ಎಸ್. ಪಿ. ತೇಜರಾಜು
ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಪ್ರಪಂಚದ ಎಲ್ಲಾ ದೇಶಗಳು ಕರೋನಾ ವಿಷಯವಾಗಿ ಗಂಭೀರವಾದ ಚರ್ಚೆಯನ್ನು ನಡೆಸುತ್ತಿವೆ ಹಾಗೂ ಜನರಿಗೆ ಈ ವಿಷಯದ ಬಗ್ಗೆ ಅರಿವನ್ನು ಮೂಡಿಸುತ್ತಿವೆ. ಟಿವಿ ಮಾಧ್ಯಮಗಳು ಹಾಗೂ ದಿನಪತ್ರಿಕೆಗಳು ವಿಶೇಷ ಆರ್ಥಿಕ ತಜ್ಞರೊಂದಿಗೆ ಸಮಾಲೋಚಿಸಿ ಮುಂದೊದಗಬಹುದಾದ ನಷ್ಟಗಳು ಹಾಗೂ ಸವಾಲುಗಳನ್ನು ಜನರಿಗೆ ತಿಳಿಸುತ್ತಿವೆ. ಹೀಗೆ ಆರ್ಥಿಕ ಬೆಳವಣಿಗೆಗೆ ಹೆಚ್ಚು ಮಹತ್ವವನ್ನು ಕೊಡುವ ನಾವು ಇನ್ನೂ ಹೆಚ್ಚಾಗಿ ಗಮನಹರಿಸಬೇಕಾದ ಅನೇಕ ಕ್ಷೇತ್ರಗಳನ್ನು ಮೂಲೆ ಗುಂಪಾಗಿಸಿದ್ದೇವೆ. ಸೂಕ್ಷ್ಮವಾಗಿ ಗಮನಿಸುವುದಾದರೆ ಪ್ರಪಂಚದ ನಾನಾ ದೇಶಗಳಲ್ಲಿ lockdown ಅನ್ನು ಘೋಷಿಸಿರುವುದರಿಂದ ಸಾಕಷ್ಟು ಬದಲಾವಣೆಗಳು ಗೋಚರಿಸುತ್ತಿವೆ. ಪ್ರಾಣಿಗಳು ವಾಹನಗಳಿಲ್ಲದ ರಸ್ತೆಗಳಲ್ಲಿ ಸ್ವಚ್ಛಂದವಾಗಿ ನಡೆದಾಡುತಿರುವುದು, ಪಕ್ಷಿಗಳ ಕಲರವ ಇಮ್ಮಡಿ ಸಿರುವುದು,
ಹೀಗೆ ಹತ್ತು ಹಲವು ಬದಲಾವಣೆಗಳು ನಮ್ಮ ಸುತ್ತಮುತ್ತ ನಡೆಯುತ್ತೇವೆ.ಈ ರೀತಿಯ ಬದಲಾವಣೆಗಳು lockdown ಮುಗಿಯುವ ದಿನದ ತನಕ ಮುಂದುವರೆದು,ಅದಾದ ಮುಂದಿನ ದಿನದಿಂದಲೇ ಯಥಾಪ್ರಕಾರ ಆರ್ಥಿಕತೆಯ ಓಟದಲ್ಲಿ ನಾವೆಲ್ಲರೂ ಮಗ್ನರಾಗಿ ಬಿಡುತ್ತೇವೆ.
ಮಾನವನ ಹಸ್ತಕ್ಷೇಪದಿಂದಾಗಿ ಪರಿಸರದಲ್ಲಿ ಆದ ಬದಲಾವಣೆಗಳನ್ನು ನಾವು ನೋಡುವುದೇ ಆದರೆ,
1.ವಿಶ್ವದಲ್ಲಿ ಪ್ರತಿ ಸೆಕೆಂಡಿಗೆ ಒಂದು ಫುಟ್ಬಾಲ್ ಸ್ಟೇಡಿಯಂ ನಷ್ಟು ಮಳೆಕಾಡು ನಾಶವಾಗುತ್ತಿದೆ.
