ತದೆ. ಬಹುಪಾಲು ನೈಜತೆಯಿಂದ ಕೂಡಿದ ಚಲನಚಿತ್ರಗಳು ಮೌನದಲ್ಲಿಯೇ ಮುಂದುವರೆಯುತ್ತ, ಸೃಜನಶೀಲತೆಯನ್ನು ಮೆರೆದು, ವಾಸ್ತವತೆಯ ಚಿತ್ರಣವನ್ನು ಮನದಲ್ಲಿ ಮೂಡಿಸುತ್ತಾ, ಮೌನದಲ್ಲಿ ಉತ್ತರವನ್ನು ಕಂಡುಕೊಳ್ಳುತ್ತಾ, ಚೈತನ್ಯಭರಿತ ಜೀವನವನ್ನು ರೂಪಿಸುತ್ತದೆ.
ಇಂದಿನ ಚಲನಚಿತ್ರಗಳಿಗೆ ಮಾರುಹೋದ ಜನತೆ ಪುಸ್ತಕಗಳನ್ನು ಓದುವುದಿಇರಲಿ ತಮ್ಮ ದಿನನಿತ್ಯದ ಕೆಲಸಗಳನ್ನು ಮುಗಿಸಿ, ಉಳಿದ ಸಮಯವನ್ನೆಲ್ಲ ಬೇಡವಾದ ವಿಷಯಗಳನ್ನು ಇತರರೊಂದಿಗೆ ಚರ್ಚಿಸುತ್ತಾ ದಿನ ಕರೆಯಲಾಗುತ್ತಿದೆ. ಈ ಬೇಡವಾದ ವಿಷಯಗಳನ್ನು ಚರ್ಚಿಸುವ ಸಮಯವನ್ನು ರಾಷ್ಟ್ರ ಪ್ರಶಸ್ತಿಗೆ ಭಾಜನವಾದ ಚಲನಚಿತ್ರಗಳನ್ನು ನೋಡುವುದಲ್ಲದೆವೇ?
ಬೇರೆ ಭಾಷೆಯ ಚಲನ ಚಿತ್ರಗಳು ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವಂತೆಯೇ ಕನ್ನಡ ಚಲನಚಿತ್ರದ ಅನೇಕ ಚಿತ್ರಗಳು ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ. ಬರ ಎಂಬ ಚಿತ್ರದಲ್ಲಿ ಒಬ್ಬ ಜಿಲ್ಲಾಧಿಕಾರಿಯು ಬೇಸಿಗೆಯ ಸಮಯದಲ್ಲಿ ಅದು ಬರದ ನಾಡಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾನೆ ಹಾಗೂ ಅವನಿಗೆ ಬಂದೊದಗಬಹುದಾದಂತಹ ಚಾಲೆಂಜರ್ಸ್ ಗಳಾದರೂ ಏನು ಎಂಬುದನ್ನು ತಿಳಿಸಿದರೆ, ಫಣಿಯಮ್ಮ ಚಿತ್ರದಲ್ಲಿ ಫಣಿಯಮ್ಮನ ಜೀವನದಲ್ಲಿ ಬಂದಂತಹ ಕಷ್ಟಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ, ತಬ್ಬಲಿಯಾದೆಯೋ ಮಗನೆ ಎಂಬ ಚಿತ್ರದಲ್ಲಿ ತಾಯಿ ಗೋಮಾತೆಯ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸಿದರೆ, ಗುಲಾಬಿ ಟಾಕೀಸ್ ಎಂಬ ಚಿತ್ರದಲ್ಲಿ ಗುಲಾಬಿ ಜೀವನ ನಿರ್ವಹಣೆಯನ್ನು ಹೇಗೆ ಮಾಡಿದಳು ಎಂದು ತೋರಿಸಲಾಗಿದೆ, ನಾಯಿಯ ನೆರಳು ಎಂಬ ಚಿತ್ರದಲ್ಲಿ ಎರಡನೇ ಮದುವೆಯಾದ ಹೆಣ್ಣಿನ ಕಷ್ಟಗಳನ್ನು ತೋರಿಸಿದರೆ, ವಂಶವೃಕ್ಷ ಚಿತ್ರ ಮನೆತನ ಬೆಳೆದು ಬಂದ ಹಾದಿಯನ್ನು, ಸಂಸ್ಕಾರ ಎಂಬ ಚಿತ್ರ ಮಡಿವಂತಿಕೆಇಂದಾದ ಅನಾಹುತವನ್ನು, ಕನಸೆಂಬ ಕುದುರೆಯನ್ನೇರಿ ಎಂಬ ಚಿತ್ರ ನಿಜ ವಾಸ್ತವದ ಕನಸನ್ನು, ಪುಟ್ಟಕ್ಕನ ಹೈವೇ ಎಂಬ ಚಿತ್ರದಲ್ಲಿ ಪುಟ್ಟಕ್ಕನ ಪರಿಶ್ರಮವನ್ನು ತೋರಿಸುತ್ತದೆ.