2.ಪ್ರತಿವರ್ಷ ವಿಶ್ವದಲ್ಲಿ ಪ್ರತಿಶತ 330 ರಿಂದ 431 ಮಿಲಿಯನ್ ಹೆಕ್ಟೇರ್ ಕಾಡು ಬೆಂಕಿಗಾಹುತಿ ಆಗುವುದರೊಂದಿಗೆ ಲಕ್ಷಾಂತರ ಪ್ರಾಣಿ-ಪಕ್ಷಿಗಳು ಜೀವ ಕಳೆದುಕೊಳ್ಳುತ್ತೇವೆ.
3.ಪ್ರತಿವರ್ಷ 15 ಬಿಲಿಯನ್ ಮರಗಳನ್ನು ಧರೆಗುರುಳಿಸಲಾಗುತ್ತಿದೆ.
4.ವಿಶ್ವದಲ್ಲಿ ಒಟ್ಟು ಎಂಟು ಲಕ್ಷ Dam ಗಳಿವೆ ಎಂದು ಅಂದಾಜಿಸಲಾಗಿದ್ದು ಅದರಲ್ಲಿ ಬಹುಪಾಲು ಕಾಡಿನಲ್ಲೇ ಇರುವುದರಿಂದ ವೈವಿಧ್ಯಮಯ ವಾದಂತಹ ಕಾಡು ನೀರಿನಲ್ಲಿ ಮುಳುಗಿಹೋಗಿದೆ ಹಾಗೂ ಈ ಡ್ಯಾಮ್ ಗಳಿಗೆ ಪ್ರತಿವರ್ಷ ಒಂದು ಪರ್ಸೆಂಟ್ ಹುಳು ಸೇರುತ್ತಿದೆ.
5.ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿ 72,337 ಕಶೇರುಕಗಳು,1,50,1581 ಅಕಶೇರುಕಗಳು, 4,22,756ಸಸ್ಯ ಪ್ರಭೇದಗಳು, 1,41,275 ಜಾತಿಯ ಶಿಲೀಂದ್ರಗಳು ಸೇರಿವೆ ಹಾಗೂ ದಿನದಿಂದ ದಿನಕ್ಕೆ ಇವುಗಳ ಸಂಖ್ಯೆ ಹೆಚ್ಚಾಗುತ್ತಿದೆ.
6.ಪ್ರಪಂಚದಲ್ಲಿ ಒಟ್ಟು ನಾಲ್ಕನೇ ಮೂರು ಭಾಗದಷ್ಟು ವೈವಿಧ್ಯಮಯವಾದ ಕೃಷಿ ಬೆಳೆಗಳು ನಾಶವಾಗಿದೆ.
7.ಪ್ರಪಂಚದಲ್ಲಿ ಪ್ರತಿವರ್ಷ 5.6 ಬಿಲಿಯನ್ ಪೌಂಡ್ ಕ್ರಿಮಿನಾಶಕವನ್ನು ಬೆಳೆಗಳಿಗೆ ಸಿಂಪಡಿಸಲಾಗುತ್ತದೆ.
8.ಪ್ರತಿವರ್ಷ 24 ಬಿಲಿಯನ್ ಟನ್ ಸಾವಯವ ಮಣ್ಣು ಸಮುದ್ರ ಸೇರುತ್ತಿದೆ.
9.ಪ್ರತಿ ನಿಮಿಷ 23 ಹೆಕ್ಟೇರ್ ಲ್ಯಾಂಡ್ ಮರುಭೂಮಿಯಾಗಿ ಪರಿವರ್ತನೆ ಆಗುತ್ತಿದೆ.