ಚೋಮನ ಗುಡಿ ಎಂಬ ಚಿತ್ರ ತಾನೊಂದು ತೋಟವನ್ನು ಮಾಡಬೇಕೆಂದು ಆಸೆ ಹೊಂದಿದ್ದ ದಲಿತನ ಜೀವನವನ್ನು, ಕಾಕನಕೋಟೆ ಚಿತ್ರ ಕಾನನದ ವೈಭವವನ್ನು, ದ್ವೀಪ ಚಿತ್ರ ಅಣೆಕಟ್ಟಿನ ಹಿಂಭಾಗದ ಜನರ ಜೀವನದ ಕಷ್ಟಗಳನ್ನು, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಚಿತ್ರ ಪರಿಸರದೊಂದಿಗಿನ ಹೆಣ್ಣಿನ ಜೀವನಶೈಲಿಯನ್ನು, ಬೆಟ್ಟದ ಜೀವ ಚಿತ್ರ ಪರಿಸರದೊಂದಿಗಿನ ಭಟ್ಟರ ಜೀವನಶೈಲಿಯನ್ನು, ನೇಸರ ಚಿತ್ರ ಪರಿಸರದ ಮತ್ತೊಂದು ಮಜಲನ್ನು ತೋರಿಸುತ್ತದೆ ಈ ಮೇಲೆ ತಿಳಿಸಿರುವ ಬಹಳಷ್ಟು ಚಿತ್ರಗಳು ಕಾದಂಬರಿ ಆಧಾರಿತವಾಗಿಯೇ ಇದೆ ಈ ಕಾದಂಬರಿಗಳಲ್ಲಿ ಬಹುಪಾಲು ಕಾದಂಬರಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನವಾಗಿದೆ, ಮೊನ್ನೆ ಇನ್ನೂ ತೆರೆಕಂಡ ಶಿವರಾಮ ಕಾರಂತರ ಸೃಜನಶೀಲತೆಯ ಬರವಣಿಗೆಯಿಂದ ಹೊರ ಮೂಡಿದ ಮೂಕಜ್ಜಿಯ ಕನಸುಗಳು ಚಿತ್ರ ಮೂಕಜ್ಜಿಯಲ್ಲಿ ಅಡಗಿರುವಂತೆ ಅಪಾರ ಜ್ಞಾನ ಭಂಡಾರವನ್ನು ಅರ್ಥಮಾಡಿಸಲು ಪ್ರಯತ್ನಿಸುವಂತಾಗಿದೆ, ಈ ಚಿತ್ರವನ್ನು ವೀಕ್ಷಿಸಿದಂತಹ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ತಮ್ಮ ಸುತ್ತಮುತ್ತಲು ಮೂಕಜ್ಜಿ ಇನ್ನು ವಾಸ್ತವವಾಗಿ ಇದ್ದರೆ ಎಂದೆನಿಸುತ್ತದೆ.
ಈ ಮೇಲೆ ತಿಳಿಸಿರುವಂತಹ ಚಿತ್ರಗಳು ಆಡಂಬರಗಳಿಗೆ ಆಸ್ಪದ ಕೊಡದೆ, ನೈಜತೆಯೊಂದಿಗೂಡಿ, ವಾಸ್ತವಕ್ಕೆ ಹತ್ತಿರವಾಗಿ ಹಾಗೂ ಸರ್ವಕಾಲಿಕ ಸತ್ಯವಾಗಿರುತ್ತವೆ. ನಿಸರ್ಗದ ಜೊತೆಜೊತೆಗೆ ಮೌನದಲ್ಲಿ ಕೊಂಡೊಯ್ಯುವ ಚಿತ್ರಗಳು ಆ ಮೌನದಲ್ಲಿಯೇ ಉತ್ತರವನ್ನು ತಿಳಿ ಹೇಳುತ್ತವೆ. ಜಾಲರದೊಳಗಿನ ಬಣ್ಣದ ಜಾಲದ ಜಾಡನ್ನು ಗ್ರಹಿಸಲಿಕೆ ಬಹಳಷ್ಟು ತಾಳ್ಮೆ ಬೇಕಾಗುತ್ತದೆ ತಾಳ್ಮೆ ಒಂದನ್ನು ಕಲಿತರೆ ಸಾಕು ನಾವು ಎಲ್ಲವನ್ನೂ ಸಾಧಿಸಿದಂತಾಗುತ್ತದೆ.
ಧನ್ಯವಾದಗಳು
[ ಮೇಲೆ ತಿಳಿಸಿರುವಂತಹ ಬಹಳಷ್ಟು ಚಿತ್ರಗಳು ಹಾಗೂ ಇನ್ನಷ್ಟು ಚಿತ್ರಗಳು ಯೂಟ್ಯೂಬ್ನಲ್ಲಿ ಸಿಗುತ್ತದೆ ಅವುಗಳನ್ನು ತಾಳ್ಮೆಯಿಂದ ಹುಡುಕಿ ವೀಕ್ಷಿಸಿ ಅದರ ಉಪಯೋಗವನ್ನು ಪಡೆಯಬಹುದಾಗಿದೆ]
ReplyForward |




Nice tezu tq for providing this wonderful information ❤️❤️❤️
ReplyDeleteVery nice sir super information 👌🥰
ReplyDeleteVery nice
ReplyDeleteGood one
ReplyDeletegood information
ReplyDelete