10.ಪ್ರತಿವರ್ಷ ವಿಶ್ವದಲ್ಲಿ 8 ಕೋಟಿ ಜನ ಹೆಚ್ಚಾಗುತ್ತಿದ್ದಾರೆ.
11.ಜನಸಂಖ್ಯೆ ಹೆಚ್ಚಾದಷ್ಟೂ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಾಗುತ್ತದೆ, ಇದರ ಜೊತೆಗೆ ಕೃಷಿಕರ ಗಣನೀಯ ನಗರ ವಲಸೆಯಿಂದಾಗಿ ಆಹಾರ ಉತ್ಪನ್ನಗಳ ಬೆಲೆ ಹೆಚ್ಚಾಗುತ್ತದೆ.
12.ಇಂದು ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ
79.5 ಕೋಟಿ ಜನ ಪ್ರತಿದಿನ ಒಂದು ಹೊತ್ತಿನ ಊಟ ಇಲ್ಲದೆ ಮಲಗುತ್ತಿದಾರೆ ಹಾಗೂ 200 ಕೋಟಿಗೂ ಅಧಿಕ ಜನ ಮಾಲ್ ನ್ಯೂಟ್ರಿಷಿಯನ್ ನಿಂದ ಬಳಲುತ್ತಿದ್ದಾರೆ.
13.ಅಂದಾಜಿನ ಪ್ರಕಾರ ವಿಶ್ವದ ಜನಸಂಖ್ಯೆ 2050ರ ವೇಳೆಗೆ 900 ಕೋಟಿಯನ್ನು ಬೀರಲಿದ್ದು ಕೃಷಿ ಹಾಗೂ ಕೈಗಾರಿಕೆಗಳಿಗೆ ಇರಲಿ ಕುಡಿಯುವ ನೀರಿಗೂ ಕಷ್ಟಪಡಬೇಕಾಗುತ್ತದೆ.
14.ಪ್ರತಿವರ್ಷ 35 ಬಿಲಿಯನ್ ಬ್ಯಾರೆಲ್ ಲೀಟರ್ ಪೆಟ್ರೋಲನ್ನು ಭೂಮಿಯಿಂದ ಹೊರಗೆ ತೆಗೆಯುತ್ತಿದ್ದ ಅಂದಾಜಿನ ಪ್ರಕಾರ ನಾವು 40 ಪರ್ಸೆಂಟ್ ಆಯಿಲ್ ರಿಸರ್ವ್ ಗಳನ್ನು ಮುಗಿಸಿದ್ದೇವೆ ಇನ್ನು ಮುಂದಿನ ನೂರು ವರ್ಷಗಳಲ್ಲಿ ಇವುಗಳೆಲ್ಲವೂ ಬರಿದಾಗುತ್ತದೆ.
15.ಹೆಚ್ಚು ಪೆಟ್ರೋಲಿಯಂ ಪ್ರಾಡಕ್ಟ್ ಗಳ ಬಳಕೆಯಿಂದಾಗಿ ವಾತಾವರಣದ ಶಾಖ ಹೆಚ್ಚಾಗಿ ಧ್ರುವಗಳಲ್ಲಿ ಇರುವ ಮಂಜು ಕರಗಿ ಸಮುದ್ರಮಟ್ಟ ಹೆಚ್ಚಾಗುತ್ತದೆ.
16.ಆಮ್ಲ ಮಳೆಯಿಂದಾಗಿ ಭೂಮಿ ಹಾಗೂ ಭೂಮಿಯ ರಕ್ಷಾಕವಚ ವಾಗಿರುವ ಓಜೋನ್ ಲೇಯರ್ ಹಾಳಾಗುತ್ತಿದೆ.
17. 2040 ರ ವೇಳೆಗೆ ಭೂಮಿಯ ಶಾಖ1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದ್ದು ವಾತಾವರಣದಲ್ಲಿ ಬಹಳಷ್ಟು ಅತಿವೃಷ್ಟಿ ಹಾಗು ಅನಾವೃಷ್ಟಿ ಗಳನ್ನು ಎದುರಿಸಬೇಕಾಗುತ್ತದೆ.
18.ಪ್ರತಿ ವರ್ಷ 100 ಮಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು ಅದರಲ್ಲಿ ಬಹುಭಾಗ ಸಮುದ್ರಕ್ಕೆ ಸೇರುತ್ತಿರುವುದರಿಂದ 2050ರ ವೇಳೆಗೆ ಮಾನವ ಸಮುದ್ರಕ್ಕೆ ಎಸೆದ ಪ್ಲಾಸ್ಟಿಕ್ನ ಭಾರ ಒಟ್ಟು ಸಮುದ್ರ ಜೀವಿಗಳ ಭಾರವನ್ನು ಮೀರಲಿದೆ. ಇಂತಹ ಗಂಭೀರ ವಿಷಯಗಳು ಆರ್ಥಿಕತೆಯ ಓಟದಲ್ಲಿ ಮರೆಯಾಗಿಬಿಡುತ್ತದೆ.
lock downನಿಂದ ಭಾರತದ ಪರಿಸರದಲ್ಲಿ ಆದ ಬದಲಾವಣೆಗಳನ್ನು ನೋಡುವುದಾದರೆ
1.ಗಂಗಾ ನದಿಗೆ ಸೇರುತ್ತಿದ್ದ ತ್ಯಾಜ್ಯ ನೀರು ಸಂಪೂರ್ಣವಾಗಿ ನಿಂತಿದ್ದು ಜೀವನದಿ ಗಂಗೆ ಸ್ವಚ್ಛಂದವಾಗಿ ಹರಿಯುತ್ತಿದ್ದಾಳೆ.
2.ವಾಯುಮಾಲಿನ್ಯದ ಪರಿಣಾಮದಿಂದಾಗಿ ನಾಲ್ಕು- ಐದು ದಶಕಗಳಿಂದ ಪಂಜಾಬ್ ಜನತೆಗೆ ಕಾಣಿಸದ ದೂರದ ಹಿಮಾಲಯ ಪರ್ವತ ಇಂದು ಗೋಚರಿಸುತ್ತಿದೆ.
3.ಶಬ್ದ ಮಾಲಿನ್ಯದಿಂದ ಗೂಡು ಸೇರಿದ ಪಕ್ಷಿಗಳು ಗೂಡಿನಿಂದ ಹೊರಬಂದು ಇಂಪಾದ ರಾಗವನ್ನು ಬೀರುತ್ತಿವೆ.
ಹೀಗೆ ನೂರಾರು ಬದಲಾವಣೆಗಳು ನಮ್ಮ ಸುತ್ತಮುತ್ತ ನಡೆಯುತ್ತಿದೆ.
ಲಾಕ್ಡೌನ್ ಮುಗಿದ ದಿನದಿಂದ ಜಗತ್ತಿನ ಆರ್ಥಿಕತೆಯ ಓಟದಲ್ಲಿ ಸಂಪೂರ್ಣ ಮಗ್ನರಾಗುವ ನಾವು ಹಣ ಸಂಪಾದನೆಗೆ ಹೆಚ್ಚು ಮಹತ್ವವನ್ನು ಕೊಡುತ್ತೇವೆ, ನಿಜ ಪ್ರತಿಯೊಬ್ಬರೂ ಹಣ ಸಂಪಾದನೆ ಮಾಡುವುದೇ ಈ ಜಗತ್ತಿನ ಅನಿವಾರ್ಯತೆಯಾಗಿದೆ.ಹಣಕ್ಕೆ ಮಹತ್ವ ಕೊಡುವುದರ ಜೊತೆಗೆ ಪರಿಸರದ ಬಗ್ಗೆಯೂ ಕೂಡ ಕಾಳಜಿಯನ್ನು ವಹಿಸುವುದರಿಂದ ಇಡೀ ಪ್ರಪಂಚವು ಸುಬಿಕ್ಷವಾಗಿರುತ್ತದೆ.
ಇದಕ್ಕಾಗಿ ನಾವೆಲ್ಲರೂ ಮಾಡಬೇಕಾಗಿರುವ ಕಾರ್ಯಗಳೆಂದರೆ
1.ಹೆಚ್ಚು ಕಾಡುಗಳನ್ನು ಬೆಳೆಸುವುದರಿಂದ ಪರಿಸರದ ಸಮತೋಲನವನ್ನು ಕಾಪಾಡಬಹುದಾಗಿದೆ.
2.ಪರಿಸರ ಸಮತೋಲನದಿಂದ ಜೀವವೈವಿದ್ಯ ಸಮೃದ್ಧವಾಗಿರುತ್ತದೆ.
3.ಕಾಡನ್ನು ಬೆಳೆಸುವುದರಿಂದ ವಾತಾವರಣದಲ್ಲಿ ಇಂಗಾಲಾಮ್ಲ ಕಡಿಮೆಯಾಗಿ ಭೂಮಿಯ ಶಾಖ ಕಡಿಮೆಯಾಗುತ್ತದೆ.
4.ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ಭೂಮಿ ಹೆಚ್ಚು ಫಲವತ್ತಾಗಿ ಹೆಚ್ಚು ಇಳುವರಿಯನ್ನು ಪಡೆಯಬಹುದಾಗಿದೆ.
5.ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದರಿಂದ ಜನರಿಗೆ ಹೆಚ್ಚು ಪೌಷ್ಠಿಕಾಂಶವುಳ್ಳ ಆಹಾರ ದೊರೆಯುತ್ತದೆ.
6.ಸಾವಯುವ ಕೃಷಿಯಿಂದಾಗಿ ಮಳೆ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ.
7.ಪೌಷ್ಟಿಕ ಆಹಾರ ಸೇವನೆಯಿಂದ ಜನರ ಆರೋಗ್ಯ ಮಟ್ಟ ಸುಧಾರಿಸುತ್ತದೆ.
8.ಜನರ ಆರೋಗ್ಯ ಚೆನ್ನಾಗಿದ್ದರೆ ಸರ್ಕಾರ ಆರೋಗ್ಯ ಇಲಾಖೆಗೆ ವ್ಯಾಹಿಸಬಹುದಾದ ಹಣವು ಕೂಡ ಕಡಿಮೆಯಾಗುತ್ತದೆ.
9.ಜನರ ಆರೋಗ್ಯ ಚೆನ್ನಾಗಿದ್ದರೆ ದೇಶದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
10.ಜನರ ಆರೋಗ್ಯ ಚೆನ್ನಾಗಿದ್ದರೆ ಉತ್ಪಾದಕತೆಯ ಗುಣಮಟ್ಟ ಕೂಡ ಹೆಚ್ಚಾಗಲಿದ್ದು ದೇಶದ ಖಜಾನೆಗೆ ಹೆಚ್ಚು ಹಣ ಸೇರುವುದರಿಂದ ದೇಶ ಸುಭಿಕ್ಷ ವಾಗಿರುತ್ತದೆ.
ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂದು ಎಲ್ಲರೂ ದೃಢ ಸಂಕಲ್ಪವನ್ನು ಮಾಡುವುದರಿಂದ, ನಾವು ನಮ್ಮವರು, ನಮ್ಮ ರಾಷ್ಟ್ರ, ನಮ್ಮ ವಿಶ್ವ ಹೀಗೆ ಎಲ್ಲವೂ ಸುಭಿಕ್ಷವಾಗಿ ಇರುತ್ತದೆ.
"ಪರಿಸರವನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ".
( source : different news papers, journals, Magazines, internet source and many international reports)
No comments:
Post a Comment